Site icon Vistara News

Vignesh Shivan: ಇದ್ದಕ್ಕಿದ್ದಂತೆ ದಳಪತಿ ವಿಜಯ್‌, ಲೋಕೇಶ್‌ ಫ್ಯಾನ್ಸ್‌ ಬಳಿ ಕ್ಷಮೆ ಕೇಳಿದ ನಯನತಾರಾ ಪತಿ!

Vignesh Shivan

ಬೆಂಗಳೂರು: ದಳಪತಿ ವಿಜಯ್ ವಿರುದ್ಧದ ವಿಡಿಯೊವನ್ನು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan ) ಲೈಕ್ ಮಾಡಿದ್ದರಿಂದ ವಿಜಯ್ ಅಭಿಮಾನಿಗಳು (Lokesh Kangaraj) ಅವರ ಮೇಲೆ ಕೋಪಗೊಂಡಿದ್ದಾರೆ. ಇದೀಗ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ವಿಘ್ನೇಶ್ ಶಿವನ್ ಟ್ವೀಟ್‌ ಮೂಲಕ ಕ್ಷಮೆ ಕೇಳಿ ಸ್ಪಷ್ಟೀಕರಣ ನೀಡಿದ್ದಾರೆ.

ವಿಘ್ನೇಶ್ ಹೀಗೆ ಬರೆದಿದ್ದಾರೆ “ಆತ್ಮೀಯ ವಿಜಯ್ ಸರ್ ಅಭಿಮಾನಿಗಳು, ಲೋಕೇಶ್‌ ಅಭಿಮಾನಿಗಳಿಗೆ, ಗೊಂದಲಕ್ಕೀಡಾಗಿದ್ದಕ್ಕೆ ಕ್ಷಮೆಯಿರಲಿ, ಸಂದರ್ಭ, ವೀಡಿಯೊ ಅಥವಾ ಟ್ವೀಟ್‌ನ ವಿಷಯವನ್ನೂ ನೋಡದೆ, ಲೋಕಿ ಅವರ ಸಂದರ್ಶನವನ್ನು ನೋಡಿ ನಾನು ವಿಡಿಯೊವನ್ನು ಇಷ್ಟಪಟ್ಟೆ! ಅವರ ಕೆಲಸಗಳು ಮತ್ತು ಅವರ ಸಂದರ್ಶನಗಳು ಮತ್ತು ಅವರು ಮಾತನಾಡುವ ರೀತಿಗೆ ನಾನು ದೊಡ್ಡ ಅಭಿಮಾನಿʼʼ ಎಂದು ಬರೆದಿದ್ದಾರೆ.

ವಿಘ್ನೇಶ್ ಈ ಬಗ್ಗೆ ಸ್ಪಷ್ಟನೆ ನೀಡಿ ʻವಿಜಯ್ ಸರ್ ಅವರ ಲಿಯೋ ಚಿತ್ರದ ಗ್ರ್ಯಾಂಡ್ ರಿಲೀಸ್‌ಗಾಗಿ ನಾನು ಸಹ ಕಾತುರದಿಂದ ಕಾಯುತ್ತಿದ್ದೇನೆ. ಲೋಕಿ ಸಹೋದರನ ಚಿತ್ರವನ್ನು ನೋಡಿ ನಾನು ಇಷ್ಟಪಟ್ಟೆ, ಅದೇ ರೀತಿ ನಾನು ನಯನಾ ಅವರ ವೀಡಿಯೊ ಕ್ಲಿಪ್ ಕೂಡ ನೋಡಿದೆ. ನಯನಾ ಅದ್ಭುತವಾಗಿ ಪ್ರದರ್ಶನ ನೀಡಿದ್ದರು ಮತ್ತು ಇದು ನನ್ನ ಮೆಚ್ಚಿನ ಶಾಟ್‌ಗಳಲ್ಲಿ ಒಂದಾಗಿದೆ. ಆದ್ದರಿಂದ ತಕ್ಷಣವೇ ಆ ಟ್ವೀಟ್ ಇಷ್ಟಪಟ್ಟಿದೆ. ದುರದೃಷ್ಟವಶಾತ್‌ ನಾನು ವಿಡಿಯೊವನ್ನು ಪೂರ್ಣ ನೋಡಲಿಲ್ಲ. ಎಚ್ಚರಿಕೆಯಿಂದ ಇರಬೇಕಿತ್ತು! ಕ್ಷಮಿಸಿ. ಅಕ್ಟೋಬರ್ 19 ರಂದು ಲಿಯೋ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ. ದಳಪತಿ ಅಭಿಮಾನಿಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ತಪ್ಪಿನ ಬಗ್ಗೆ ಹೆಚ್ಚು ಕಮೆಂಟ್ ಮಾಡುವಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಿʼʼಎಂದರು.

ಇದನ್ನೂ ಓದಿ: ವಿಶ್ವಕಪ್​ನಲ್ಲಿಯೂ ಮುಂದುವರಿದ ಜಾರ್ವೊ ಕಾಟ; ಮುಂದಿನ ಪಂದ್ಯಗಳಿಗೆ ನಿಷೇಧ ಹೇರಿದ ಐಸಿಸಿ

ವಿಘ್ನೇಶ್ ಶಿವನ್ ಟ್ವೀಟ್‌

ವಿಘ್ನೇಶ್ ತಮ್ಮ ತಪ್ಪನ್ನು ಸ್ಪಷ್ಟಪಡಿಸಿದ ನಂತರ, ಅನೇಕ ಅಭಿಮಾನಿಗಳು ಕಮೆಂಟ್‌ಗಳಲ್ಲಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.ʻʻತಕ್ಷಣದ ಪ್ರತಿಕ್ರಿಯೆ ಮತ್ತು ಸ್ಪಷ್ಟೀಕರಣಕ್ಕಾಗಿ ಧನ್ಯವಾದಗಳು” ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದರು. ಇನ್ನೊಬ್ಬರು ʻನೆಗೆಟಿವ್‌ ಮಾತುಗಳನ್ನು ನಿರ್ಲಕ್ಷಿಸಿ ಸಹೋದರ, ಸಹ ಕಲಾವಿದರ ಮೇಲಿನ ನಿಮ್ಮ ಪ್ರೀತಿ ಮತ್ತು ಗೌರವದ ಬಗ್ಗೆ ನಮಗೆ ತಿಳಿದಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಅನಗತ್ಯ ವಿಷಯಕ್ಕಾಗಿ ನಿಮ್ಮನ್ನು ವಿವರಿಸುವ ಅಗತ್ಯವಿಲ್ಲ” ಎಂದು ಕಮೆಂಟ್‌ ಮಾಡಿದ್ದಾರೆ.

ಇದರ ಬೆನ್ನಲ್ಲೇ, ಟ್ವಿಟರ್‌​ನಲ್ಲಿ ಬಳಕೆದಾರರು, ಲೋಕೇಶ್ ಅವರು, ನಾನ್ ರೆಡಿ ಹಾಡಿನ ನಂತರ ನಿಮಗೆ ಮತ್ತು ವಿಜಯ್‌ಗೆ ಏನಾಯಿತು ಎಂದು ನಮಗೆ ತಿಳಿದಿದೆ. ನೀವು ಲಿಯೋ ಹ್ಯಾಶ್‌ಟ್ಯಾಗ್ ಅನ್ನು ಏಕೆ ಅಳಿಸಿದ್ದೀರಿ ಎಂದು ನಮಗೆ ತಿಳಿದಿದೆ ಎನ್ನುತ್ತಿದ್ದಾರೆ.

ಇದೇ ತಿಂಗಳು 19 ರಂದು ತೆರೆಗೆ

ಲಿಯೋ ಸಿನಿಮಾ ಇದೇ ತಿಂಗಳು 19 ರಂದು ತೆರೆಗೆ ಅಪ್ಪಳಿಸಲು ಸಿದ್ದವಾಗಿದ್ದು, ಈಗ ಟ್ರೈಲರ್ (trailer Out) ಜೋರು ಹವಾ ಸೃಷ್ಟಿಸಿದೆ. ಈ ಸಿನಿಮಾಗೆ ಸೆನ್ಸಾರ್ ಮಂಡಳಿ U/A ಸರ್ಟಿಫಿಕೇಟ್ ನೀಡಿದೆ. ಅಕ್ಟೋಬರ್ 5 ರಂದು ‘ಲಿಯೋ’ ನಿರ್ಮಾಪಕರು ಬೃಹತ್ ಆಚರಣೆಗಳ ನಡುವೆ ಚಿತ್ರದ ಟ್ರೈಲರ್ ಅನ್ನು ಅನಾವರಣಗೊಳಿಸಿದರು. ಸನ್ ಟಿವಿಯ ಅಧಿಕೃತ ಪುಟಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ಲಿಯೋ ಟ್ರೈಲರ್ ಧಮಾಕಾ ಆಗಿದ್ದು, ಅರ್ಜುನ್ ಸರ್ಜಾ, ಸುನಿಲ್ ದತ್, ತೃಷಾ ಕೃಷ್ಣನ್ ಅವರನ್ನು ಕಾಣಬಹುದು. ಟ್ರೈಲರ್ ಮಾತ್ರ ಮಸ್ತ್ ಆಗಿದ್ದು, ಸಿನಿಮಾದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ. ಖಳರನ್ನು ಅಟ್ಟಾಡಿಸಿಕೊಂಡು ವಿಜಯ್ ಮಟ್ಟ ಹಾಕುವುದು ಮಜವಾಗಿದೆ. ಲೋಕೇಶ್ ಕನಕರಾಜ್ ಅವರು ಪವರ್ ಫುಲ್ ಸಿನಿಮಾ ನೀಡಿರುವ ಸಾಧ್ಯತೆ ಇದೆ.

2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು.

ಇದನ್ನೂ ಓದಿ: Leo Movie: ಲಿಯೋ ಟ್ರೈಲರ್ ಔಟ್… ವಿಜಯ್ ಅಭಿಮಾನಿಗಳಿಗೆ ಹಬ್ಬ! ಅ.19ಕ್ಕೆ ಸಿನಿಮಾ ರಿಲೀಸ್

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version