Vijay Raghavendra: ವಿಜಯ ರಾಘವೇಂದ್ರ ʻಕದ್ದ ಚಿತ್ರʼಕ್ಕೆ ಶಿವಣ್ಣನ ಕ್ಲಾಸ್‌! - Vistara News

South Cinema

Vijay Raghavendra: ವಿಜಯ ರಾಘವೇಂದ್ರ ʻಕದ್ದ ಚಿತ್ರʼಕ್ಕೆ ಶಿವಣ್ಣನ ಕ್ಲಾಸ್‌!

Vijay Raghavendra: ಶೀರ್ಷಿಕೆಯಲ್ಲೇ ಸಿನೆಮಾದಲ್ಲಿ ಏನೋ ಗಮ್ಮತ್ತಿದೆ ಅನಿಸುವ ಈ ‘ಕದ್ದ ಚಿತ್ರ’ ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಕಥಾಹಂದರದಲ್ಲಿ ತಯಾರಾಗಿದೆ.

VISTARANEWS.COM


on

Shivanna support kaddha chitra
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯ ರಾಘವೇಂದ್ರ (Vijay Raghavendra) ನಾಯಕನಾಗಿ ನಟಿಸಿರುವ ‘ಕದ್ದ ಚಿತ್ರ’ (Kadda Chitra) ಸಿನಿಮಾ ತಯಾರಾಗಿದೆ. ಶೀರ್ಷಿಕೆಯಲ್ಲಿಯೇ ವೈಶಿಷ್ಟ್ಯವನ್ನು ಬಚ್ಚಿಟ್ಟುಕೊಂಡಿರುವ ಈ ಚಿತ್ರವನ್ನು ಸುಹಾಸ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಒಂದು ಹಾಡು ಮತ್ತು ಟೀಸರ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕದ್ದ ಚಿತ್ರ ಚಿತ್ರತಂಡಕ್ಕೆ ಶಿವಣ್ಣ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ʻʻಕೆ.ಜಿ.ಎಫ್, ಕಾಂತಾರ ಖ್ಯಾತಿ‌ ನಮ್ಮ ಚಿತ್ರರಂಗದ್ದು, ಕದ್ದು ಸಿನ್ಮಾ ಮಾಡ್ತಿರಾ?ʼʼಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ತಮಾಷೆಯ ವಿಡಿಯೊ ಇದೀಗ ವೈರಲ್‌ ಆಗಿದೆ.

ಶೀರ್ಷಿಕೆಯಲ್ಲೇ ಸಿನೆಮಾದಲ್ಲಿ ಏನೋ ಗಮ್ಮತ್ತಿದೆ ಅನಿಸುವ ಈ ‘ಕದ್ದ ಚಿತ್ರ’ ಸೈಕಾಲಾಜಿಕಲ್ ಥ್ರಿಲ್ಲರ್ ಜಾನರಿನ ಕಥಾಹಂದರದಲ್ಲಿ ತಯಾರಾಗಿದೆ. ಚಿತ್ರದಲ್ಲಿ ನಾಯಕ ವಿಜಯ್ ರಾಘವೇಂದ್ರ ಮೂರು ಶೇಡ್‌ಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಈವರೆಗೂ ನಟಿಸದ, ಕಾಣಿಸದ ಪಾತ್ರದ ಮೂಲಕ ಚಿನ್ನಾರಿ ಮುತ್ತ ಮೋಡಿ ಮಾಡಲಿದ್ದಾರೆ.

ʻಕದ್ದ ಚಿತ್ರʼ ಸಿನಿಮಾ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಶಿವಣ್ಣನಿಗೆ ಟ್ರೈಲರ್ ತೋರಿಸಿ ಶಹಬಾಸ್ ಎನ್ನಿಸಿಕೊಂಡಿದೆ ಚಿತ್ರತಂಡ. ಆಗಸ್ಟ್ 25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಟೋಬಿ ಎದುರು ಕದ್ದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ತೆಲುಗು ಸಿನಿಮಾವೊಂದರಲ್ಲಿ ನಟಿಸಿ, ಶಿವಾಜಿ ಸುರತ್ಕಲ್, ಮಿರ್ಚಿ ಮಂಡಕ್ಕಿ ಖಡಕ್ ಚಾಯ್ ಮುಂತಾದ ಸಿನಿಮಾಗಳ ಮೂಲಕ ಒಂದಷ್ಟು ಹೆಸರು ಮಾಡಿರುವ ನಮ್ರತಾ ಸುರೇಂದ್ರನಾಥ್ (Namrata Surendranath) ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಬೆಳ್ತಂಗಡಿ ಕಾಂಗ್ರೆಸ್‌ಗೆ ತಾರಾಮೆರುಗು; ಭಾವಮೈದನ ಪರ ಪ್ರಚಾರಕ್ಕಿಳಿದ ನಟ ವಿಜಯ ರಾಘವೇಂದ್ರ

