ಬೆಂಗಳೂರು: ಕಾಲಿವುಡ್‌ನಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ನಂತರದ ಸ್ಥಾನದಲ್ಲಿ ನಿಲ್ಲುವ ನಟರು ಎಂದರೆ ವಿಜಯ್ ದಳಪತಿ (Vijay Thalapathy) ಹಾಗೂ ಅಜಿತ್ ಕುಮಾರ್ (Ajith Kumar). ವಿಜಯ್ ಅಭಿನಯದ ʻವಾರಿಸುʼ (varisu) ಹಾಗೂ ಅಜಿತ್ ಅಭಿನಯದ ʻತುನಿವು ʼ (thunivu) ಸಿನಿಮಾ ಕಾಲಿವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಇವರಿಬ್ಬರಿಗೂ ದೊಡ್ಡ ಅಭಿಮಾನ ಬಳಗವಿದೆ. ಇದೀಗ ಈ ಎರಡು ಸಿನಿಮಾ ಪೋಸ್ಟರ್‌ಗಳ ಸಂಬಂಧ ಸೋಷಿಯಲ್ ಮೀಡಿಯಾ ಕಿತ್ತಾಟ ಶುರುವಾಗಿದ್ದು, ನಟದ್ವಯರ ಫ್ಯಾನ್‌ಗಳು ಟ್ರೋಲ್ ಮಾಡುತ್ತಿದ್ದಾರೆ.
ʻವಾರಿಸುʼ (ಉತ್ತರಾಧಿಕಾರಿ) ಹಾಗೇ ʻತುನಿವುʼ (ಧೈರ್ಯ) ಒಟ್ಟಿಗೆ ಬಿಡುಗಡೆಗೆ ಸಜ್ಜಾಗಿದೆ. ʻತುನಿವುʼ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಇದನ್ನು ಪ್ರಿಂಟ್ ಹಾಕಿಸಿದ ಅಜಿತ್ ಫ್ಯಾನ್ಸ್, ತಮಿಳುನಾಡಿನ ಮಧುರೈ ಬೀದಿಯ ಗೋಡೆಗಳಲ್ಲಿ ಅಂಟಿಸಿದ್ದಾರೆ.
ಇದಕ್ಕೆ ಟಕ್ಕರ್ ಕೊಟ್ಟಿರುವ ವಿಜಯ್ ಫ್ಯಾನ್ಸ್, ʻತುನಿವುʼ ಪೋಸ್ಟರ್ ಮೊದಲು ಬಿಡುಗಡೆಯಾದರೇನಂತೆ? ಮೊದಲು ಥಿಯೇಟರ್‌ಗೆ ಎಂಟ್ರಿ ಕೊಡೋದು ನಮ್ಮ ದಳಪತಿ ಸಿನಿಮಾ ಎಂದು ಪೋಸ್ಟರ್ ಹಾಕಿದ್ದಾರೆ. ಇದು ಅಜಿತ್ ಫ್ಯಾನ್ಸ್‌ಗೆ ಕೆರಳಿಸುವಂತೆ ಮಾಡಿದೆ. ಹೀಗಾಗಿ ಪರಸ್ಪರ ಕಿತ್ತಾಟ ಶುರುವಾಗಿದೆ. ಆದರೆ, ಅಜಿತ್ ಹಾಗೂ ದಳಪತಿ ಮಧ್ಯೆ ಯಾವುದೇ ವೈರತ್ವ ಇಲ್ಲ. ಸಾಕಷ್ಟು ಬಾರಿ ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | MS Dhoni | ದಳಪತಿ ವಿಜಯ್ ಜತೆ ಕೂಲ್ ಕ್ಯಾಪ್ಟನ್ ಇನ್ನೊಂದು ಇನಿಂಗ್ಸ್
ʻತುನಿವುʼ ಅಜಿತ್ ನಟನೆಯ 61ನೇ ಸಿನಿಮಾ ಆಗಿದೆ. ಖ್ಯಾತ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ತುನಿವು ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ದೇಶಕ ಎಚ್.ವಿನೋದ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ತುನಿವು, ʻನೋ ಗಟ್ಸ್ ನೋ ಗ್ಲೋರಿʼ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಈ ಚಿತ್ರಕ್ಕೆ ಮಾಲಿವುಡ್ ನಟಿ ಮಂಜು ವಾರಿಯರ್ ನಾಯಕಿಯಾಗಿದ್ದಾರೆ. ಅಜಿತ್ ಹಾಗೂ ವಿನೋದ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಮೊದಲು ʻವಲಿಮೈʼ, ʻನೆರ್ಕೊಂಡ ಪಾರ್ವೈʼಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ʻವಾರಿಸುʼಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.
ಈ ಬಾರಿ ಸಕ್ರಾಂತಿ ಹಬ್ಬಕ್ಕೆ ʻವಾರಿಸುʼ ಹಾಗೂ ʻತುನಿವುʼ ಸಿನಿಮಾಗಳು ಒಟ್ಟಿಗೆ ತೆರೆ ಮೇಲೆ ಬರುತ್ತಿದೆ ಎನ್ನಲಾಗುತ್ತಿದೆ. ಫ್ಯಾನ್ಸ್‌ಗಳ ಮಧ್ಯೆ ಇರುವ ತಿಕ್ಕಾಟಕ್ಕೆ ಚಿತ್ರತಂಡ ಡೇಟ್ ಬದಲಾಯಿಸಿ ಬ್ರೇಕ್ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ | Ajith Kumar | ಅಜಿತ್ ಕುಮಾರ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪೋಸ್ಟರ್ ರಿಲೀಸ್; ಹೇಗಿದೆ ಹೊಸ ಲುಕ್?