Site icon Vistara News

Vedha Movie | ಹ್ಯಾಟ್ರಿಕ್‌ ಹೀರೊ 125ನೇ ಚಿತ್ರದ ಮೋಷನ್‌ ಪೋಸ್ಟರ್‌ ರಿವೀಲ್‌

Vedha Movie

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅವರ 125ನೇ ಚಿತ್ರ ಸಿನಿಮಾ ʼವೇದʼ (Vedha Movie) ಇದೀಗ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದೆ. ಈ ಹಿಂದೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ ಎ.ಹರ್ಷ ಹಾಗೂ ಶಿವಣ್ಣನ ಕಾಂಬಿನೇಶನ್ ವೇದ ಚಿತ್ರದಲ್ಲೂ ಕಮಾಲ್‌ ಮಾಡುವುದಕ್ಕೆ ಸಜ್ಜಾಗಿದೆ.

ವಿಶೇಷ ಅಂದರೆ ಗೀತಾ ಶಿವರಾಜ್ ಕುಮಾರ್ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಅತೀ ಶೀಘ್ರದಲ್ಲಿ ಟೀಸರ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಶಿವರಾಜ್‌ಕುಮಾರ್‌ ಅಭಿಮಾನಿಗಳಿಗೆ ಶುಭಗಳಿಗೆ ಬಂದಾಗಿದೆ.

ಇದನ್ನೂ ಓದಿ | ಶಿವಣ್ಣ ಹುಟ್ಟುಹಬ್ಬಕ್ಕೂ ಮುನ್ನ ಬೈರಾಗಿ ರಿಲೀಸ್, 123ನೇ ಸಿನಿಮಾ ನೋಡಲು ಅಭಿಮಾನಿಗಳ ಕಾತರ

ಜೂನ್ 22ರ ಸಂಜೆ ನಡೆಯಲಿದೆ ಅದ್ದೂರಿ ಕಾರ್ಯಕ್ರಮ

ವೇದ ಸಿನಿಮಾದ ಟೀಸರ್ ಬಿಡುಗಡೆ ಜತೆ ಶಿವಣ್ಣ ಅವರ ಪತ್ನಿ ಗೀತಾ ಅವರ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಅಂದಹಾಗೆ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ದಂಡು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಶಿವಣ್ಣ, ರವಿಚಂದ್ರನ್, ಸುದೀಪ್ ಸೇರಿದಂತೆ ಹಲವು ಕಲಾವಿದರ ಸಮಾಗಮ ಆಗಲಿರುವ ಈ ವಿಶೇಷ ದಿನ ದೊಡ್ಮನೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಲಿದೆ.

ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಎಂಟ್ರಿ

1986ರಲ್ಲಿ ಆನಂದ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ಶಿವಣ್ಣ. ಆನಂದ್‌ ಚಿತ್ರದ ಯಶಸ್ಸಿನ ನಂತರ ಒಂದೊಂದೇ ಚಿತ್ರಗಳು ತೆರೆ ಕಂಡವು. ರಥಸಪ್ತಮಿ, ನಮ್ಮೂರ ಮಂದಾರ ಹೂವೇ, ಜನುಮದ ಜೋಡಿ, ವಜ್ರಕಾಯ, ಕಿಲ್ಲಿಂಗ್‌ ವಿರಪ್ಪನ್‌, ಟಗರು, ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ, ಇದೀಗ 125ನೇ ಚಿತ್ರಕ್ಕೆ ಕಾಲಿಟ್ಟಿದ್ದಾರೆ ಶಿವಣ್ಣ.

ನಾಯಕನೂ ಹೌದು, ಗಾಯಕನೂ ಹೌದು

ಶಿವಣ್ಣ ನಟ ಹಾಗೂ ಗಾಯಕರೂ ಆಗಿದ್ದಾರೆ. ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್‌, ಸಾರ್ವಭೌಮ, ಅಭಯಹಸ್ತ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

ಇದನ್ನೂ ಓದಿ | ರಜನಿಕಾಂತ್​, ಶಿವಣ್ಣ ಸಿನಿಮಾದ ಪೋಸ್ಟರ್​ ರಿಲೀಸ್, ಜೈಲರ್​ ಆಗಿ ಆರ್ಭಟಿಸಲಿದ್ದಾರೆ ಸೂಪರ್​ಸ್ಟಾರ್‌

ಪ್ರಶಸ್ತಿಗಳ ಸರದಾರ ಶಿವಣ್ಣ

ಇಷ್ಟೂ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಶಿವಣ್ಣ ನೀಡಿರುವ ಕೊಡುಗೆ ಅಪಾರ. ಉಪೇಂದ್ರ ನಿರ್ದೇಶನದ ಓಂ ಚಿತ್ರದ ಮೂಲಕ 1995ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹವಾ ಸೃಷ್ಟಿ ಮಾಡಿದರು ಹ್ಯಾಟ್ರಿಕ್‌ ಹೀರೊ ಶಿವಣ್ಣ. ಓಂ ಚಿತ್ರಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಹಾಗೂ 1999ರಲ್ಲಿ ಹೃದಯ ಹೃದಯ ಮೂವಿಗೆ ಅತ್ಯುತ್ತಮ ನಟ ಮತ್ತು 2003-2006ರಲ್ಲಿ ಚಿಗುರಿದ ಕನಸು, ಜೋಗಿ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡಿದೆ.

ಶಿವಣ್ಣನ ಬತ್ತಳಿಕೆಯಲ್ಲಿ ಇವೆ ಹಲವು ಚಿತ್ರಗಳು

ಶಿವರಾಜ್‌ಕುಮಾರ್‌ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಅದರಲ್ಲಿ ಭಜರಂಗಿ 2, ವೇದ, ಹೆಸರಿಡದ ವಿಜಯ್‌ ಮಿಲ್ಟನ್‌ ನಿರ್ದೇಶನದ 123ನೇ ಚಿತ್ರ, ರಿಷಭ್‌ ಶೆಟ್ಟಿ ಅವರೊಂದಿಗೆ ಹೊಸ ಚಿತ್ರಕ್ಕೂ ಕೈ ಜೋಡಿಸಲಿದ್ದಾರೆ.

ಇದನ್ನೂ ಓದಿ | ಶಿರಸಿಯಲ್ಲಿ ಶಿವಣ್ಣ: 25 ವರ್ಷ ಬಳಿಕ ನಮ್ಮೂರ ಮಂದಾರ ಹೂವೇ ನೆನಪು

Exit mobile version