ನಿರ್ದೇಶಕನಾಗಿಯೂ ಹೆಸರು ಮಾಡಿರುವ ರಾಘು ಶಿವಮೊಗ್ಗ ಪಬ್ಲಿಷರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ವಿಜಯ್ ಮಗಳ ಪಾತ್ರದಲ್ಲಿ ಬೇಬಿ ಆರಾಧ್ಯ ನಟಿಸಿದ್ದಾಳೆ. ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ಕುಮಾರ್ ನೆಗೆಟಿವ್ ಶೇಡಿನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ, ಗೌತಮ್ ಮನು ಸಂಕಲನ, ಸ್ಟೀಫನ್ ಕೊರಿಯೋಗ್ರಫಿ, ದುಷ್ಯಂತ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Yuva Movie: ಡ್ಯಾನ್ಸ್ ಮೂವ್ಸ್‌ನಲ್ಲಿ ಕಿಚ್ಚು ಹಚ್ಚಿದ ದೊಡ್ಮನೆ ಕುಡಿಗಳು: ಯಾರು ಬೆಸ್ಟ್?

ಇದೀಗ ‘ಒಬ್ಬನೇ ಶಿವ, ಒಬ್ಬನೇ ಯುವ’ ಹಾಡಿಗೆ ಶಿವರಾಜ್ ಕುಮಾರ್ ಹಾಗೂ ಯುವ ರಾಜ್​ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಒಳ್ಳೆಯ ಡ್ಯಾನ್ಸ್ ಮೂವ್ಸ್ ಸಹ ತೋರಿಸಿದ್ದಾರೆ ಯುವ. 

VISTARANEWS.COM


on

Yuva Rajkumar And Shiva Rajkumar Dance Together obbane shiva song
Koo

ಬೆಂಗಳೂರು: ಚಾಮರಾಜನಗರ ಚಾಮರಾಜೇಶ್ವರ ದೇಗುಲದ ಆವರಣದಲ್ಲಿ ನಟ ಯುವ ರಾಜಕುಮಾರ್ ಅಭಿನಯದ ಚೊಚ್ಚಲ ಚಿತ್ರ ʼಯುವʼ (Yuva Movie) ಸಿನಿಮಾದ ಮೊದಲ ಸಾಂಗ್‌ “ಒಬ್ಬನೇ ಶಿವ ಒಬ್ಬನೇ ಯುವ” ಶನಿವಾರ (ಮಾ.2) ಸಂಜೆ ಬಿಡುಗಡೆಯಾಯಿತು. ರಾಜ್ ಕುಟುಂಬದ ಅಭಿಮಾನಿಗಳಿಂದ ಯುವ ಚಿತ್ರದ ಆಡಿಯೋ ಲಾಂಚ್ ಮಾಡಿಸಲಾಗಿದ್ದು, ಹಾಡಿನಲ್ಲಿ ವರನಟ ಡಾ. ರಾಜಕುಮಾರ್‌ ಅವರ​ ಮೊಮ್ಮಗನ ಮಾಸ್ ಅವತಾರ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದೀಗ ‘ಒಬ್ಬನೇ ಶಿವ, ಒಬ್ಬನೇ ಯುವ’ ಹಾಡಿಗೆ ಶಿವರಾಜ್ ಕುಮಾರ್ ಹಾಗೂ ಯುವ ರಾಜ್​ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಒಳ್ಳೆಯ ಡ್ಯಾನ್ಸ್ ಮೂವ್ಸ್ ಸಹ ತೋರಿಸಿದ್ದಾರೆ ಯುವ. 

