Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ರಿಲೀಸ್‌ ಡೇಟ್‌ ಅನೌನ್ಸ್‌ - Vistara News

ಸಿನಿಮಾ

Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ರಿಲೀಸ್‌ ಡೇಟ್‌ ಅನೌನ್ಸ್‌

ಶಿವರಾಜ್‌ಕುಮಾರ್‌ ನಟನೆಯ ʻವೇದʼ (Vedha Movie) ಸಿನಿಮಾದ ಬಿಡುಗಡೆಯ ದಿನಾಂಕ ರಿವೀಲ್‌ ಆಗಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ ಇದಾಗಿದೆ.

VISTARANEWS.COM


on

Vedha Movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ನಟನೆಯ ʻವೇದʼ (Vedha Movie) ಸಿನಿಮಾದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಈ ಹಿಂದೆ ಅಷ್ಟೇ ಸಿನಿಮಾ ತಂಡ ಪೋಸ್ಟರ್‌ ರಿವೀಲ್‌ ಮಾಡಿತ್ತು. ನಿರ್ದೇಶಕ ಎ. ಹರ್ಷ ಈಗ ಮತ್ತೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಮಹಿಳಾ ಪಾತ್ರಗಳ ಪರಿಚಯವೂ ಆಗಿದೆ. ವೇದ ಸಿನಿಮಾ ಇದೇ ನವೆಂಬರ್‌ 23ರಂದು ಬಿಡುಗಡೆಗೊಳ್ಳುತ್ತಿದೆ.

ʻವೇದʼ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿ ಬರುತ್ತಿದ್ದು, ಶಿವರಾಜ್‌ ಕುಮಾರ್‌ ಅಭಿನಯದ 125ನೇ ಸಿನಿಮಾ ಆಗಿದೆ. ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ನಾಲ್ಕನೇ ಸಿನಿಮಾ ಇದಾಗಿದೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್‌ ರಿಲೀಸ್‌

ಶಿವರಾಜ್‌ಕುಮಾರ್‌ ಜನ್ಮದಿನದಂದು ಚಿತ್ರದ ಟೀಸರ್‌ ಬಿಡುಗಡೆಗೊಳಿಸಲಾಗಿತ್ತು. ಈ ಚಿತ್ರಕ್ಕೆ ಜೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯಾ ಸಂಗೀತ ಚಿತ್ರಕ್ಕಿದೆ. ವೇದ ಚಿತ್ರ 1960ರ ದಶಕದಲ್ಲಿ ನಡೆಯುವ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ ನಟನೆಯ ವೇದ ಕ್ರಿಸ್‌ಮಸ್‌ಗೆ ತೆರೆಗೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Koti Movie: ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾ ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗಲಿದೆ ಎಂದು ನಟ ಡಾಲಿ ಧನಂಜಯ್‌ ಹೇಳಿದ್ದಾರೆ.

VISTARANEWS.COM


on

Koti Movie
Koo

ಬೆಂಗಳೂರು: ಡಾಲಿ ಧನಂಜಯ್ ನಟನೆಯ ʼಕೋಟಿʼ (Koti Movie) ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ನಗರದಲ್ಲಿ ಬುಧವಾರ ರಿಲೀಸ್ ಮಾಡಿದ್ದು, ಟ್ರೈಲರ್‌ ಬಗ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಮೇಶ್ ಗುಂಡಕಲ್ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ.

ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಪರಮೇಶ್ ಗುಂಡಕಲ್ ಮಾತನಾಡಿ, ಇದು ದುಡ್ಡಿನ ಸುತ್ತ ಸುತ್ತುವ ಕತೆ, ಕಥೆ ಏನು ಅನ್ನೋದನ್ನ ಸಿನಿಮಾ ನೋಡಿ. ಚಿಕ್ಕಂದಿನಲ್ಲಿ ಕಷ್ಟದ ದಿನಗಳನ್ನು ನೋಡಿದ್ದೇನೆ. ಆ ಸಂದರ್ಭದಲ್ಲಿ ಜಾತ್ರೆಯಲ್ಲಿ ರಸ್ತೆಯಲ್ಲಿ 500 ರೂ. ಸಿಕ್ಕಿತ್ತು. ಅದು ಆ ಟೈಮ್‌ಗೆ ತುಂಬಾನೇ ದೊಡ್ಡದು. ಈಗ ಎಷ್ಟು ದುಡಿದಿದ್ದೇನೆ, ಎಲ್ಲಾ ಸಿಕ್ಕಿದೆ. ಆದರೂ ಆ 500 ರೂಪಾಯಿ ಮುಂದೆ ಏನೂ ಅಲ್ಲ ಎಂದು ಹೇಳಿದರು.

ನಟ ಡಾಲಿ ಧನಂಜಯ್ (Daali Dhananjaya) ಮಾತನಾಡಿ, ಸೌತ್‌ನಿಂದ ಮುಂಬೈವರೆಗೂ ಹುಡುಕಿದರೂ ಈ ತರ ಗುಂಡಿಗೆ ಇರೋ ಹುಡುಗ ಸಿಗಲ್ಲ. ಹೊಸ ಪಾತ್ರ, ಹೊಸ ಕಥೆ ಹುಡುಕುತ್ತಲೇ ಇರುತ್ತೇವೆ. ಆ ತರ ಇಷ್ಟವಾದ ಕತೆ ಕೋಟಿ, ಅದಕ್ಕೆ ಈ ಚಿತ್ರದಲ್ಲಿ ನಟಿಸಲು ಒಪಿಕೊಂಡೆ. ಮಿಡ್ಲ್ ಕ್ಲಾಸ್ ಫ್ಯಾಮಿಲಿಗೆ ಕನೆಕ್ಟ್ ಆಗೋ ಸಿನಿಮಾ ಇದಾಗಿದ್ದು, ಜತೆಗೆ ಎಲ್ಲರಿಗೂ ಕನೆಕ್ಟ್ ಆಗುತ್ತೆ. ಚಿತ್ರರಂಗದ ಸದ್ಯದ ಸ್ಥಿತಿಯ ಬಗ್ಗೆ ಗೊತ್ತು, ಕೋಟಿ ಮೂಲಕ ಈ ಫೇಸ್ ಪಾಸ್ ಆಗಲಿ ಎಂದು ತಿಳಿಸಿದರು.

ಇದನ್ನೂ ಓದಿ | Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

ಮದುವೆ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿ, ಕೋಟಿ ಸಿನಿಮಾ ಚೆನ್ನಾಗಿ ಹಿಟ್ ಆಗಲಿ, ಪಕ್ಕಾ ಮದುವೆ ಆಗುತ್ತೆ. ತಾರಾ ಅಮ್ಮಗೆ ಮಾತು ಕೊಟ್ಟಿರುವ ಹಾಗೆ ಮದುವೆ ಆಗುತ್ತೆ ಎಂದು ನಟ ಡಾಲಿ ಧನಂಜಯ್‌ ಹೇಳಿದರು.

ಕೋಟಿ ಕನ್ನಡದಲ್ಲಿ ಜಿಯೋ ಸ್ಟುಡಿಯೋಸ್ ಚೊಚ್ಚಲ ನಿರ್ಮಾಣವಾಗಿದ್ದು, ನಿರ್ದೇಶಕ ಪರಮ್ ಅವರ ನೇತೃತ್ವದಲ್ಲಿ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ ಫ್ಯಾಮಿಲಿ ಡ್ರಾಮಾ ಥ್ರಿಲ್ಲರ್ ಚಿತ್ರವಾಗಿದೆ. ನಟರಾಕ್ಷಸ ಡಾಲಿ ಧನಂಜಯ, ರಮೇಶ್ ಇಂದಿರಾ, ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಪರಮ್ ಬರವಣಿಗೆ ಸಾರಥ್ಯದ ಕೋಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಟೀಸರ್ ಹಾಗೂ ಹಾಡುಗಳು ಹಿಟ್ ಲೀಸ್ಟ್ ಸೇರಿದ್ದು,, ಜೂನ್ 14 ರಿಂದ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ | Dolly Dhananjay: ಡಾಲಿ ಧನಂಜಯ್‌ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್‌!

