ಮೈಸೂರು : ಕನ್ನಡ ಚಿತ್ರರಂಗದ ಹಿರಿಯ ವರ್ಣಾಲಂಕಾರ ಕಲಾವಿದ ಎಂ.ಎಸ್. ಕೇಶವಣ್ಣ ಅವರು ಶನಿವಾರ (ಜು.16)ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದಲ್ಲಿ 53 ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದರು.
ಇವರ ತಂದೆ ಸುಬ್ಬಣ್ಣ ಅವರೂ ಸಹ ನಟ ರಾಜ್‌ಕುಮಾರ್ ಅವರ ಮೇಕಪ್ ಮ್ಯಾನ್ ಆಗಿದ್ದರು. ಸುಮಾರು 30 ವರ್ಷಗಳ ಕಾಲ ರಾಜ್‌ಕುಮಾರ್ ಅವರ ಕಂಪನಿಯಲ್ಲಿ ಎಂ.ಎಸ್. ಕೇಶವಣ್ಣ ಅವರು ವರ್ಣಾಲಂಕಾರ ಕಲಾವಿದರಾಗಿದ್ದರು. ಈಶ್ವರಿ ಪ್ರೊಡಕ್ಷನ್‌ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರು ಮೊದಲ ಬಾರಿಗೆ ಮೇಕಪ್ ಮಾಡಿದ್ದು ನಟ ನರಸಿಂಹ ರಾಜು ಅವರಿಗೆ ಎನ್ನುವುದು ವಿಶೇಷ. ಪೃಥ್ವಿರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರ ಮುನಿ ಹೀಗೆ ಹಲವು ಕಲಾವಿದರಿಗೆ ಮೇಕಪ್ ಮಾಡಿದ್ದಾರೆ.
ಇದನ್ನೂ ಓದಿ | ಖ್ಯಾತ ಚಿತ್ರಸಾಹಿತಿ ಪುರುಷೋತ್ತಮ ಕಣಗಾಲ್ ನಿಧನ
ಕನ್ನಡದ ʻನಾನಿನ್ನ ಬಿಡಲಾರೆʼ ಸಿನಿಮಾದಲ್ಲಿ ಅನಂತ್ ನಾಗ್ ಅವರಿಗೆ ದೆವ್ವದ ಪಾತ್ರಕ್ಕೆ ಕೇಶವಣ್ಣ ಮೇಕಪ್ ಮಾಡಿದ್ದರು. ಸಾಕ್ಷಾತ್ಕಾರ, ಮಯೂರ, ಮುರುವರೆ ವಜ್ರ, ಪ್ರೇಮಲೋಕ, ಶಾಂತಿ ಕ್ರಾಂತಿ, ಸಂಗೊಳ್ಳಿ ರಾಯಣ್ಣ ಚಿತ್ರದ ನಟರಿಗೆ ಬಣ್ಣ ಹಚ್ಚಿದ್ದಾರೆ.
ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಆಗಿದ್ದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನಲ್ಲಿ ಭಾನುವಾರ (ಜು.17)ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.