ಬೆಂಗಳೂರು: ದಳಪತಿ ವಿಜಯ್ (Vijay Thalapathy) ಸೇರಿ ಲಿಯೋ ಸಿನಿಮಾದ ಇಡೀ ತಂಡ ಪ್ರಸ್ತುತ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಿರ್ದೇಶಕ ಮಿಸ್ಕಿನ್ (Mysskin) ಅವರು ತಮ್ಮ ಭಾಗದ ಶೂಟಿಂಗ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಲಿಯೋ ಚಿತ್ರದ ಸೆಟ್‌ನಲ್ಲಿ ನಿರ್ದೇಶಕ-ನಟ ಮಿಸ್ಕಿನ್ ಜತೆಗೆ ತೆಗೆಸಿಕೊಂಡ ಫೋಟೋವನ್ನು ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ, ʻʻಅವರೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟʼʼಎಂದು ಬರೆದುಕೊಂಡಿದ್ದಾರೆ.
ಲಿಯೋಗೆ ಧನ್ಯವಾದ ತಿಳಿಸಿದ ಲೋಕೇಶ್
ಮಿಸ್ಕಿನ್ ಅವರು ಲಿಯೋ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ ಲೋಕೇಶ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ದಳಪತಿ ವಿಜಯ್ ಅವರೊಂದಿಗೆ ಒಂದೆರಡು ಆ್ಯಕ್ಷನ್ ದೃಶ್ಯಗಳನ್ನು ಮಿಸ್ಕಿನ್ ಚಿತ್ರೀಕರಿಸಿದ್ದಾರೆ. ಮಾರ್ಚ್ 1 ರಂದು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ನಿರ್ದೇಶಕ-ನಟ ಮಿಸ್ಕಿನ್ ಅವರೊಂದಿಗಿನ ಫೋಟೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡು ʻʻನನ್ನ ಆತ್ಮೀಯ ಮಿಸ್ಕಿನ್ ಸರ್, ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.ಮತ್ತು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಇದನ್ನು ವ್ಯಕ್ತಪಡಿಸಲು ಎಷ್ಟೇ ಧನ್ಯವಾದ ಹೇಳಿದರೂ ಸಾಲುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Thalapathy 67: ದಳಪತಿ 67 ಟೀಸರ್ ಬಿಡುಗಡೆ ದಿನಾಂಕ ಮುಂದೂಡಿಕೆ: ಹೊಸ ಅಪ್‌ಡೇಟ್ ನೀಡಿದ ಲೋಕೇಶ್ ಕನಕರಾಜ್!
ಇತ್ತೀಚೆಗಷ್ಟೇ, ಲಿಯೋ ಚಿತ್ರೀಕರಣದ ನಂತರ ತಂಡವು ದೀಪೋತ್ಸವವನ್ನು ಆನಂದಿಸುತ್ತಿರುವ ಫೋಟೊವನ್ನು ಲೋಕೇಶ್ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್, ಸ್ಯಾಂಡಿ ಮತ್ತು ಮನ್ಸೂರ್ ಅಲಿ ಖಾನ್ ಸೇರಿದಂತೆ ಹಲವು ಗಣ್ಯರು ಇದ್ದಾರೆ. ಈ ಚಿತ್ರವನ್ನು ಲಲಿತ್ ಕುಮಾರ್ ಅವರ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದೆ. ಅನಿರುಚ್ ರವಿಚಂದರ್ ಸಂಗೀತ ನೀಡಲಿದ್ದಾರೆ.