Site icon Vistara News

Vicky Kaushal: ರಣಬೀರ್‌ ಸಿನಿಮಾ ಜತೆ ಕ್ಲ್ಯಾಶ್‌; ವಿಕ್ಕಿ ಕೌಶಲ್ ಹೇಳಿದ್ದೇನು?

Vicky Kaushal Ranbir Kapoor

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಅಭಿನಯದ ʻಅನಿಮಲ್ʼ ಸಿನಿಮಾ ಹಾಗೂ ವಿಕ್ಕಿ ಕೌಶಲ್ (Vicky Kaushal) ಅವರ ʻಸ್ಯಾಮ್ ಬಹದ್ದೂರ್ʼ (Sam Bahadur) ಸಿನಿಮಾ ಒಂದೇ ದಿನ ರಿಲೀಸ್‌ ಆಗುತ್ತಿದ್ದು, ಎರಡೂ ಬಾಕ್ಸ್‌ ಆಫೀಸ್‌ನಲ್ಲಿ ಕ್ಲ್ಯಾಶ್‌ ಆಗಲಿವೆ. ಈ ಕುರಿತು ವಿಕ್ಕಿ ಕೌಶಲ್ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ʻʻಇವೆರಡೂ ಚಿತ್ರಗಳು ಒಂದೇ ದಿನ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಎಲ್ಲರಂತೆ ನಾನು ಕೂಡ ʻಅನಿಮಲ್ʼ ಸಿನಿಮಾ ಬಗ್ಗೆ ಉತ್ಸುಕನಾಗಿದ್ದೇನೆʼʼ ಎಂದು ಸ್ಯಾಮ್ ಬಹದ್ದೂರ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಡಿಸೆಂಬರ್‌ 1ರಂದು ಈ ಎರಡೂ ಸಿನಿಮಾಗಳು ವಿಶ್ವಾದ್ಯಂತ ತೆರೆ ಕಾಣುತ್ತಿವೆ. ಈ ಬಗ್ಗೆ ನಟ ವಿಕ್ಕಿ ಕೌಶಲ್ ಮಾತನಾಡಿ ʻʻನಾನು ಹಾಗೂ ರಣಬೀರ್‌ ನಮ್ಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ಇಡಲಿದ್ದೇವೆ. ಅದು ನಮ್ಮ ದಿನ ಅನ್ನುವುದೇನೋ ನಿಜ. ಆದರೆ, ನಮಗಿಂತಲೂ ಹೆಚ್ಚು ಪ್ರೇಕ್ಷಕರ ದಿನವಾಗಿರುತ್ತದೆ. ಇಂದಿನ ಕಾಲದಲ್ಲಿ, ನಾವು, ಪ್ರೇಕ್ಷಕರಿಗೆ ಒಂದೇ ದಿನದಲ್ಲಿ ಹಲವು ಸಿನಿಮಾಗಳ ಆಯ್ಕೆಯನ್ನು ನೀಡಬೇಕು. ಅದರಿಂದಲೇ ಸಿನಿ ಉದ್ಯಮವೂ ಅಭಿವೃದ್ಧಿ ಹೊಂದುತ್ತೇವೆ. ಒಂದು ವರ್ಷದಲ್ಲಿ ಇಷ್ಟೇ ಸಿನಿಮಾ ಎಂದು ಸೀಮಿತ ಇರುವುದಿಲ್ಲ. ನಾವು ಅನೇಕ ಚಲನಚಿತ್ರಗಳನ್ನು ಮಾಡಬೇಕಾಗುತ್ತದೆʼʼಎಂದರು.

ಅನಿಮಲ್‌ ಸಿನಿಮಾ

ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌  ಕೂಡ ಒಂದು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ  ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ. ತೆಲುಗಿನ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಡಿಸೆಂಬರ್‌ 1ರಂದು ತೆರೆಗೆ ಬರಲಿದೆ. ತೆಲುಗಿನ ʼಅರ್ಜುನ್‌ ರೆಡ್ಡಿʼ, ಹಿಂದಿಯ ʼಕಬೀರ್‌ ಸಿಂಗ್‌ʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಸಂದೀಪ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Vicky Kaushal : ವಿಕ್ಕಿ ಕೌಶಲ್-ಸಾರಾ ಅಲಿ ಖಾನ್ ಚಿತ್ರದ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

ಸ್ಯಾಮ್ ಬಹದ್ದೂರ್

ದೇಶದ ಮೊದಲ ಫೀಲ್ಡ್‌ ಮಾರ್ಷಲ್‌ ಕಥೆ ಇದು. ಈ ಸಿನಿಮಾ 1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಸ್ಯಾಮ್‌ ಮಾಣೆಕ್‌ ಶಾ ಅವರ ನಿಜಜೀವನದ ಘಟನೆಗಳನ್ನು ಆಧರಿಸಿದೆ. ಸ್ಯಾಮ್‌ ಮಾಣೆಕ್‌ ಶಾ ಅವರು ಫೀಲ್ಡ್‌ ಮಾರ್ಷಲ್‌ ಹುದ್ದೆಗೇರಿದ ಮೊದಲ ಭಾರತೀಯ ಸೇನಾ ಅಧಿಕಾರಿ. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ತಮ್ಮ ಮಿಲಿಟರಿ ವೃತ್ತಿಜೀವನವನ್ನು ಪ್ರಾರಂಭಿಸಿ, ನಾಲ್ಕು ದಶಕಗಳ ಕಾಲ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಐದು ಯುದ್ಧಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ. ಸ್ಯಾಮ್‌ ಮಾಣೆಕ್‌ ಶಾ ಪಾತ್ರವನ್ನೇ ವಿಕ್ಕಿ ನಿರ್ವಹಿಸಿದ್ದಾರೆ. ಸನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

Exit mobile version