ಹೊಯ್ಸಳʼ ಚಿತ್ರ ಬಿಡುಗಡೆಯಾದ ಒಂದು ವರ್ಷದ ಬಳಿಕ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ನಟ ರಾಕ್ಷಸ ಎಂದು ಬಿರುದು ಪಡೆದಿರುವ ಡಾಲಿ ಅವರ ವೃತ್ತಿ ಜೀವನದಲ್ಲಿ ಇದೊಂದು ಮೈಲುಗಲ್ಲು ಆಗಬಹುದಾದ ಸಿನಿಮಾ ಎಂಬ ಅಭಿಪ್ರಾಯ ಈಗಾಗಲೇ ಬಂದಿರುವುದು ಸಿನಿಮಾದ ಕುರಿತು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

Continue Reading

ಕರ್ನಾಟಕ

Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

Kannada New Movie: ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ಬಹು ನಿರೀಕ್ಷೆಯ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಮಾಸ್ ಆಕ್ಷನ್ ʼಆಪರೇಷನ್ ಲಂಡನ್ ಕೆಫೆʼ ಚಿತ್ರ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ತಿಳಿಸಿದ್ದಾರೆ.

VISTARANEWS.COM


on

Operation London Cafe movie will be released very soon
Koo

ಬೆಂಗಳೂರು: ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ಬಹು ನಿರೀಕ್ಷೆಯ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಮಾಸ್ ಆಕ್ಷನ್ ‘ಆಪರೇಷನ್ ಲಂಡನ್ ಕೆಫೆ’ ಚಿತ್ರ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆದಷ್ಟು ಬೇಗ ಚಿತ್ರವನ್ನು (Kannada New Movie) ಪ್ರೇಕ್ಷಕರ ಮುಂದೆ ತರುವುದಾಗಿ ನಿರ್ದೇಶಕ ಸಡಗರ ರಾಘವೇಂದ್ರ ತಿಳಿಸಿದ್ದಾರೆ.

ಕವೀಶ್ ಮತ್ತು ಮೇಘಾ ಶೆಟ್ಟಿ ಜತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ. ವಿರಾಟ್ ಮಡಕೆ ಪ್ರಸಾದ್ ಕಾಂಡೇಕರ್ ಹಾಗೂ ಕನ್ನಡದ ಅರ್ಜುನ್ ಕಾಪಿಕಾಡ್, ಬಿ ಸುರೇಶ್, ಕೃಷ್ಣ ಹೆಬ್ಬಾಳೆ, ಧರ್ಮೇಂದ್ರ ಅರಸ್, ನೀನಾಸಂ ಅಶ್ವತ್ ಮುಂತಾದ ಹೆಸರಾಂತ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಯುವ ಸಂಗೀತ ನಿರ್ದೇಶಕ ಪ್ರಾನ್ಶು ಝಾ ಸಂಗೀತವಿರುವ ಈ ಚಿತ್ರಕ್ಕೆ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರ ಜತೆಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ ಅನುಭವವಿರುವ ಡಿ. ನಾಗಾರ್ಜುನ್ ಛಾಯಾಗ್ರಹಣವಿದೆ.

ಇದನ್ನೂ ಓದಿ: Virat Kohli: ಬೌಂಡರಿ ಮೂಲಕ ವಿಶ್ವ ದಾಖಲೆ ಬರೆಯಲು ಸಜ್ಜಾದ ಕಿಂಗ್​ ಕೊಹ್ಲಿ

ಕಲಾ ನಿರ್ದೇಶಕ ವರದರಾಜ್ ಕಾಮತ್, ಕೆ. ಎಂ. ಪ್ರಕಾಶ್ ಸಂಕಲನದ ಜತೆಯಲ್ಲಿ ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯ ಮತ್ತು ವಿಕ್ರಂ ಮೊರ್, ಅರ್ಜುನ್ ಮತ್ತು ಮಾಸ್ ಮಾದ ವಿಶೇಷವಾಗಿ ಸಂಯೋಜಿಸಿದ ಸಾಹಸವಿದೆ.

