ಬೆಂಗಳೂರು: ವಿಜಯ್ ಸೇತುಪತಿ (Vijay Sethupathi) ಸದ್ಯ ʻಜವಾನ್ʼ ಸಿನಿಮಾದ ಸಕ್ಸಸ್ ಮೂಡ್‌ನಲ್ಲಿ ಇದ್ದಾರೆ. ಬಹುಭಾಷಾ ನಟ ತಮಿಳು ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ. ಇಷ್ಟೊಂದು ಜನಪ್ರಿಯತೆ ಪಡೆದಿರುವ ವಿಜಯ್ ಸೇತುಪತಿ ಅವರು ನಟಿ ಕೃತಿ ಶೆಟ್ಟಿ (Krithi Shetty) ಜತೆ ನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮಗಳ ಪಾತ್ರ ಮಾಡಿದ ನಟಿ ಜತೆ ರೊಮ್ಯಾನ್ಸ್ ಮಾಡಲಾರೆʼ ಎಂದು ನಟ ಹೇಳಿದ್ದಾರಂತೆ.
2021ರಲ್ಲಿ ಬಿಡುಗಡೆಯಾದ ʻಉಪ್ಪೆನ’ ತೆಲುಗು ಸಿನಿಮಾದಲ್ಲಿ ಕೃತಿ ಶೆಟ್ಟಿ ಮತ್ತು ವಿಜಯ್ ಸೇತುಪತಿ ಜತೆಯಾಗಿ ನಟಿಸಿದ್ದರು. ‘ಉಪ್ಪೆನ’ದಲ್ಲಿ ಕೃತಿ ಶೆಟ್ಟಿಯ ತಂದೆಯ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದು ಸಿನಿಮಾದಲ್ಲಿ ಮಗಳಂತೆ ನೋಡಿದ ನಟಿಯ ಜತೆ ಮತ್ತೊಂದು ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುವುದಿಲ್ಲ ಎಂಬುದಾಗಿ ಸೇತುಪತಿ ಹೇಳಿದ್ದಾರೆ. ತಮ್ಮಿಬ್ಬರನ್ನು ನಾಯಕ-ನಾಯಕಿಯನ್ನಾಗಿಸಿ ತಮಿಳು ಸಿನಿಮಾವೊಂದನ್ನು ಮಾಡುವುದಕ್ಕೆ ಆಫರ್ ಬಂದರೂ ವಿಜಯ್ ನಿರಾಕರಿಸಿದ್ದಾರೆ.
ಈ ಬಗ್ಗೆ ವಿಜಯ್ ಸೇತುಪತಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ʻಒಮ್ಮೆ ಮಗಳೆಂದು ಕಲ್ಪಿಸಿಕೊಂಡ ನಟಿಯ ಜತೆಗೆ ನಾನು ಹೇಗೆ ರೊಮ್ಯಾನ್ಸ್ ಮಾಡಲಿ? ಉಪ್ಪೆನ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವಾಗ, ನನ್ನನ್ನು ನಿನ್ನ ತಂದೆ ಎಂದು ಕಲ್ಪಿಸಿಕೋ ಎಂದು ಕೃತಿಗೆ ಹೇಳಿದ್ದೆ. ಆ ಸಿನಿಮಾ ಮಾಡುವಾಗ ನನ್ನ ಮಗನಷ್ಟೇ ಕೃತಿಗೂ ವಯಸ್ಸು. ನಾನು ಕೂಡ ಕೃತಿಯನ್ನು ಮಗಳಂತೆ ಭಾವಿಸಿದ್ದೇನೆ. ಹೀಗಿರುವಾಗ ಕೃತಿ ಜತೆಗೆ ರೊಮ್ಯಾನ್ಸ್ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay Sethupathi: ‘ಮಹಾರಾಜʼಫಸ್ಟ್ ಲುಕ್ ಔಟ್; 50ನೇ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ವಿಜಯ್ ಸೇತುಪತಿ!
Why Vijay Sethupathi refused to act with Kriti Shetty as his pair… 👇 pic.twitter.com/R6Gp9DarBB
— Christopher Kanagaraj (@Chrissuccess) September 23, 2023
50ನೇ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಮಿಂಚಿದ ವಿಜಯ್ ಸೇತುಪತಿ
ಸದ್ಯ ವಿಜಯ್ ಸೇತುಪತಿ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ವಿಜಯ್ ಸೇತುಪತಿ ಅವರ ‘ಮಹಾರಾಜ’ ಸಿನಿಮಾದ (Maharaja first Look Out) ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಂಡಿದೆ. ವಿಜಯ್ ಸೇತುಪತಿ 50ನೇ ಚಿತ್ರಕ್ಕಾಗಿ,(50th film ‘Maharaja) ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಜತೆ ಕೈ ಜೋಡಿಸಿದ್ದಾರೆ.
ಮಹಾರಾಜ’ ಸಿನಿಮಾದ ಫಸ್ಟ್-ಲುಕ್‌ನಲ್ಲಿ ವಿಜಯ್ ರಗಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಚೇರ್‌ನಲ್ಲಿ ಚಾಕು ಹಿಡಿದು ರಕ್ತಸಿಕ್ತರಾಗಿ ಗಂಭೀರದಿಂದ ಕೂತಿದ್ದಾರೆ ವಿಜಯ್. ಸುತ್ತಲೂ ಪೊಲೀಸ್ ಅಧಿಕಾರಿಗಳು ನಿಂತಿದ್ದಾರೆ. ನಟ ವಿಜಯ್ ಅವರ ಎಡ ಭಾಗದ ಕಿವಿಗೆ ಬ್ಯಾಂಡೆಜ್ ಹಾಕಲಾಗಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜತೆಗೆ ಅನುರಾಗ್ ಕಶ್ಯಪ್, ಮಮತಾ ಮೋಹನ್ ದಾಸ್ ಮತ್ತು ನಟ್ಟಿ ನಟರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ದಿನೇಶ್ ಪುರುಷೋತ್ತಮನ್ ಅವರ ಛಾಯಾಗ್ರಹಣವಿದೆ.