Site icon Vistara News

Vijay Antony | ಶೂಟಿಂಗ್‌ ವೇಳೆ ಅಪಘಾತ: ಕಾಲಿವುಡ್‌ ನಟ ವಿಜಯ್ ಆ್ಯಂಟೊನಿ ಗಂಭೀರ

Vijay Antony

ಬೆಂಗಳೂರು : ನಟ ವಿಜಯ್ ಆ್ಯಂಟೊನಿ (Vijay Antony) ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಸಕ್ರಿಯರಾಗಿರುವ ನಟ. ಮಲೇಷ್ಯಾದಲ್ಲಿ ʻಪಿಚ್ಚೈಕಾರನ್‌-2ʼ ಸಿನಿಮಾದ ಸಾಹಸ ದೃಶ್ಯದ ಶೂಟಿಂಗ್‌ ವೇಳೆ ವಿಜಯ್ ಆ್ಯಂಟೊನಿ ಗಂಭೀರವಾಗಿ ಗಾಯಗೊಂಡಿದ್ದಾರೆ .

ದೋಣಿಯಲ್ಲಿ ದೃಶ್ಯವನ್ನು ಚಿತ್ರೀಕರಿಸುವಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ವೇಗವಾಗಿ ಬಂದ ದೋಣಿಯೊಂದು ನಿಯಂತ್ರಣ ತಪ್ಪಿ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಆ್ಯಂಟೊನಿ ಗಾಯಗೊಂಡಿದ್ದಾರಂತೆ. ನಟರನ್ನು ಕ್ವಾಲಾಲಂಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಇದನ್ನೂ ಓದಿ | Priyanka Gandhi | ಕುಸ್ತಿ ಪಟುಗಳ ಲೈಂಗಿಕ ಕಿರುಕುಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿ; ಪ್ರಿಯಾಂಕಾ ಗಾಂಧಿ ಆಗ್ರಹ

ತಮಿಳಿನಲ್ಲಿ ʻಪಿಚ್ಚೈಕಾರನ್ 2ʼ ಮತ್ತು ತೆಲುಗಿನಲ್ಲಿ ʻಬಿಚ್ಚಗಾಡುʼ ಎಂದು ಬಿಡುಗಡೆಯಾಗಲಿದೆ. ಇದು ಕನ್ನಡದಲ್ಲಿ ʻಭಿಕ್ಷುಕ-2ʼ ಮತ್ತು ಮಲಯಾಳಂನಲ್ಲಿ ʻಪಿಚ್ಚಕಾರನ್-2ʼ ಆಗಿ ಬಿಡುಗಡೆಯಾಗಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಈಗಾಗಲೇ ಚಿತ್ರತಂಡ ಮುಗಿಸಿದೆ.

ಇದನ್ನೂ ಓದಿ | Actor Dhanush | ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ಧನುಷ್‌ 50ನೇ ಚಿತ್ರ ಘೋಷಣೆ

Exit mobile version