Site icon Vistara News

Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ಟೀಸರ್‌ ಔಟ್‌!

Vedha Movie

ಬೆಂಗಳೂರು: ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ 125ನೇ ಸಿನಿಮಾ ವೇದ ಟೀಸರ್‌ (Vedha Movie) ನವೆಂಬರ್‌ 11ರಂದು ಬಿಡುಗಡೆಗೊಂಡಿದೆ. ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರು ಗಾಂಧಿನಗರದಲ್ಲಿ ಡಾ. ರಾಜ್‌ಕುಮಾರ್‌ ಪ್ರತಿಮೆ ಎದುರು LED ಸ್ಕ್ರೀನ್‌ ಮೂಲಕ ಬಿಡುಗಡೆಗೊಳಿಸಿದ್ದಾರೆ. ಜತೆಗೆ ಚಿತ್ರತಂಡ ಕಟೌಟ್ ಅನಾವರಣಗೊಳಿಸಿದೆ. ಸಿನಿಮಾ ಡಿಸೆಂಬರ್‌ 23ರಂದು ಬಿಡುಗಡೆಯಾಗುತ್ತಿದೆ. ʻವೇದʼ ಸಿನಿಮಾ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿ ಬರುತ್ತಿದೆ. ನಿರ್ದೇಶಕ ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.

ಈ ಚಿತ್ರಕ್ಕೆ ಜೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ. ವೇದ ಚಿತ್ರ 1960ರ ದಶಕದಲ್ಲಿ ನಡೆಯುವ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಇದನ್ನೂ ಓದಿ | Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್‌

ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಹಾಡಿಗೆ ಹಿನ್ನೆಲೆ ಧ್ವನಿ ನೀಡಲು ದೊಡ್ಡ ಕಲಾವಿದರೊಂದಿಗೆ ಚರ್ಚಿಸುತ್ತಿದ್ದಾರೆ, ಹಾಡಿನ ರೆಕಾರ್ಡಿಂಗ್ ಪೂರ್ಣಗೊಳಿಸಿದ ನಂತರ ಅದರ ವಿವರಗಳನ್ನು ಬಹಿರಂಗಪಡಿಸಲು ತಂಡವು ಯೋಜಿಸುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ರಿಲೀಸ್‌ ಡೇಟ್‌ ಅನೌನ್ಸ್‌

Exit mobile version