Site icon Vistara News

Vijay Sethupathi | ವಿಜಯ್ ಸೇತುಪತಿ- ಸಂದೀಪ್ ಕಿಶನ್ ಅಭಿನಯದ ʻಮೈಕೆಲ್’ ರಿಲೀಸ್‌ ಡೇಟ್‌ ಅನೌನ್ಸ್‌!

ಬೆಂಗಳೂರು: ತಮಿಳು ಮತ್ತು ತೆಲುಗು ಸ್ಟಾರ್ ಸಂದೀಪ್ ಕಿಶನ್ ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ ‘ಮೈಕೆಲ್’ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ರಂಜಿತ್ ಜೇಕೋಡಿ ನಿರ್ದೇಶನದಲ್ಲಿ, ಸಿದ್ ಶ್ರೀರಾಮ್ ಹಾಡಿರುವ ‘ನೀವುಂಟೇ ಚಾಲು’ ಮೊದಲ ಹಾಡಿನ ಮೂಲಕ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿತ್ತು. ಇದೀಗ ಫೆಬ್ರವರಿ 3 ರಂದು ವಿಶ್ವಾದ್ಯಂತ ಪಂಚ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ವಿಜಯ್ ಸೇತುಪತಿ (Vijay Sethupathi) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ದಿವ್ಯಾಂಶಾ ಕೌಶಿಕ್ ನಾಯಕಿಯಾಗಿದ್ದಾರೆ.

ನಿರ್ದೇಶಕ-ನಟ ಗೌತಮ್ ವಾಸುದೇವ್ ಮೆನನ್ ಸಹ ಪಾತ್ರವರ್ಗದ ಭಾಗವಾಗಿದ್ದಾರೆ. ಚಿತ್ರದಲ್ಲಿ ಸಂದೀಪ್ ಮತ್ತು ವಿಜಯ್ ಸೇತುಪತಿಯನ್ನು ಎದುರಿಸುತ್ತಿರುವ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರ ತೆರೆಗೆ ಬರಲಿದೆ.

ಇದನ್ನೂ ಓದಿ | Katrina Kaif | ಕತ್ರಿನಾ ಕೈಫ್-ವಿಜಯ್ ಸೇತುಪತಿ ಕಾಂಬಿನೇಶನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಮುಂದಿನ ವರ್ಷ ತೆರೆಗೆ? ಟ್ವಿಸ್ಟ್‌ ಇರಲಿದೆ ಎಂದ ನಟಿ!

ಕರಣ್ ಸಿ ಪ್ರೊಡಕ್ಷನ್ಸ್ ಎಲ್ ಎಲ್ ಪಿ ಮತ್ತು ಮೋಸ್ಟ್ ಹ್ಯಾಪನಿಂಗ್ ಪ್ರೊಡಕ್ಷನ್ ಹೌಸ್ ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್ ಎಲ್ ಪಿ ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ನಿರ್ಮಿಸುತ್ತಿವೆ. ಕಿರಣ್ ಕೌಶಿಕ್ ಕ್ಯಾಮೆರಾ, ತ್ರಿಪುರನೇನಿ ಕಲ್ಯಾಣ ಚಕ್ರವರ್ತಿ ಸಂಭಾಷಣೆ, ಸ್ಯಾಮ್ ಸಿಎಸ್ ಅವರ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ | Viduthalai | ವಿಜಯ್​ ಸೇತುಪತಿ ಮತ್ತು ಸೂರಿ ನಟನೆಯ ʻವಿಡುತಲೈʼ ಶೂಟಿಂಗ್‌ ವೇಳೆ ಸ್ಟಂಟ್‌ಮ್ಯಾನ್‌ ಸಾವು

Exit mobile version