ಇದನ್ನೂ ಓದಿ: R Ashwin: ಮೆಗಾ ಹರಾಜಿಗೂ ಮುನ್ನ ಚೆನ್ನೈ ಫ್ರಾಂಚೈಸಿ ಸೇರಿದ ಆರ್​. ಅಶ್ವಿನ್; ಹೊಸ ಜವಾಬ್ದಾರಿ

ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂ ಲಾಂಛನದ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Continue Reading

ಸಿನಿಮಾ

Kalki 2898 AD: ಪ್ರಭಾಸ್‌-ದೀಪಿಕಾ ಜೋಡಿಯ ʼಕಲ್ಕಿʼ ಚಿತ್ರದ ಟ್ರೈಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Kalki 2898 AD: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಕಲ್ಕಿ 2898 ಎಡಿʼ ಪ್ಯಾನ್‌ ಇಂಡಿಯಾ ಚಿತ್ರವಾಗಿ ಜೂನ್‌ 27ರಂದು ತೆರೆಗೆ ಬರಲಿದೆ. ಪ್ರಭಾಸ್‌ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಚಿತ್ರ ಮುಖ್ಯ ಪಾತ್ರದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌ ಮುಂತಾದ ಘಟಾನುಘಟಿಗಳು ಅಭಿನಯಿಸುತ್ತಿದ್ದಾರೆ. ಇದೀಗ ಚಿತ್ರತಂಡ ಟ್ರೈಲರ್‌ ರಿಲೀಸ್‌ ದಿನಾಂಕವನ್ನು ಘೋಷಿಸಿದೆ.

VISTARANEWS.COM


on

Kalki 2898 AD
Koo

ಹೈದರಾಬಾದ್‌: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಸದ್ಯ ನಿರೀಕ್ಷೆ ಹುಟ್ಟು ಹಾಕಿದೆ. ಜೂನ್‌ 27ರಂದು ತೆರೆಗೆ ಬರಲಿರುವ ಈ ಸಿನಿಮಾ ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನಿಸಿಕೊಂಡಿದೆ. ಟಾಲಿವುಡ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ‌, ಕನ್ನಡತಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಈಗಾಗಲೇ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಚಿತ್ರದಲ್ಲಿ ವಿಶೇಷ ಪಾತ್ರ ಎನಿಕೊಂಡಿರುವ ಬುಜ್ಜಿ (ಕಾರು)ಯನ್ನು ಪರಿಚಯಿಸಿ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಟ್ರೈಲರ್‌ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಟ್ರೈಲರ್‌ ಯಾವಾಗ ರಿಲೀಸ್‌?

ಜೂನ್‌ 10ರಂದು ʼಕಲ್ಕಿ 2898 ಎಡಿʼ ಟ್ರೈಲರ್‌ ರಿಲೀಸ್‌ ಆಗಲಿದೆ. ಹೊಸ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಆ ಮೂಲಕ ಟ್ರೈಲರ್‌ ರಿಲೀಸ್‌ ದಿನಾಂಕವನ್ನು ಘೋಷಿಸಿದೆ. ಪೋಸ್ಟರ್‌ನಲ್ಲಿ ಗುಡ್ಡದ ಮೇಲೆ ಪ್ರಭಾಸ್‌ ನಿಂತಿರುವ ಚಿತ್ರ ಕಂಡು ಬಂದಿದ್ದು, ‘ಎಲ್ಲವೂ ಬದಲಾಗುವ ಸಮಯ ಬಂದಿದೆ’ ಎಂದು ಬರೆಯಲಾಗಿದೆ. ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವೈಜಯಂತಿ ಮೂವೀಸ್‌ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದೆ.

