Site icon Vistara News

Vijay Raghavendra: ವಿಜಯ ರಾಘವೇಂದ್ರ ʻಕದ್ದ ಚಿತ್ರʼಕ್ಕೆ ಶಿವಣ್ಣನ ಕ್ಲಾಸ್‌!

Shivanna support kaddha chitra

ವಿಜಯ ರಾಘವೇಂದ್ರ (Vijay Raghavendra) ನಾಯಕನಾಗಿ ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ತಯಾರಾಗಿದೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರವನ್ನು ಸುಹಾಸ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಒಂದು ಹಾಡು ಮತ್ತು ಟೀಸರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕದ್ದ ಚಿತ್ರ ಚಿತ್ರತಂಡಕ್ಕೆ ಶಿವಣ್ಣ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻಕೆ.ಜಿ.ಎಫ್, ಕಾಂತಾರ ಖ್ಯಾತಿ‌ ನಮ್ಮ ಚಿತ್ರರಂಗದ್ದು, ಕದ್ದು ಸಿನ್ಮಾ ಮಾಡ್ತಿರಾ?ʼʼಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ತಮಾಷೆಯ ವಿಡಿಯೊ ಇದೀಗ ವೈರಲ್‌ ಆಗಿದೆ.

ಶೀರ್ಷಿಕೆಯಲ್ಲೇ ಸಿನೆಮಾದಲ್ಲಿ ಏನೋ ಗಮ್ಮತ್ತಿದೆ ಅನಿಸುವ ಈ ‘ಕದ್ದ ಚಿತ್ರ’ ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಕಥಾಹಂದರದಲ್ಲಿ ತಯಾರಾಗಿದೆ. ಚಿತ್ರದಲ್ಲಿ ನಾಯಕ ವಿಜಯ್ ರಾಘವೇಂದ್ರ ಮೂರು ಶೇಡ್‌ಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಈವರೆಗೂ ನಟಿಸದ, ಕಾಣಿಸದ ಪಾತ್ರದ ಮೂಲಕ ಚಿನ್ನಾರಿ ಮುತ್ತ ಮೋಡಿ ಮಾಡಲಿದ್ದಾರೆ.

ʻಕದ್ದ ಚಿತ್ರʼ ಸಿನಿಮಾ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಶಿವಣ್ಣನಿಗೆ ಟ್ರೈಲರ್ ತೋರಿಸಿ ಶಹಬಾಸ್ ಎನ್ನಿಸಿಕೊಂಡಿದೆ ಚಿತ್ರತಂಡ. ಆಗಸ್ಟ್ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಟೋಬಿ ಎದುರು ಕದ್ದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ತೆಲುಗು ಸಿನಿಮಾವೊಂದರಲ್ಲಿ ನಟಿಸಿ, ಶಿವಾಜಿ ಸುರತ್ಕಲ್, ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಮುಂತಾದ ಸಿನಿಮಾಗಳ ಮೂಲಕ ಒಂದಷ್ಟು ಹೆಸರು ಮಾಡಿರುವ ನಮ್ರತಾ ಸುರೇಂದ್ರನಾಥ್ (Namrata Surendranath) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಬೆಳ್ತಂಗಡಿ ಕಾಂಗ್ರೆಸ್‌ಗೆ ತಾರಾಮೆರುಗು; ಭಾವಮೈದನ ಪರ ಪ್ರಚಾರಕ್ಕಿಳಿದ ನಟ ವಿಜಯ ರಾಘವೇಂದ್ರ

ನಿರ್ದೇಶಕನಾಗಿಯೂ ಹೆಸರು ಮಾಡಿರುವ ರಾಘು ಶಿವಮೊಗ್ಗ ಪಬ್ಲಿಷರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಮಗಳ ಪಾತ್ರದಲ್ಲಿ ಬೇಬಿ ಆರಾಧ್ಯ ನಟಿಸಿದ್ದಾಳೆ. ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ಕುಮಾರ್ ನೆಗೆಟಿವ್ ಶೇಡಿನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಗೌತಮ್ ಮನು ಸಂಕಲನ, ಸ್ಟೀಫನ್ ಕೊರಿಯೋಗ್ರಫಿ, ದುಷ್ಯಂತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Exit mobile version