Site icon Vistara News

Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ಟೀಸರ್‌ ರಿಲೀಸ್‌ ಡೇಟ್‌ ಅನೌನ್ಸ್‌

Vedha Movie

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ 125ನೇ ಸಿನಿಮಾ ವೇದ ಟೀಸರ್‌ (Vedha Movie) ನವೆಂಬರ್‌ 11ರಂದು ರಿಲೀಸ್‌ ಆಗುತ್ತಿದೆ. ಈ ಸಿನಿಮಾ ಡಿಸೆಂಬರ್‌ 23ರಂದು ಬಿಡುಗಡೆಯಾಗುತ್ತಿದೆ. ʻವೇದʼ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿ ಬರುತ್ತಿದೆ. ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ನಾಲ್ಕನೇ ಸಿನಿಮಾ ಇದಾಗಿದೆ.

ಈ ಚಿತ್ರಕ್ಕೆ ಜೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯಾ ಸಂಗೀತ ಚಿತ್ರಕ್ಕಿದೆ. ವೇದ ಚಿತ್ರ 1960ರ ದಶಕದಲ್ಲಿ ನಡೆಯುವ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Vedha Movie | ಶಿವರಾಜ್‌ ಕುಮಾರ್‌ ನಟನೆಯ ವೇದ ಕ್ರಿಸ್‌ಮಸ್‌ಗೆ ತೆರೆಗೆ!

ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ನಿರ್ದೇಶಕರು ಮತ್ತು ಸಂಗೀತ ಸಂಯೋಜಕರು ಹಾಡಿಗೆ ಹಿನ್ನೆಲೆ ಧ್ವನಿ ನೀಡಲು ದೊಡ್ಡ ಕಲಾವಿದರೊಂದಿಗೆ ಚರ್ಚಿಸುತ್ತಿದ್ದಾರೆ, ಹಾಡಿನ ರೆಕಾರ್ಡಿಂಗ್ ಪೂರ್ಣಗೊಳಿಸಿದ ನಂತರ ಅದರ ವಿವರಗಳನ್ನು ಬಹಿರಂಗಪಡಿಸಲು ತಂಡವು ಯೋಜಿಸುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ | Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ರಿಲೀಸ್‌ ಡೇಟ್‌ ಅನೌನ್ಸ್

Exit mobile version