ಬೆಂಗಳೂರು : ಕಾಲಿವುಡ್ ನಟ ವಿಜಯ್ ದಳಪತಿ (Vijay Thalapathy) ಅಭಿನಯದ ʻವಾರಿಸುʼ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ಆದರೆ ಅಭಿಮಾನಿಗಳನ್ನು ಹೊರತುಪಡಿಸಿ ಸಾಮಾನ್ಯ ಸಿನಿ ರಸಿಕರು ಟ್ರೈಲರ್ ಅಷ್ಟಕಷ್ಟೇ ಎಂಬ ಮಾತುಗಳೂ ಇವೆ. ಇದರ ಬೆನ್ನಲ್ಲೇ ವಿಜಯ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ವಿಜಯ್ ಮತ್ತು ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು ಸದ್ಯದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿಜಯ್ , ರಶ್ಮಿಕಾ ಮಂದಣ್ಣ ನಟನೆಯ ʻವಾರಿಸು’ (Varisu) ಇದೇ ಜನವರಿ 12ಕ್ಕೆ ತೆರೆಗೆ ಬರಲಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರವಾಗಿಯೂ ವಿಜಯ್ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ʻವಾರಿಸು’ ಆಡಿಯೊ ಲಾಂಚ್‌ನಲ್ಲಿ ವಿಜಯ್ ಪತ್ನಿ ಗೈರಾಗಿದ್ದರು. ಬಳಿಕ ನಿರ್ದೇಶಕ ಅಟ್ಲಿ ಪತ್ನಿಯ ಸೀಮಂತ ಶಾಸ್ತ್ರದಲ್ಲಿಯೂ ಸಂಗೀತಾ ಅವರು ಕಾಣಿಸಿಕೊಂಡಿರಲಿಲ್ಲ. ಈ ಎಲ್ಲಾ ವಿಚಾರ ಇದೀಗ ಡಿವೋರ್ಸ್ ವದಂತಿ ಸತ್ಯ ಎನ್ನಲಾಗುತ್ತಿದೆ. ವಿಕಿಪೀಡಿಯಾ ಪೇಜ್‌ನಲ್ಲೂ ಇಬ್ಬರು ಈಗಾಗಲೇ ಡಿವೋರ್ಸ್ ಪಡೆದಿದ್ದಾರೆ ಎಂದು ಪ್ರಕಟವಾಗಿದೆ. ನಟ ವಿಜಯ್ ಡಿವೋರ್ಸ್ ಪಡೆಯಲು ಮಲಯಾಳಂ ನಟಿ ಜತೆಗಿನ ಸಂಬಂಧವೇ ಕಾರಣ ಎನ್ನಲಾಗುತ್ತಿದೆ.
1999ರಲ್ಲಿ ನಟ ವಿಜಯ್ ಹಾಗೂ ಸಂಗೀತಾ ಪ್ರೀತಿಸಿ ಮದುವೆಯಾಗಿದ್ದರು. ಶ್ರೀಲಂಕಾ ಮೂಲದ ಸಂಗೀತಾ ಅವರು, ವಿಜಯ್ ಅವರ ಅಭಿಮಾನಿಯಾಗಿದ್ದರು. ಹೀಗಾಗಿ ಅವರನ್ನ ಭೇಟಿ ಮಾಡಲು ಶ್ರೀಲಂಕಾದಿಂದ ಭಾರತಕ್ಕೆ ಬಂದಿದ್ದರು. ಅಭಿಮಾನಿಯ ಪ್ರೀತಿ ಒಪ್ಪಿಕೊಂಡ ವಿಜಯ್, 1999ರಲ್ಲಿ ಸಂಗೀತಾ ಜತೆ ಸಪ್ತಪದಿ ತುಳಿದಿದ್ದರು.
ಇದನ್ನೂ ಓದಿ | Rashmika Mandanna | ದಳಪತಿ ವಿಜಯ್-ರಶ್ಮಿಕಾ ಮಂದಣ್ಣ ಕಾಂಬಿನೇಶನ್ ಸಿನಿಮಾಗೆ ನೋಟಿಸ್
12ಕ್ಕೆ ತೆರೆಗೆ ಬರಲಿದೆ ʻವಾರಿಸು’
‘ವಾರಿಸು’ ಹಾಗೂ ಅಜಿತ್ ಕುಮಾರ್ ನಟನೆಯ ‘ತುನಿವು’ ಚಿತ್ರಗಳು ಒಂದೇ ದಿನ ( ಜನವರಿ 11 ) ಬಿಡುಗಡೆಯಾಗಲಿವೆ. ʻವಾರಿಸುʼ ಚಿತ್ರದ ಟ್ರೈಲರ್ 24 ಗಂಟೆಗಳಲ್ಲಿ 23.05 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಕ್ಷಿಣ ಭಾರತದ ಟ್ರೈಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ | Vijay Thalapathy | ವಿಜಯ್ ದಳಪತಿ-ರಶ್ಮಿಕಾ ಮಂದಣ್ಣ ಅಭಿನಯದ ವಾರಿಸು ಸಿನಿಮಾ ಸಾಂಗ್ ಔಟ್!