ಗಮನ ಸೆಳೆದ ಬುಜ್ಜಿ ಕಾರು

ಇತ್ತೀಚೆಗೆ ಬಿಡುಗಡೆಯಾದ ಬುಜ್ಜಿ ಕಾರಿನ ಟೀಸರ್‌ ಗಮನ ಸೆಳೆದಿದೆ. ಜತೆಗೆ ಚಿತ್ರದಲ್ಲಿ ಪ್ರಭಾಸ್‌ ಓಡಿಸಲಿರುವ ಈ ಕಾರನ್ನು ಇದೀಗ ಚಿತ್ರದ ಪ್ರಚಾರಕ್ಕೆ ಬಳಸಲಾಗುತ್ತಿದೆ. ವಿಶೇಷವಾಗಿ ತಯಾರಿಸಿದ ಈ ಕಾರನ್ನು ಈಗಾಗಲೇ ಸೆಲೆಬ್ರಿಟಿಗಳು ಡ್ರೈವ್‌ ಮಾಡಿದ್ದಾರೆ.

ಕುತೂಹಲ ಮೂಡಿಸಿದ ಅಮಿತಾಭ್‌

ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಕೆಲವು ದಿನಗಳ ಹಿಂದೆ ಚಿತ್ರತಂಡ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ರಿವೀಲ್ ಮಾಡಿತ್ತು. ಬಿಗ್ ಬಿ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಟೀಸರ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುಹೆಯೊಂದರಲ್ಲಿ ಮಗುವೊಂದು ನೀನು ಯಾರು? ಎಂದು ಕೇಳಿದಾಗ ʻʻಪ್ರಾಚೀನ ಕಾಲದಿಂದಲೂ ನಾನು ಕಲ್ಕಿಯ ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೇನೆ. ನಾನು ಗುರು ದ್ರೋಣರ ಮಗ ಅಶ್ವತ್ಥಾಮʼʼ ಎಂದು ಅಮಿತಾಭ್‌ ಹೇಳುವ ಮೂಲಕ ಈ ಸಿನಿಮಾದ ಕಥೆ ಪುರಾಣ ಕಾಲದಿಂದ ಭವಿಷ್ಯದತ್ತ ಸಾಗುತ್ತದೆ ಎನ್ನುವ ಸುಳಿವು ಲಭಿಸಿತ್ತು. ಭಾರತ ಚಿತ್ರರಂಗದ ಮಟ್ಟಿಗೆ ಇಂತಹ ಪ್ರಯೋಗ ಬಹಳ ಅಪರೂಪ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಅಶ್ವಿನ್‌ ಚೈತ್ಯನ್ಯ, ʼʼಈ ಸಿನಿಮಾದ ಕಥೆ ಮಹಾಭಾರತದ ಕಾಲಘಟ್ಟಲ್ಲಿ ಆರಂಭವಾಗಿ ಕ್ರಿ.ಶ. 2898ರಲ್ಲಿ ಕೊನೆಗೊಳ್ಳಲಿದೆ. ಆ ಮೂಲಕ ಸುಮಾರು 6,000 ವರ್ಷಗಳ ಕಥೆಯನ್ನು ತೆರೆ ಮೇಲೆ ಮೂಡಿಸಲಿದ್ದೇವೆ. ಇದಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದೇವೆʼʼ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.

ಇದನ್ನೂ ಓದಿ: Kalki 2898 AD: ʼಕಲ್ಕಿʼ ಚಿತ್ರಕ್ಕಾಗಿ ಕನ್ನಡದಲ್ಲಿ ಡಬ್‌ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದು, ಬಾಲಿವುಡ್‌ ನಟಿ ದಿಶಾ ಪಠಾಣಿ, ಕಮಲ್‌ ಹಾಸನ್‌ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿರುವ ಈ‌ ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ತಮ್ಮ ಪಾತ್ರಕ್ಕೆ ದೀಪಿಕಾ ಪಡುಕೋಣೆಯೇ ಧ್ವನಿ ನೀಡಲಿದ್ದಾರೆ. ಜತೆಗೆ ಹಿಂದಿಯಲ್ಲಿಯೂ ಅವರು ಡಬ್‌ ಮಾಡಲಿದ್ದಾರೆ.

