Site icon Vistara News

Rashmika Mandanna: ವಿಜಯ್‌ ದೇವರಕೊಂಡ ಜತೆ ರಶ್ಮಿಕಾ; ಸೀಕ್ರೆಟ್‌ ಡೇಟಿಂಗ್‌ ವಿಡಿಯೊ ವೈರಲ್‌!

Vijay Deverakonda, Rashmika Mandanna

ಬೆಂಗಳೂರು: ನ್ಯಾಶನಲ್‌ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ʻʻಗೀತಾ ಗೋವಿಂದಂʼʼ, ʻಡಿಯರ್ ಕಾಮ್ರೇಡ್‌ʼನಂತಹ ಹಿಟ್ ಸಿನಿಮಾಗಳಲ್ಲಿ ನಾಯಕ ನಾಯಕಿಯಾಗಿ ಮಿಂಚಿದ್ದಾರೆ. ಆನ್‌ಸ್ಕ್ರೀನ್ ಅಲ್ಲದೇ ಆಫ್‌ ಆಫ್‌ಸ್ಕ್ರೀನ್‌ನಲ್ಲಿಯೂ ಇವರಿಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಲೇ ಇವೆ. ಇಷ್ಟಾದರೂ ಈ ಜೋಡಿ ಯಾವುದೇ ಗಾಸಿಪ್‌ಗಳ ಬಗ್ಗೆ ಸ್ಪಷ್ಟಪಡಿಸಿಲ್ಲ. ಅಷ್ಟೇ ಅಲ್ಲದೇ ರಶ್ಮಿಕಾ ಅವರ ಜನುದಿನಕ್ಕೂ ವಿಜಯ್‌ ದೇವರಕೊಂಡ ವಿಶ್‌ ಮಾಡಿಲ್ಲ. ಈ ಕಾರಣ ಇವರಿಬ್ಬರೂ ಬೇರೆಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಜೋಡಿ ಏಕಾಏಕಿ ಸ್ನೇಹಿತರೊಂದಿಗೆ ಒಟ್ಟಿಗೆ ಊಟ ಮಾಡುವ ವಿಡಿಯೊ ವೈರಲ್‌ ಆಗಿದೆ. ಜೋಡಿಯ ಡೇಟಿಂಗ್ ನ್ಯೂಸ್ ನಿಜ ಎಂಬುದ್ದಕ್ಕೆ ಫ್ಯಾನ್ಸ್‌ಗೆ ಹೊಸ ಸಾಕ್ಷಿಯೊಂದು ಸಿಕ್ಕಿದಂತಾಗಿದೆ.

ವಿಡಿಯೊದಲ್ಲಿ, ವಿಜಯ್ ಮತ್ತು ರಶ್ಮಿಕಾ ಸ್ನೇಹಿತರ ಜತೆಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವುದು ಕಾಣಬಹುದು. ವಿಜಯ್ ಅವರ ಸಹೋದರ ಆನಂದ್ ಕೂಡ ಇದರಲ್ಲಿದ್ದಾರೆ. ನೆಟ್ಟಿಗರೊಬ್ಬರು ʻʻಇವರಿಬ್ಬರೂ ಇನ್ನೂ ಒಟ್ಟಿಗೆ ಇದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ಕಮೆಂಟ್‌ ಮಾಡಿದರೆ, ಮತ್ತೊಬ್ಬರು ಬರೆದಿದ್ದಾರೆ, ʻʻದಂಪತಿ ಕ್ಯೂಟ್‌ ಆಗಿದ್ದಾರೆʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Rashmika Mandanna: `ಅನಿಮಲ್‌’ ಶೂಟಿಂಗ್‌ ಕಂಪ್ಲೀಟ್‌ ಮಾಡಿದ ರಶ್ಮಿಕಾ ಮಂದಣ್ಣ

ವೈರಲ್‌ ವಿಡಿಯೊ

Vijay D and Rashmika spotted with their friends & family. So they are actually dating.
by u/Muted-Expression-109 in BollyBlindsNGossip

ವದಂತಿಗಳು ಪ್ರಾರಂಭವಾದದ್ದು ಹೇಗೆ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್‌ ಸಕ್ಸೆಸ್‌ ಕಂಡಿತು. 2019 ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.

ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ಅನಿಮಲ್ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಅವರ ಮುಂದಿನ ಚಿತ್ರ ಖುಷಿ ಸೆಪ್ಟೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಬರಲಿದೆ.

Exit mobile version