ಯುವ ರಾಜ್​ಕುಮಾರ್ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈಗಾಗಲೇ ಕೆಲವು ಸೆಲೆಬ್ರಿಟಿಗಳು ವಿಡಿಯೋ ಹಂಚಿಕೊಂಡು ಯುವ ರಾಜ್​ಕುಮಾರ್​​ಗೆ ಶುಭಾಶಯ ತಿಳಿಸಿದ್ದಾರೆ. ಸಾಂಗ್ ಬಿಡುಗಡೆಗೆ ಯುವರಾಜ್ ಕುಮಾರ್ ಅವರು ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು, ಅಭಿಮಾನಿಗಳ ಜೋಶ್ ಕಂಡು ಯುವರಾಜ್ ಫುಲ್ ಖುಷಿಯಾದರು. ಚಾಮರಾಜನಗರ ಜಿಲ್ಲೆಯ ಐದು ತಾಲೂಕಿನ ಐವರು ವ್ಯಕ್ತಿಗಳಿಂದ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಅಣ್ಣಾವ್ರು ಹಾಗೂ ಅಣ್ಣಾವ್ರ ಕುಟುಂಬಸ್ಥರು ನಟಿಸಿರುವ ಚಿತ್ರಗಳನ್ನು ಎಲ್ಲಾ ವಯೋಮಾನದವರು ವೀಕ್ಷಿಸುತ್ತಾರೆ ಎಂಬ ಕಾರಣದಿಂದ ಮಕ್ಕಳು, ಮಧ್ಯ ವಯಸ್ಕರು ಹಾಗೂ ವೃದ್ಧೆ ಮೂಲಕ ಸಾಂಗ್‌ ರಿಲೀಸ್‌ ಮಾಡಿಸಲಾಯಿತು.

ಇದನ್ನೂ ಓದಿ: Yuva Rajkumar: ಅಭಿಮಾನಿಗಳಿಂದ ʼಯುವʼ ಚಿತ್ರದ ಮೊದಲ ಸಾಂಗ್‌ ರಿಲೀಸ್‌; ಮಾಸ್ ಲುಕ್‌ನಲ್ಲಿ ಯುವ ರಾಜಕುಮಾರ್

ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸಂಸ್ಥೆ ಬಂಡವಾಳ ಹೂಡಿದ್ದು, ಖ್ಯಾತ ನಿರ್ದೇಶಕ ಸಂತೋಷ್ ಆನಂದ್​ರಾಮ್ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ಸಪ್ತಮಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಯುವ-ಸಪ್ತಮಿ ಗೌಡ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳುತ್ತಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ.

ಫಸ್ಟ್ ಸಾಂಗ್‌ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಜತೆ ಸೇರಿ ಸಂತೋಷ್ ಆನಂದ್ ರಾಮ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಡಿದ್ದಾರೆ. ಮೋಹನ್ ಭಜರಂಗಿ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ. ಅಂದಾಜು 3 ಕೋಟಿ ರೂ. ಮೊತ್ತಕ್ಕೆ ‘ಯುವ’ ಆಡಿಯೊ ರೈಟ್ಸ್ ಆನಂದ್ ಆಡಿಯೊ ಪಾಲಾಗಿದೆ ಎನ್ನಲಾಗಿದೆ.

Continue Reading

ಟಾಲಿವುಡ್

Vasishta Simha: ಮಿಲ್ಕಿ ಬ್ಯೂಟಿ ಜತೆ ಮೆರವಣಿಗೆ ಹೊರಟ ಕನ್ನಡದ ಸಿಂಹ!

Vasishta Simha: ʻಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2ʼ ತಯಾರಾಗುತ್ತಿದೆ. ಅದರ ಭಾಗವಾಗಿ ಮಾ.2ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

VISTARANEWS.COM


on

Tamannaah to star next in Odela 2
Koo

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ (Vasishta Simha) ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ `ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾ (odela railway station) ಮೂಲಕ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ. ಈ ಮೂಲಕ ತೆಲುಗು ನೆಲದಲ್ಲಿ ಗಾಯನದ ಜತೆಗೆ ಕಲಾ ಸೇವೆಯನ್ನೂ ಮುಂದುವರಿಸಲಿದ್ದಾರೆ.

2022ರಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ʻಓದೆಲಾ ರೈಲ್ವೆ ಸ್ಟೇಷನ್ʼ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಕಾಣಿಸಿದ್ದಾರೆ. ಇದೀಗ ʻಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2ʼ ತಯಾರಾಗುತ್ತಿದೆ. ಅದರ ಭಾಗವಾಗಿ ಮಾ.2ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಮಿಲ್ಕ್​ ಬ್ಯೂಟಿ ತಮನ್ನಾ, ವಸಿಷ್ಠ ಸಿಂಹ ಫೋಟೋಗೆ ಪೋಸ್ ಕೊಟ್ಟಿದ್ದು, ಇದರಲ್ಲಿ ಹರಿಪ್ರಿಯ ಕೂಡ ಇದ್ದಾರೆ. ʻಓದೆಲಾ ರೈಲ್ವೆ ಸ್ಟೇಷನ್ʼ ಸೀಕ್ವೆಲ್​ನ ಶೂಟಿಂಗ್ ನಿನ್ನೆಯಿಂದನೇ ಪ್ರಾರಂಭವಾಗಿದೆ.