Continue Reading

ರಾಜಕೀಯ

Anupam Kher: ಪ್ರಾಮಾಣಿಕ ವ್ಯಕ್ತಿ ಸಹಿಸಿಕೊಳ್ಳಲೇಬೇಕು; ಉ.ಪ್ರ ಹಿನ್ನಡೆ ಕುರಿತು ಅನುಪಮ್ ಖೇರ್‌ ಟ್ವೀಟ್

ಉತ್ತರ ಪ್ರದೇಶದಲ್ಲಿ ಲೋಕಸಭಾ ಫಲಿತಾಂಶ ಬಿಜೆಪಿಗೆ ಬಹುದೊಡ್ಡ ಆಘಾತವನ್ನು ನೀಡಿದೆ. ಈ ಕುರಿತು ನಟ, ಚಿತ್ರ ನಿರ್ಮಾಪಕ ಅನುಪಮ್ ಖೇರ್ ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಕೆಲವೊಮ್ಮೆ ಪ್ರಾಮಾಣಿಕ ವ್ಯಕ್ತಿ ತುಂಬಾ ಪ್ರಾಮಾಣಿಕವಾಗಿರಬಾರದು ಎಂದು ನಾನು ಭಾವಿಸುತ್ತೇನೆ. ನೇರವಾದ ತೊಗಟೆಯನ್ನು ಹೊಂದಿರುವ ಮರವನ್ನು ಸಾಮಾನ್ಯವಾಗಿ ಮೊದಲು ಕತ್ತರಿಸಲಾಗುತ್ತದೆ. ಪ್ರಾಮಾಣಿಕ ವ್ಯಕ್ತಿ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

VISTARANEWS.COM


on

By

Anupam Kher
Koo

ಲೋಕಸಭೆ ಚುನಾವಣೆ 2024ರ (Loksabha election-2024) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಬಿಜೆಪಿ (Bjp) ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗಳಿಸಿದರೂ ಉತ್ತರ ಪ್ರದೇಶದಲ್ಲಿ (uttarpradesh) ಪಕ್ಷಕ್ಕೆ ಭಾರಿ ಆಘಾತವಾಗಿದೆ. ಅಯೋಧ್ಯೆ ಇರುವ ಫೈಜಾಬಾದ್ (Faizabad) ಸೇರಿದಂತೆ ಹಲವು ಕ್ಷೇತ್ರಗಳನ್ನು ಅದು ಸ್ಥಾನಗಳನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮಮಂದಿರವನ್ನು (rammandir) ನಿರ್ಮಿಸಿದರೂ ಬಿಜೆಪಿ ಅಲ್ಲಿ ಹಿನ್ನಡೆ ಕಂಡಿದೆ.

