Site icon Vistara News

ವಸಿಷ್ಠ ಸಿಂಹ ಲವ್‌ಲಿ ಸಿನಿಮಾ: ಜೋಡಿ ಆದ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್

ಲವ್‌ಲಿ

ಬೆಂಗಳೂರು : ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ನಟ ವಸಿಷ್ಠ ಸಿಂಹ ಅವರು ನಟನೆ ಅಂತ ಬಂದರೆ ರೋಸ್ ಹಿಡಿದು ಹೀರೋ ಆಗೋಕು ರೆಡಿ. ಹಾಗೇ ಲಾಂಗ್ ಹಿಡಿದು ವಿಲನ್ ಆಗೋಕೂ ಸೈ. ಅಷ್ಟೇ ಅಲ್ಲ ಗಾಯನಕ್ಕೂ ಸೈ ಎನಿಸಿಕೊಂಡಿರುವ ಕಂಚಿನ ಕಂಠದ ನಟ.

ಶಿವಣ್ಣನ ಜತೆ ಟಗರುನಲ್ಲಿ ಚಿಟ್ಟೆಯಾಗಿ ಮಿಂಚಿದ ವಸಿಷ್ಠ ಸಿಂಹ ಸ್ಟೈಲಿಶ್ ಲುಕ್ ನಲ್ಲಿ ʻಲವ್‌ಲಿʼಯಾಗಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ವಸಿಷ್ಠ ನಾಯಕ ನಟನಾಗಿ ನಟಿಸುತ್ತಿರುವ ‘ಲವ್‌ಲಿ’ ಸೆಟ್ಟೇರಿ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಅಪ್ ಡೇಟ್‌ಗಳು ಕೂಡ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ | ಇದು ಜಾಲಿ ಡೇಸ್‌ ಅಲ್ಲ ಡಾಲಿ ಡೇಸ್‌!

ಈ ಚಿತ್ರಕ್ಕೆ ವಸಿಷ್ಠ ಸಿಂಹ ಜತೆ ತೆರೆ ಹಂಚಿಕೊಳ್ಳುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿತ್ತು. ವಸಿಷ್ಠ ಸಿಂಹನಿಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ಆಯ್ಕೆಯಾಗಿದ್ದಾರೆ. ಹಿಂದಿ, ಕೊರಿಯನ್, ತಮಿಳು ಭಾಷೆಗಳ ಸಿನಿಮಾ ಮತ್ತು ವೆಬ್ ಸಿರೀಸ್‌ಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್‌ಗೆ ಇದು ಮೊದಲ ಕನ್ನಡ ಸಿನಿಮಾ. ಈಗಾಗಲೇ ಸ್ಟೆಫಿ ಪಟೇಲ್ ‘ಲವ್‌ಲಿ’ ಚಿತ್ರತಂಡ ಸೇರಿಕೊಂಡಿದ್ದು ಜುಲೈ 19ರಿಂದ ಚಿತ್ರದ ಸೆಕೆಂಡ್ ಶೆಡ್ಯೂಲ್ ಆರಂಭವಾಗಲಿದೆ.

‘ಲವ್‌ಲಿ’ ಚಿತ್ರಕ್ಕೆ ಚೇತನ್ ಕೇಶವ್ ನಿರ್ದೇಶಕರಾಗಿದ್ದಾರೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು, ರೌಡಿಸಂ ಕಥಾಹಂದರವೂ ಚಿತ್ರದಲ್ಲಿದೆ. ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ‘ಲವ್‌ಲಿ’ ಚಿತ್ರಕ್ಕಿದೆ.

ಇದನ್ನೂ ಓದಿ | HIT: The First Case | ಹಿಟ್: ದಿ ಫಸ್ಟ್ ಕೇಸ್‌ ಸಿನಿಮಾ ಕಳಪೆ ಪ್ರದರ್ಶನ: ಮೊದಲ ದಿನದ ಕಲೆಕ್ಷನ್‌ ಎಷ್ಟು?

Exit mobile version