ಬೆಂಗಳೂರು : ಕಾಲಿವುಡ್ ನಟ ವಿಜಯ್ ದಳಪತಿ (Vijay Thalapathy) ಮತ್ತು ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು ಸದ್ಯದಲ್ಲೇ ಡಿವೋರ್ಸ್ (Vijay And Sangeetha) ಪಡೆಯಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಹೊಸ ವದಂತಿಯ ಪ್ರಕಾರ ನಟ ಬಹುಭಾಷಾ ನಟಿ ಕೀರ್ತಿ ಸುರೇಶ್ ಜತೆ ಮದುವೆಯಾಗಲಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಜಯ್ , ರಶ್ಮಿಕಾ ಮಂದಣ್ಣ ನಟನೆಯ ʻವಾರಿಸು’ (Varisu) ಇದೇ ಜನವರಿ 12ಕ್ಕೆ ತೆರೆಗೆ ಬಂದಿದ್ದು ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿದೆ. ಈ ಸುದ್ದಿ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಪತ್ನಿ ಸಂಗೀತಾಗೆ ಡಿವೋರ್ಸ್ ಕೊಟ್ಟ ಮೇಲೆ ನಟಿ ಕೀರ್ತಿ ಸುರೇಶ್ ಜತೆ ದಳಪತಿ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.
ʻಭೈರವ’ ಮತ್ತು ʻಸರ್ಕಾರ್’ (Sarkar) ಚಿತ್ರಗಳಲ್ಲಿ ಕೀರ್ತಿ ಸುರೇಶ್ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಇದೀಗ ಪ್ರೀತಿಗೆ ತಿರುಗಿದೆ. ಮುಂದಿನ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Rashmika Mandanna | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಕಾಂಬಿನೇಶನ್ ಸಿನಿಮಾಗೆ ನೋಟಿಸ್
ವದಂತಿ ಆಗಿದ್ಯಾಕೆ?
ಇತ್ತೀಚೆಗಷ್ಟೇ ʻವಾರಿಸು’ ಆಡಿಯೊ ಲಾಂಚ್‌ನಲ್ಲಿ ವಿಜಯ್ ಪತ್ನಿ ಗೈರಾಗಿದ್ದರು. ಬಳಿಕ ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಶಾಸ್ತ್ರದಲ್ಲಿಯೂ ಸಂಗೀತಾ ಅವರು ಕಾಣಿಸಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಇದೀಗ ಡಿವೋರ್ಸ್ ವದಂತಿ ಸತ್ಯ ಎನ್ನಲಾಗುತ್ತಿದೆ.
ಇದನ್ನೂ ಓದಿ: Vijay Thalapathy | ವಿಜಯ್ ದಳಪತಿ-ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಸಾಂಗ್ ಔಟ್!
ವಿಕಿಪೀಡಿಯಾ ಪೇಜ್‌ನಲ್ಲೂ ಇಬ್ಬರು ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎಂದು ಪ್ರಕಟವಾಗಿದೆ. 1999ರಲ್ಲಿ ನಟ ವಿಜಯ್ ಹಾಗೂ ಸಂಗೀತಾ ಪ್ರೀತಿಸಿ ಮದುವೆಯಾಗಿದ್ದರು. ಶ್ರೀಲಂಕಾ ಮೂಲದ ಸಂಗೀತಾ ಅವರು, ವಿಜಯ್ ಅವರ ಅಭಿಮಾನಿಯಾಗಿದ್ದರು. ಹೀಗಾಗಿ ಅವರನ್ನ ಭೇಟಿ ಮಾಡಲು ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು. ಅಭಿಮಾನಿಯ ಪ್ರೀತಿ ಒಪ್ಪಿಕೊಂಡ ವಿಜಯ್, ಸಂಗೀತಾ ಜತೆ ಸಪ್ತಪದಿ ತುಳಿದಿದ್ದರು.
ವಿಜಯ್ ದಳಪತಿ ಲೋಕೇಶ್ ಕನಕರಾಜ್ ಅವರ ಮುಂಬರುವ ದಳಪತಿ 67ಗೆ ಸಜ್ಜಾಗುತ್ತಿದ್ದಾರೆ. ಈ ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿದೆ.