Site icon Vistara News

Vijay Devarakonda | ಕೊನೆಗೂ ಪ್ರೀತಿಸಿದ ಹುಡುಗಿಯ ಹೆಸರು ರಿವೀಲ್‌ ಮಾಡಿದ ವಿಜಯ್‌ ದೇವರಕೊಂಡ!

Vijay Devarakonda

ಬೆಂಗಳೂರು : ವಿಜಯ್‌ ದೇವರಕೊಂಡ (Vijay Devarakonda) ಟ್ವೀಟ್‌ ಮೂಲಕ ತಮ್ಮ ಕ್ರಶ್‌ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ಅಷ್ಟೇ ರಶ್ಮಿಕಾ ಮಂದಣ್ಣ ಜತೆ ವಿಜಯ್‌ ದೇವರಕೊಂಡ ವಿದೇಶ ಪ್ರವಾಸದಲ್ಲಿ ಇದ್ದಾರೆ ಎಂಬ ಗಾಸಿಪ್‌ಗಳು ಹರಿದಾಡಿದ್ದವು. ಇದೀಗ ವಿಜಯ್‌ ದೇವರಕೊಂಡ ಕಾಲೇಜು ದಿನಗಳಲ್ಲಿ ನಟಿ ಸಮಂತಾ ಅವರನ್ನು ಪ್ರೀತಿಸುತ್ತಿದ್ದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಸಮಂತಾ ನಟನೆಯ ಯಶೋದಾ ಸಿನಿಮಾ ಟ್ರೈಲರ್‌ ಶೇರ್‌ ಮಾಡಿದ ವಿಜಯ್‌ ʻʻಕಾಲೇಜು ದಿನಗಳಿಂದಲೂ ಪರದೆಯ ಮೇಲೆ ಸಮಂತಾ ನೋಡಿ ಇಷ್ಟ ಪಡುತ್ತಿದ್ದೆ. ನಾನು ಇಷ್ಟ ಪಟ್ಟ ಮೊದಲ ಹುಡುಗಿ ಸಮಂತಾ. ಇದೀಗ ಹತ್ತಿರದಲ್ಲೇ ನೋಡುತ್ತಿರುವೆ. ಅವರು ಹೇಗೆ ಇದ್ದರೂ, ಏನೇ ಇದ್ದರೂ, ನಾನು ಇಷ್ಟಪಡುತ್ತಲೇ ಇರುತ್ತೇನೆ’’ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ | Liger Movie | ಅಪ್ಪು ಪುಣ್ಯಭೂಮಿಗೆ ನಮಿಸಿದ ಲೈಗರ್‌ ತಂಡ: ಕನ್ನಡದಲ್ಲಿಯೇ ಮಾತನಾಡಿದ ವಿಜಯ್‌ ದೇವರಕೊಂಡ

ನಟಿ ಸಮಂತಾ ‌ನಟನೆಯ (Samantha) ʻಯಶೋದಾʼ ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ. ಕನ್ನಡದ ಟ್ರೈಲರ್‌ ಅನ್ನು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ, ತಮಿಳಿನಲ್ಲಿ ಸೂರ್ಯ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಹಿಂದಿಯಲ್ಲಿ ವರುಣ್ ಧವನ್ ಬಿಡುಗಡೆ ಮಾಡಿದ್ದಾರೆ.

ಟ್ರೈಲರ್‌ ನೋಡುವಾಗ ಆಕ್ಷನ್‌ ಥ್ರಿಲ್ಲರ್‌ ಆಗಿದ್ದು, ಹಿನ್ನೆಲೆ ಸಂಗೀತದ ಬಗ್ಗೆ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ದೃಶ್ಯ ನೋಡುವಾಗ ಕುತೂಹಲಕ್ಕೆ ಎಡೆ ಮಾಡಿಕೊಡುವಂತಿದೆ. ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ನಿರ್ದೇಶನ ಮಾಡಿದ್ದಾರೆ. ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ನವೆಂಬರ್ 11ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ | ಲೈಗರ್‌ ಪ್ರಮೋಶನ್‌ಗೆ ಮಾಲ್‌ಗೆ ಹೋಗಿ, ಅಲ್ಲಿರೋಕೆ ಆಗದೆ ವಾಪಸ್‌ ಬಂದ ವಿಜಯ್‌ ದೇವರಕೊಂಡ

Exit mobile version