ʻಓದೆಲಾ ರೈಲ್ವೆ ಸ್ಟೇಷನ್ʼ ಮೊದಲ ಭಾಗದಲ್ಲಿ ನಟಿ ಹೆಬಾ ಪಟೇಲ್ (Hebah Patel) ಜತೆ ವಸಿಷ್ಠ ಸಿಂಹ ಅಭಿನಯಿಸಿದ್ದರು. ಆದರೆ ಎರಡನೇ ಭಾಗದಲ್ಲಿ ಮಿಲ್ಕ್​​ ಬ್ಯೂಟಿ ತಮನ್ನಾ ಭಾಟಿಯಾ ಜತೆ ವಸಿಷ್ಠ ಸಿಂಹ ಹೆಜ್ಜೆ ಹಾಕಲಿದ್ದಾರೆ. ಹಾಗಂತ ಹೆಬಾ ಪಟೇಲ್ ಇಲ್ಲ ಅಂತಲ್ಲ. ಅವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: Vasishta Simha: ಯೂಟ್ಯೂಬ್‌ನಲ್ಲಿ ʼಕಾಲಚಕ್ರʼ ಸಿನಿಮಾ ರಿಲೀಸ್; ಚಿತ್ರತಂಡದ ಬಗ್ಗೆ ವಸಿಷ್ಠ ಸಿಂಹ ಬೇಸರ

ಮಧು ಕ್ರಿಯೇಷನ್ಸ್ ಮತ್ತು ಸಂಪತ್ ನಂದಿ ಟೀಂ ವರ್ಕ್ ಬ್ಯಾನರ್ ನಡಿ ಡಿ.ಮಧು ಚಿತ್ರ ನಿರ್ಮಾಣ ಮಾಡುತ್ತಿದ್ದು, ಅಶೋಕ ತೇಜ ಓದೆಲಾ ರೈಲ್ವೆ ಸ್ಟೇಷನ್ ಸೀಕ್ವೆಲ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೌಂದರ್ ರಾಜನ್ ಎಸ್ ಛಾಯಾಗ್ರಹಣ, ಕಾಂತಾರ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

Continue Reading

South Cinema

Varalaxmi Sarathkumar:‌ 14 ವರ್ಷದ ಪ್ರೀತಿಗೆ 38ನೇ ವಯಸ್ಸಿನಲ್ಲಿ ನಿಶ್ಚಿತಾರ್ಥದ ಮುದ್ರೆ ಹಾಕಿದ ಮಾಣಿಕ್ಯ ನಟಿ!

Varalaxmi Sarathkumar:‌  ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆ

VISTARANEWS.COM


on

Varalaxmi Sarathkumar gets engaged Nicholai Sachdev
Koo

ಬೆಂಗಳೂರು: ಬಹುಭಾಷಾ ನಟ ಶರತ್‌ಕುಮಾರ್ (Varalaxmi Sarathkumar) ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದಾರೆ. ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಆರ್ಟ್ ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ (Nicholai Sachdev) ಅವರೊಂದಿಗೆ ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಸಿನಿಮಾ ತಜ್ಞ ರಮೇಶ್ ಬಾಲಾ ಅವರು ನಿಶ್ಚಿತಾರ್ಥ ಸಮಾರಂಭದ ಫೋಟೊವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವರಲಕ್ಷ್ಮಿ ಮತ್ತು ನಿಕೋಲಾಯ್ ಅವರ ಪ್ರೇಮಕಥೆ!

ರಮೇಶ್ ಅವರು ಜೋಡಿಯ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. “ನಟಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರು ಮಾರ್ಚ್ 1ರಂದು ಮುಂಬೈನಲ್ಲಿ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಕಳೆದ 14 ವರ್ಷಗಳಿಂದ ಪರಸ್ಪರ ಪರಿಚಿತರಾದ ವರಲಕ್ಷ್ಮಿ ಮತ್ತು ನಿಕೋಲಾಯ್ ತಮ್ಮ ಪೋಷಕರ ಆಶೀರ್ವಾದದೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡರು. ಈ ವರ್ಷದ ಕೊನೆಯಲ್ಲಿ ಜೋಡಿ ವಿವಾಹವಾಗಲಿದೆʼʼಎಂದು ಬರೆದುಕೊಂಡಿದ್ದಾರೆ.

