ಬೆಂಗಳೂರು: ವಿಜಯ್ ಸೇತುಪತಿ (Vijay Sethupathi) ಅವರು ಶಾರುಖ್ ಖಾನ್ ಜತೆಗಿನ ‘ಜವಾನ್’ ಚಿತ್ರದ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಸೇತುಪತಿ ಅವರ ‘ಮಹಾರಾಜ’ ಸಿನಿಮಾದ (Maharaja first Look Out) ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ವಿಜಯ್ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ.
‘ಮಹಾರಾಜ’ ಸಿನಿಮಾದ ಫಸ್ಟ್-ಲುಕ್ನಲ್ಲಿ ವಿಜಯ್ ರಗಡ್ ಲುಕ್ನಲ್ಲಿ ಮಿಂಚಿದ್ದಾರೆ. ಚೇರ್ನಲ್ಲಿ ಚಾಕು ಹಿಡಿದು ರಕ್ತಸಿಕ್ತರಾಗಿ ಗಂಭೀರದಿಂದ ಕೂತಿದ್ದಾರೆ ವಿಜಯ್. ಸುತ್ತಲೂ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ.
ಮಾಧ್ಯಮದ ಮುಂದೆ ವಿಜಯ್ ಮಾತನಾಡಿ ʻʻ50ನೇ ಸಿನಿಮಾವನ್ನು ನಿರೀಕ್ಷಿಸಿರಲಿಲ್ಲ. ಇದು ಮೈಲಿಗಲ್ಲಿನಂತಿದೆ. ನಾವು ಎಷ್ಟು ದೂರ ಬಂದಿದ್ದೇವೆ ಎಂಬುದದಕ್ಕೆ ಒಂದು ಭರವಸೆ ಇದು. ಒಳ್ಳೆಯ ಅನುಭವ ನೀಡಿದ ಎಲ್ಲಾ ನಿರ್ದೇಶಕರು ಮತ್ತು ಕಲಾವಿದರಿಗೆ ಧನ್ಯವಾದಗಳು” ಎಂದರು.
“ನಾನ್ ಮಹಾನ್ ಅಲ್ಲಾ ಚಿತ್ರದ ಡಬ್ಬಿಂಗ್ ಮುಗಿದ ನಂತರ, ಅರುಲ್ದಾಸ್ ಅಣ್ಣನ್ ಮತ್ತು ನಾನು ಪರಸ್ಪರರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡೆವು. ಇದ್ದಕ್ಕಿದ್ದಂತೆ ಒಂದು ದಿನ ಎರಡು ಮಿಸ್ಡ್ ಕಾಲ್ಗಳಿದ್ದವು. ನಾವು ಮತ್ತೆ ಕರೆ ಮಾಡಿದಾಗ, ನಮ್ಮ ಸ್ನೇಹಿತ ಸೀನು ರಾಮಸಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಯಾವುದೇ ಪಾತ್ರ ಕೊಟ್ಟರೂ ಸಿನಿಮಾ ಮಾಡು ಎಂದು ಹೇಳಿದ್ದರು. ಆಮೇಲೆ ಹೋಗಿ ಸೀನು ರಾಮಸಾಮಿ ಸರ್ ಅವರನ್ನು ನೋಡಿದೆ. ಆ ನಂತರ ನಡೆದಿದ್ದೆಲ್ಲ ಇತಿಹಾಸ, ಈಗ ಈ ಹಂತ ತಲುಪಿದ್ದೇನೆ. ತುಂಬಾ ಧನ್ಯವಾದಗಳು ಅರುಲ್ದಾಸ್. ಧನ್ಯವಾದಗಳು ಸೀನು ಸರ್. ಈ ಕ್ಷಣಕ್ಕೆ ಧನ್ಯವಾದಗಳುʼʼ ಎಂದು ಹೇಳಿಕೊಂಡರು.
ಇದನ್ನೂ ಓದಿ: Vijay Sethupathi: ರಗಡ್ ಲುಕ್ನಲ್ಲಿ ವಿಜಯ್ ಸೇತುಪತಿ! ʻಜವಾನ್ʼ ಹೊಸ ಪೋಸ್ಟರ್ ಔಟ್!
ಮಹಾರಾಜ ಸಿನಿಮಾ ಬಗ್ಗೆ ಮಾತನಾಡಿದ ವಿಜಯ್ ಸೇತುಪತಿ, “ನಟ್ಟಿ ಸರ್, ಅರುಳದಾಸ್ ಅಣ್ಣ, ಸಿಂಗಂಬುಲಿ ಅಣ್ಣ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಅಭಿರಾಮಿ ಮತ್ತು ಮಮತಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ವಿರುಮಂಡಿಯಿಂದಲೂ ಅಭಿರಾಮಿ ಅವರ ಅಭಿಮಾನಿ. ಮಹಾರಾಜ ಕಮರ್ಷಿಯಲ್ ಆಗಿಯೂ ಉತ್ತಮ ಚಿತ್ರ, ನಿರ್ದೇಶಕ ನಿಥಿಲನ್ ಅದನ್ನು ನಿರ್ಮಾಪಕರಿಗೆ ಎರಡು ಅಥವಾ ಮೂರು ಪಟ್ಟು ಲಾಭವನ್ನು ಗಳಿಸುವ ಚಿತ್ರ ಎಂದು ತಿಳಿಸಿದ್ದಾರೆ” ಎಂದು ಭರವಸೆ ನೀಡಿದ್ದಾರೆ.
ವಿಜಯ್ ಸೇತುಪತಿ ಇತ್ತೀಚೆಗೆ ಶಾರುಖ್ ಖಾನ್ ಅವರ ಜವಾನ್ ಚಿತ್ರದಲ್ಲಿ ಖಳನಾಯಕ ಕಾಲಿಯಾಗಿ ಮಿಂಚಿದ್ದಾರೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಚಿತ್ರ 500 ಕೋಟಿ ರೂ. ಕ್ಲಬ್ ಸೇರಿದೆ.