ಬೆಂಗಳೂರು : ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಜನವರಿ 26 (Vasishta Simha and Haripriya) ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ (Mysore) ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನೆರವೇರಿದ್ದು, ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಮದುವೆಯಲ್ಲಿ ಭಾಗಿಯಾಗಿದ್ದರು.
ಸಾಂಪ್ರದಾಯಿಕವಾಗಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. (vasishta simha wife) ತಮ್ಮ ನೆಚ್ಚಿನ ಆಶ್ರಮದಲ್ಲೇ ಮದುವೆಯಾಗಬೇಕು ಎನ್ನುವುದು ಅವರ ಕನಸಾಗಿತ್ತು. ಜನವರಿ 28ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಟಿ ಹರಿಪ್ರಿಯಾ ಅವರು 2007ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂದಿನಿಂದ ತಾವು ನಟಿಸಿದ ಸಿನಿಮಾಗಳಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಇದನ್ನೂ ಓದಿ:Vasishta Simha and Haripriya: ಇಂದು ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದ ಫೋಟೋ ಇಲ್ಲಿದೆ
ಸಿಂಹಪ್ರಿಯಾ ಸಿಕ್ರೆಟ್ ಲವ್ ಸ್ಟೋರಿ ಏನು?
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಯೂಟ್ ವಿಡಿಯೊ ಹಂಚಿಕೊಂಡು, ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು ಹರಿಪ್ರಿಯಾ. “”ನಮ್ಮ ಮನೆಯಲ್ಲಿ ಈಗಾಗಲೇ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಲಕ್ಕಿ ಸತ್ತ ನಂತರ ಹ್ಯಾಪಿಗಾಗಿ ಮತ್ತೊಂದು ನಾಯಿಯನ್ನು ತಂದುಕೊಟ್ಟಿದ್ದರಂತೆ ವಸಿಷ್ಠ. ಅದರ ಹೆಸರು ಕ್ರಿಸ್ಟಲ್. ಆದರೆ ಈ ಕ್ರಿಸ್ಟಲ್ ನಾಯಿ ಹ್ಯಾಪಿ ನಾಯಿಯ ಆಟದ ಸಾಮಾನುಗಳೊಂದಿಗೆ ಆಡುತ್ತಿತ್ತು. ಆದರೆ ಹ್ಯಾಪಿ ನಾಯಿ ಮರಿ ಇದನ್ನು ಒಪ್ಪುತ್ತಿರಲಿಲ್ಲ. ಯಾವಾಗಲೂ ಕ್ರಿಸ್ಟಲ್ ಜತೆ ಜಗಳ ಮಾಡ್ತಿತ್ತು. ನಂತರ ಹ್ಯಾಪಿಗೆ ಕ್ರಿಸ್ಟಲ್ ನೋಡಿ ಲಕ್ಕಿ ಅಂತ ಅನಿಸಿ ಇಬ್ಬರೂ ಜಗಳ ಮಾಡೋದನ್ನೇ ನಿಲ್ಲಿಸಿದ್ದರು. ಕ್ರಿಸ್ಟಲ್ ನೋಡೋ ರೀತಿ, ಆಡುವ ರೀತಿ ತುಂಬಾನೇ ಮುದ್ದು. ಯಾರು ಬೇಕಾದರೂ ಅದನ್ನ ಫ್ರೆಂಡ್‌ಶಿಪ್ ಮಾಡಿಕೊಳ್ಳುತ್ತಾರೆ. ಅದು ಯಾರನ್ನು ಬೇಕಾದರೂ ಮೋಡಿ ಮಾಡುತ್ತೆ. ಸಿಂಹ ಅವರು ನನಗೆ ಕ್ರಿಸ್ಟಲ್ ಗಿಫ್ಟ್ ಮಾಡಿದಾಗ ಅದು ಒಂದು ಸಿಕ್ರೇಟ್ ತಂದಿತ್ತು. ಕ್ರಿಸ್ಟಲ್ ಹೊಟ್ಟೆ ಮೇಲೆ ಹಾರ್ಟ್ ಶೇಪ್ ಬರ್ತ್ ಮಾರ್ಕ್ ಇತ್ತು. ಈ ಮಾರ್ಕ್ ಬೆಳೀತಾ ಬೆಳೀತಾ ನನ್ನ ಹಾಗೂ ವಸಿಷ್ಠ ಸಿಂಹ ನಡುವಿನ ಫ್ರೆಂಢ್‌ಶಿಪ್ ಕೂಡ ಬೆಳೀತು. ಇಬ್ಬರ ನಡುವೆ ಪ್ರೀತಿನೂ ಬೆಳೀತು. ಕ್ರಿಸ್ಟಲ್ ನಮ್ಮ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆʼʼ ಎಂದು ಹರಿಪ್ರಿಯಾ ಮನೋಜ್ಞವಾಗಿ ಹೇಳಿಕೊಂಡಿದ್ದಾರೆ. ಈ ಕ್ರಿಸ್ಟಲ್ ಕಾರಣಕ್ಕಾಗಿಯೇ ಹರಿಪ್ರಿಯಾಗೆ ವಸಿಷ್ಠ ಮೇಲೆ ಪ್ರೇಮ ಮೂಡಿತು ಎನ್ನುವುದು ಈ ಸಂದೇಶದ ಸಾರ.
ಇದನ್ನೂ ಓದಿ: Vasishta Simha and Haripriya: ನಾಳೆ ಮೈಸೂರಿನಲ್ಲಿ ನಡೆಯಲಿದೆ ಸಿಂಹಪ್ರಿಯಾ ಮದುವೆ!
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ (vasishta simha marriage) ಜತೆಯಾಗಿ ತೆಲುಗಿನ ‘ಎವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ಸಿನಿಮಾದಲ್ಲೇ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿತ್ತು.