ನಿಶ್ಚಿತಾರ್ಥ ಸಮಾರಂಭದಲ್ಲಿ, ವರಲಕ್ಷ್ಮಿ ರೇಷ್ಮೆ ಸೀರೆಯಲ್ಲಿ ಮಿಂಚುತ್ತಿದ್ದರು. 2020 ರಲ್ಲಿ ವರಲಕ್ಷ್ಮಿ ಅವರು ಸಿನಿಮಾಗಳನ್ನು ತೊರೆದು ಉದ್ಯಮಿಯೊಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಇದಾದ ಬಳಿಕ ನಟಿ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇದನ್ನೂ ಓದಿ: Simple Suni: ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ಸಿಂಪಲ್‌ ಸುನಿ!

ಇನ್ನೇನು ಶೀಘ್ರದಲ್ಲಿಯೇ ಈ ಜೋಡಿಯ ಮದುವೆಯ ದಿನಾಂಕವೂ ಘೋಷಣೆ ಆಗಲಿದೆ. ಈ ಮೊದಲು ವರಲಕ್ಷ್ಮಿ ಶರತ್‌ಕುಮಾರ್, ತಮಿಳು ನಟ ವಿಶಾಲ್ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಾಲಿವುಡ್‌ನಲ್ಲಿ ಹರಿದಾಡಿದ್ದವು.

ವರಲಕ್ಷ್ಮಿ ಅವರು ಇತ್ತೀಚೆಗೆ ಪ್ರಶಾಂತ್ ವರ್ಮಾ ಅವರ ತೇಜ ಸಜ್ಜಾ ಅಭಿನಯದ ತೆಲುಗು ಚಿತ್ರ ʻಹನುಮಾನ್ ಚಿತ್ರದಲ್ಲಿʼ ಕಾಣಿಸಿಕೊಂಡಿದ್ದರು. ಧನುಷ್ ಅವರ ಮುಂಬರುವ ತಮಿಳು ಚಿತ್ರ ʻರಾಯನ್‌ʼನಲ್ಲಿ ನಟಿಸಲು ರೆಡಿಯಾಗಿದ್ದಾರೆ. ʻಶಬರಿʼ ಎಂಬ ತೆಲುಗು ಚಿತ್ರದ ಹೊರತಾಗಿ ಮಲಯಾಳಂ ಚಿತ್ರ ʻಕಲರ್ಸ್ʼನಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Yash: ಯಶ್ ಬೆಂಗಾವಲು ವಾಹನ ಹರಿದು ಗಾಯಗೊಂಡಿದ್ದ ಯುವಕನಿಂದ ದೂರು

Actor Yash: ಯುವಕ ಉಮೇಶ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಕಾಲ ಮೇಲೆ ಹರಿದ ಕಾರನ್ನು ಚಲಾಯಿಸುತ್ತಿದ್ದ ಚಾಲಕನ ಪತ್ತೆಗೆ ಒತ್ತಾಯಿಸಿದ್ದಾರೆ. ಕಾರಿನ ಚಾಲಕನಿಗೆ ಕಾನೂನು ರೀತಿ ಶಿಕ್ಷೆ ಆಗಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

VISTARANEWS.COM


on

Actor Yash Fan Who Injured By Followers Car Police Complaint
Koo

ಬೆಂಗಳೂರು: ಫೆಬ್ರವರಿ 29 ರಂದು ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್‌ (Actor Yash) ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅವರಲ್ಲಿ ಕೆಲವು ಯಶ್ (Actor Yash) ಅವರ ಕಾರನ್ನು ಹಿಂಬಾಲಿಸಿದ್ದರು. ಈ ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆ ಯುವಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಯುವಕ ಉಮೇಶ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಮ್ಮ ಕಾಲ ಮೇಲೆ ಹರಿದ ಕಾರನ್ನು ಚಲಾಯಿಸುತ್ತಿದ್ದ ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರಿನ ಚಾಲಕನಿಗೆ ಕಾನೂನು ರೀತಿ ಶಿಕ್ಷೆ ಆಗಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಯಶ್ ಬರ್ತ್​​ಡೇ (Actor Yash) ದಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಕಟೌಟ್ ನಿಲ್ಲಿಸುವಾಗ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಗುಲಿ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಈ ದುರ್ಘಟನೆಯ ಕಹಿ ನೆನಪು ಹಸಿಯಾಗಿ ಇರುವಾಗಲೇ ಮತ್ತೊಂದು ಅಂಥದ್ದೇ ಘಟನೆ ನಡೆದಿತ್ತು. ನಟ ಯಶ್​ ಬೆಂಗಾವಲು ವಾಹನ ಹರಿದು ಅಭಿಮಾನಿಗೆ ಗಾಯ ಆಗಿತ್ತು. ಕೂಡಲೇ ಆ ಯುವಕನನ್ನು ಬಳ್ಳಾರಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಂಡಿದ್ದು, ತಮಗೆ ಗಾಯ ಮಾಡಿದ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Actor Yash: ಕರುವಿಗೆ ಬಾಟಲ್ ಹಾಲು ಕುಡಿಸಿದ ರಾಕಿಂಗ್ ಫ್ಯಾಮಿಲಿ!

