Site icon Vistara News

Vijay Antony: ನನ್ನೊಳಗೆ ನಾನು ಸತ್ತು ಹೋದೆ ಮಗಳೇ ಎಂದು ಭಾವುಕ ಪತ್ರ ಹಂಚಿಕೊಂಡ ನಟ ವಿಜಯ್‌ ಆ್ಯಂಟೊನಿ!

Vijay Antony daughter Meera

ಬೆಂಗಳೂರು: ತಮಿಳು ನಟ ಮತ್ತು ಸಂಗೀತ ಸಂಯೋಜಕ ವಿಜಯ್‌ ಆ್ಯಂಟೊನಿ (Vijay Antony) ಅವರ ಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ನಟ ಮೊದಲ ಬಾರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಚೆನ್ನೈನ ತಮ್ಮ ನಿವಾಸದಲ್ಲಿ ಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನು ಅಂತ್ಯಸಂಸ್ಕಾರ ಮಾಡಿದ ಒಂದು ದಿನದ ಬಳಿಕ ನಟ, ವಿಜಯ್ ʻʻಮಗಳು ಸತ್ತಾಗಲೇ ನಾನೂ ಒಳಗಿನಿಂದ ಸತ್ತು ಹೋದೆ’ʼ ಎಂದು ಹೇಳಿಕೊಂಡಿದ್ದಾರೆ.

ವಿಜಯ್‌ ಆ್ಯಂಟೊನಿ ತಮ್ಮ ಪತ್ರದಲ್ಲಿ ʻʻನನ್ನ ಮಗಳು ಮೀರಾ ತುಂಬಾ ಪ್ರೀತಿ ಮತ್ತು ಧೈರ್ಯಶಾಲಿ ಹುಡುಗಿ. ಅವಳು ಈಗ ಜಾತಿಯಿಲ್ಲದ ಉತ್ತಮ ಮತ್ತು ಮತ, ಜಾತಿ, ಧರ್ಮ, ಹಣ, ಬಡತನ, ಅಸೂಯೆ, ನೋವು, ದುಶ್ಚಟಗಳು ಇಲ್ಲದ ಶಾಂತಿಯುತ ಸ್ಥಳಕ್ಕೆ ಹೋಗಿದ್ದಾಳೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ. ಮಗಳು ಸತ್ತಾಗಲೇ ನಾನೂ ಒಳಗಿನಿಂದ ಸತ್ತು ಹೋದೆ. ನಾನು ಈಗ ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಪ್ರಾರಂಭಿಸುವ ಎಲ್ಲಾ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿ ಇರುತ್ತದೆ. ಇವೆಲ್ಲವೂ ಅವಳಿಂದ ಪ್ರಾರಂಭ ಆಗಿದೆ ಎಂದು ನಾನು ನಂಬಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಸೆ.19ರ ಮುಂಜಾನೆ ಎದ್ದು ನೋಡುವಾಗ ಚೆನ್ನೈಯ ನಿವಾಸದಲ್ಲಿ ಮಗಳು ನೇಣು ಬಿಗಿದುಕೊಂಡಿದ್ದು ಕಂಡುಬಂತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಯಲಿಲ್ಲ. ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು ಎನ್ನಲಾಗಿದೆ. ಮೀರಾ ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯಿಂದ ಬಳಲಸುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ .ಚೆನ್ನೈನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಹುಡುಗಿ ಆಟ ಪಾಠಗಳಲ್ಲಿ ಮುಂದಿದ್ದರೂ ಆಕೆಯನ್ನು ಖಿನ್ನತೆ ಕಾಡುತ್ತಿತ್ತು ಎನ್ನಲಾಗಿದೆ. ಇದೇ ಆಕೆಯ ಸಾವಿಗೆ ಕಾರಣವಾಯಿತು ಎನ್ನುವುದು ಪ್ರಾಥಮಿಕ ವರದಿ.

ಇದನ್ನೂ ಓದಿ; Tamil Producers Council: ತಮಿಳು ನಿರ್ಮಾಪಕರು ಗರಂ; ನಟ ಧನುಷ್‌ ಸೇರಿ ಕಾಲಿವುಡ್‌ ಸ್ಟಾರ್‌ ನಟರು ಬ್ಯಾನ್‌!

ವಿಜಯ್‌ ಆ್ಯಂಟೊನಿ ಪೋಸ್ಟ್‌

ಸಂಗೀತ ನಿರ್ದೇಶಕರಾಗಿರುವ ವಿಜಯ್‌ ಅವರು ಹಲವು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಮುಂದಿನ ಚಿತ್ರ ರಥಂ ಬಿಡುಗಡೆಯ ತರಾತುರಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ಚೆನ್ನೈಯಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮ ಭಾರಿ ಜನಪ್ರಿಯತೆ ಪಡೆದು ಹಿಟ್‌ ಆಗಿತ್ತು.

ವಿಜಯ್‌ ಅವರು ಅವರು ಹಲವಾರು ವರ್ಷಗಳಿಂದ ಸಂಗೀತ ನಿರ್ದೇಶಕರಾಗಿ ಹೆಸರಾಗಿದ್ದಾರೆ. ಪಿಚ್ಚಕ್ಕಾರನ್‌ ಸಿನಿಮಾ ಅವರಿಗೆ ಹೊಸ ಟರ್ನಿಂಗ್‌ ಪಾಯಿಂಟ್‌ ಆಗಿತ್ತು. ಅವರೊಬ್ಬ ನಿರ್ಮಾಪಕನಾಗಿ ನಟನಾಗಿ, ಚಿತ್ರಸಾಹಿತಿಯಾಗಿ, ಸಂಕಲನಕಾರನಾಗಿ, ಆಡಿಯೋ ಎಂಜಿನಿಯರ್‌ ಮತ್ತು ನಿರ್ದೇಶಕನಾಗಿ ಗಮನ ಸೆಳೆದಿದ್ದಾರೆ.ಕೆಲವು ವರ್ಷಗಳ ಹಿಂದೆ ಫಾತಿಮಾ ಅವರನ್ನು ಮದುವೆಯಾಗಿರುವ ವಿಜಯ್‌ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳು. ಪುಟ್ಟ ಸಂಸಾರ, ದೊಡ್ಡ ಸಾಧನೆಯ ನಡುವೆ ಪ್ರೊಡಕ್ಷನ್‌ ಹೌಸ್‌ ಕಟ್ಟಿಕೊಂಡಿದ್ದ ಅವರ ಬದುಕಿನಲ್ಲಿ ಈಗ ದೊಡ್ಡ ಆಘಾತವಾಗಿದೆ.

Exit mobile version