Site icon Vistara News

Guru Shishyaru | ಹಿರಿಯ ನಟ ಶ್ರೀನಿವಾಸಮೂರ್ತಿ ಮೊಮ್ಮಗ ಚಂದನವನಕ್ಕೆ ಎಂಟ್ರಿ: ಗುರು ಶಿಷ್ಯರು ಚಿತ್ರದಲ್ಲಿ ಅಭಿನಯ

Guru Shishyaru

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸಮೂರ್ತಿ ಮೊಮ್ಮಗ ಹರ್ಷಿತ್‌ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಂದೆ ನಟ, ನಿರ್ದೇಶಕ ನವೀನ್‌ ಕೃಷ್ಣ ಕೂಡ ಚಿತ್ರರಂಗದಲ್ಲಿದ್ದಾರೆ. ಇದೀಗ ಅವರ ಮಗ ಹರ್ಷಿತ್‌ ಗುರು ಶಿಷ್ಯರು (Guru Shishyaru ) ಚಿತ್ರದಲ್ಲಿ ಬಸವ ಪಾತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಹರ್ಷಿತ್‌ ತಂದೆಯ ರೀತಿಯೇ ಅದ್ಭುತ ಕಂಠವನ್ನು ಹೊಂದಿದ್ದಾರೆ. ʻʻಎಲ್ಲರೂ ಅಪ್ಪನ ರೀತಿಯೇ ನಟಿಸುತ್ತೀಯಾ ಎನ್ನುತ್ತಾರೆ. ಆ ರೀತಿ ನನಗೆ ಯಾರಾದರೂ ಹೇಳಿದರೆ ತುಂಬಾ ಸಂತೋಷ ಎನಿಸುತ್ತದೆ. ಅಪ್ಪನ ರೀತಿಯೇ ಇದ್ದೇನೆ ಎನ್ನುವುದು ನನಗೆ ತುಂಬಾ ಹೆಮ್ಮೆ ಇದೆʼʼ ಎನ್ನುತ್ತಾರೆ ಹರ್ಷಿತ್‌.

ಇದನ್ನೂ ಓದಿ | Kannada New Movies | ಸೆಪ್ಟೆಂಬರ್‌ನಲ್ಲಿ ತೆರೆಗೆ ಸಾಲು ಸಾಲು ಸಿನಿಮಾ: ನಿಮಗಿಷ್ಟದ ಚಿತ್ರ ಇದೆಯೇ?

ಶರಣ್‌ ಅಭಿನಯದ “ಗುರು ಶಿಷ್ಯರುʼ ಸಿನಿಮಾಗೆ ಬಸವ ಪಾತ್ರಕ್ಕಾಗಿ ಹರ್ಷಿತ್‌ ಖೋ ಖೋ ಅಭ್ಯಾಸ ಮಾಡಿದ್ದಾರೆ. ಖೋ ಖೋ ಆಟದ ಮೂಲಕ ಅವರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ತಾತ ಶ್ರೀನಿವಾಸಮೂರ್ತಿ ಅಭಿನಯಿಸಿರುವ “ಕವಿರತ್ನ ಕಾಳಿದಾಸʼ ಚಿತ್ರದ ಭೋಜರಾಜನ ಪಾತ್ರ ತಮಗೆ ತುಂಬಾ ಇಷ್ಟ ಎನ್ನುತ್ತಾರವರು.

ಹರ್ಷಿತ್‌

ಗುರು ಶಿಷ್ಯರು ಸಿನಿಮಾ ಸೆ.23ಕ್ಕೆ ತೆರೆಗೆ
ಎಂಬತ್ತರ ದಶಕದಲ್ಲಿ ದ್ವಾರಕೀಶ್ ನಿರ್ಮಾಣದ “ಗುರು ಶಿಷ್ಯರು” ಚಿತ್ರ‌ ಕನ್ನಡಿಗರ ಮನ ಗೆದ್ದಿತ್ತು. ಈಗ ಅದೇ ಹೆಸರಿನ ಚಿತ್ರ ಮತ್ತೊಮ್ಮೆ ಬರುತ್ತಿದೆ. ಶರಣ್ ಕೃಷ್ಣ ಹಾಗೂ ತರುಣ್ ಕಿಶೋರ್ ಸುಧೀರ್ ನಿರ್ಮಿಸಿರುವ ಈ ಚಿತ್ರವನ್ನು ಜಡೇಶ್ ಕೆ. ಹಂಪಿ ನಿರ್ದೇಶಿಸಿದ್ದಾರೆ.

ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವು ದೇಸಿ ಕ್ರೀಡೆಯಾದ ಖೊಖೊ ಆಟದ ಸುತ್ತ ನಡೆಯುತ್ತದೆ. ಖೊಖೊ ಕೋಚ್ ಆಗಿ ಶರಣ್ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಹದಿಮೂರು ಜನ ಖೊಖೊ ಆಟಗಾರರೊಂದಿಗೆ ಹರ್ಷಿತ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Kannada New Film | ಮೇಘನಾ ಗಾಂವ್ಕರ್ ನಟನೆಯ ಶುಭಮಂಗಳ ಸಿನಿಮಾ ರಿಲೀಸ್‌ ಡೇಟ್‌ ಪ್ರಕಟ

Exit mobile version