ಗದಗ ಘಟನೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್‌ ಗಾತ್ರದ ಕಟೌಟ್‌ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್‌ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು. ಇದಾದ ಬಳಿಕ ಯಶ್‌ ಅವರು ಮೃತಪಟ್ಟ ಮೂವರು ಅಭಿಮಾನಿಗಳ (Actor Yash) ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

Continue Reading
Advertisement
Under construction bhandara mane of Pilichamundi Devasthanam vandalised
ದಕ್ಷಿಣ ಕನ್ನಡ2 mins ago

Temple demolition : ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರಮನೆ ರಾತ್ರೋರಾತ್ರಿ ಧ್ವಂಸ

Shreyanka Patil
ಕ್ರೀಡೆ9 mins ago

WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

Viral video us
ವೈರಲ್ ನ್ಯೂಸ್15 mins ago

Viral Video: ಥೂ ಅಸಹ್ಯ! ಹಣಕ್ಕಾಗಿ ವಿದ್ಯಾರ್ಥಿಗಳಿಂದ ದಾನಿಗಳ ಕಾಲು ನೆಕ್ಕಿಸಿದ ಶಾಲಾ ನಿರ್ವಾಹಕರು

Harsh Vardhan
ಪ್ರಮುಖ ಸುದ್ದಿ16 mins ago

Harsh Vardhan: ಬಿಜೆಪಿ ಟಿಕೆಟ್‌ ನಿರಾಕರಣೆ; ರಾಜಕೀಯವನ್ನೇ ತೊರೆದ ಹರ್ಷವರ್ಧನ್!

Shehbaz Shariff
ಪ್ರಮುಖ ಸುದ್ದಿ33 mins ago

Pakistan Prime Minster : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆ

Nathan Lyon
ಕ್ರೀಡೆ43 mins ago

Nathan Lyon: ಬ್ಯಾಟಿಂಗ್​ನಲ್ಲಿ ವಿಶ್ವ ದಾಖಲೆ ಬರೆದ ಬೌಲರ್​ ನಥಾನ್​ ಲಿಯೋನ್

Murder Case Son kills Mother
ಕ್ರೈಂ45 mins ago

Murder Case: ಹಣಕ್ಕಾಗಿ ತಾಯಿಯನ್ನೇ ಪೀಡಿಸುತ್ತಿದ್ದ ಧೂರ್ತ; ಕೊನೆಗೆ ಅಮ್ಮನ ಕೊಂದು ತಾನೂ ಸತ್ತ

Murder Case _ Shootout
ಉಡುಪಿ55 mins ago

Murder Case : ಒಂಟಿ ಮನೆಯಲ್ಲಿ ಫೈರಿಂಗ್‌ ಸೌಂಡ್‌, ನಿಗೂಢವಾಗಿ ಕೊಲೆ ಮಾಡಿ ಹೋದವರು ಯಾರು?

Pawan Singh
ಪ್ರಮುಖ ಸುದ್ದಿ1 hour ago

BJP candidate list : ಬಿಜೆಪಿ ಟಿಕೆಟ್ ತಿರಸ್ಕರಿಸಿದ ಭೋಜಪುರಿ ಗಾಯಕ ಪವನ್ ಸಿಂಗ್​

Mother attack to child
ಬೆಂಗಳೂರು2 hours ago

Bengaluru News : ಛೇ.. ಇವಳೆಂಥಾ ತಾಯಿ? ಬುದ್ಧಿ ಕಲಿಸಲು 3 ವರ್ಷದ ಮಗುವನ್ನು ಕೂಡಿಹಾಕಿದ್ದಳಂತೆ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ11 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು22 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು1 day ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