ಈ ಕುರಿತು ಬಾಲಿವುಡ್ ನಟ (Bollywood actor) ಮತ್ತು ಬಿಜೆಪಿ ಬೆಂಬಲಿಗ ಅನುಪಮ್ ಖೇರ್ (Anupam Kher) ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಫಲಿತಾಂಶದ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕಭಿ ಕಭಿ ಸೋಚ್ತಾ ಹೂಂ ಕಿ ಇಮಾಂದಾರ್ ವ್ಯಕ್ತಿ ಕೋ ಬಹೋತ್ ಝಾದಾ ಇಮಾಂದಾರ್ ನಹೀ ಹೋನಾ ಚಾಹಿಯೇ. ಜಂಗಲ್ ಮೇ ಸೀಧೇ ತಾನೆ ವಾಲೇ ಪೇಡ್ ಹೇ ಸಬ್ಸೇ ಪೆಹಲೇ ಕಾತೇ ಜಾತೇ ಹೈ. ಬಹುತ್ ಝಾದಾ ಇಮಾಂದಾರ್ ವ್ಯಕ್ತಿ ಕೋ ಹೇ ಸಬ್ಸೇ ಝ್ಯಾದಾ ಕಷ್ಟ ಉಠನೇ ಪಡತೇ ಹೈ. ಪರ್ ಫಿರ್ ಭಿ ವೋ ಅಪ್ನಿ ಇಮಾಂದಾರಿ ನಹೀ ಛೋಡ್ತಾ. ಇಸ್ಲಿಯೇ ಕರೋಡೋ ಲೋಗೋ ಕೆ ಲಿಯೇ ಪ್ರೇರಣಾ ಕಾ ಸ್ತೋತ್ರ ಬಂತ ಹೈ” ಎಂದು ಅವರು ಹೇಳಿದ್ದಾರೆ.


ಇದರ ಅನುವಾದ ಇಂತಿದೆ. ಕೆಲವೊಮ್ಮೆ ಪ್ರಾಮಾಣಿಕ ವ್ಯಕ್ತಿ ತುಂಬಾ ಪ್ರಾಮಾಣಿಕವಾಗಿರಬಾರದು ಎಂದು ನಾನು ಭಾವಿಸುತ್ತೇನೆ. ನೇರವಾದ ತೊಗಟೆಯನ್ನು ಹೊಂದಿರುವ ಮರವನ್ನು ಸಾಮಾನ್ಯವಾಗಿ ಮೊದಲು ಕತ್ತರಿಸಲಾಗುತ್ತದೆ. ಪ್ರಾಮಾಣಿಕ ವ್ಯಕ್ತಿ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಡೆತಡೆಗಳ ಹೊರತಾಗಿಯೂ, ಅವನು ತನ್ನ ಪ್ರಾಮಾಣಿಕತೆಯನ್ನು ಬಿಟ್ಟುಕೊಡುವುದಿಲ್ಲ. ಅದಕ್ಕಾಗಿಯೇ ಅವರು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Election Results 2024: ಅತಿ ಹೆಚ್ಚು ಮತ್ತು ಅತಿ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಿವರು!


ಈ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಯ ಸತತ ಮೂರನೇ ಗೆಲುವಿಗೆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಅವರು ಹೀಗೆ ಬರೆದಿದ್ದಾರೆ: ಜನರು ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಸಾಧನೆಯಾಗಿದೆ. ಈ ಪ್ರೀತಿಗಾಗಿ ನಾನು ಜನತಾ ಜನಾರ್ದನರಿಗೆ ನಮಸ್ಕರಿಸುತ್ತೇನೆ. ಜನರ ಆಶೋತ್ತರಗಳನ್ನು ಈಡೇರಿಸಲು ಕಳೆದ ದಶಕದಲ್ಲಿ ಮಾಡಿದ ಉತ್ತಮ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಮ್ಮ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಅಸಾಧಾರಣ ಪ್ರಯತ್ನಗಳಿಗೆ ಪದಗಳು ಎಂದಿಗೂ ನ್ಯಾಯವನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ.

Continue Reading
Advertisement
Sunita Williams
ಪ್ರಮುಖ ಸುದ್ದಿ9 mins ago

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Dr C N Manjunath
ಕರ್ನಾಟಕ29 mins ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ41 mins ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ45 mins ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

500 Rs deposit in the name of new admission children by old students of Government Kannada School Lingasugur
ಕರ್ನಾಟಕ47 mins ago

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

Koti Movie
ಸಿನಿಮಾ59 mins ago

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Belagavi Election Result 2024
ಬೆಳಗಾವಿ1 hour ago

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

French Open 2024
ಕ್ರೀಡೆ2 hours ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest2 hours ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Uttarakhand Trekking Tragedy
ಪ್ರಮುಖ ಸುದ್ದಿ2 hours ago

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