Site icon Vistara News

Leo advance booking: ಟಿಕೆಟ್‌ ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ʻಜವಾನ್‌ʼ ಹಿಂದಿಕ್ಕಿದ ಲಿಯೋ!

Vijay film

ಬೆಂಗಳೂರು: ಕನ್ನಡ, ಮಲಯಾಳಂ, ಹಿಂದಿ, ತಮಿಳಿನಲ್ಲಿ ಲಿಯೋ ಸಿನಿಮಾ (Leo advance booking) ಏಕಕಾಲದಲ್ಲಿ ಅ.19ರಂದು ಬಿಡುಗಡೆಯಾಗುತ್ತಿದೆ. ತೆಲುಗಿನಲ್ಲಿ ಅಕ್ಟೋಬರ್ 20ರವರೆಗೂ ಕಾಯುವುದು ಅನಿವಾರ್ಯವಾಗಿದೆ. ತೆಲುಗುವಿನಲ್ಲಿ ಲಿಯೋ ಶೀರ್ಷಿಕೆ ಬಳಕೆ ಕುರಿತಂತೆ ತಡೆಯಾಜ್ಞೆ ನೀಡಿದೆ. ಈ ನಡುವೆ ಲಿಯೋ ಟಿಕೆಟ್‌ಗಳು ಭರ್ಜರಿ ಸೋಲ್ಡ್‌ ಔಟ್‌ ಆಗಿವೆ. ಈ ವರ್ಷ ಮುಂಗಡ ಬುಕ್ಕಿಂಗ್‌ನಲ್ಲಿ ಅತಿ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಲಿಯೋ ಈಗಾಗಲೇ 16 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ ಜವಾನ್‌ ಸಿನಿಮಾ ರೆಕಾರ್ಡ್‌ಅನ್ನೇ ಬ್ರೇಕ್‌ ಮಾಡಿದೆ.

ಕಳೆದ ತಿಂಗಳು ಬಿಡುಗಡೆಯಾದ ಶಾರುಖ್ ಖಾನ್ ಅವರ ಜವಾನ್ ಸಿನಿಮಾದ ರೆಕಾರ್ಡ್‌ವನ್ನು ಲಿಯೋ ಮುರಿದಿದೆ. ಜವಾನ್ ತನ್ನ ಆರಂಭಿಕ ದಿನದಂದು ಮುಂಗಡ ಬುಕ್ಕಿಂಗ್‌ನಲ್ಲಿ 15.75 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಲಿಯೋ ತಮಿಳು ಆವೃತ್ತಿಯು 13.75 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ, ಆದರೆ ತೆಲುಗು ಮತ್ತು ಹಿಂದಿ ಆವೃತ್ತಿಗಳು ಕ್ರಮವಾಗಿ 2.10 ಲಕ್ಷ ಮತ್ತು 20,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಲೋಕೇಶ್ ಅವರ ಚಿತ್ರ ಇದುವರೆಗೆ 31 ಕೋಟಿ ರೂ. ಗಳಿಸಿದ್ದರೆ, ಜವಾನ್ ಮುಂಗಡ ಬುಕ್ಕಿಂಗ್ ಮೂಲಕ 41 ಕೋಟಿ ರೂ. ಗಳಿಸಿದೆ. ಎರಡೂ ಚಿತ್ರಗಳ ಸರಾಸರಿ ಟಿಕೆಟ್ ದರದಲ್ಲಿನ ವ್ಯತ್ಯಾಸವೇ ಈ ಅಸಮಾನತೆಯ ಹಿಂದಿನ ಕಾರಣ. ಆರಂಭಿಕ ದಿನದಂದು ಜವಾನ್‌ನ ಸರಾಸರಿ ಟಿಕೆಟ್ ದರ 251 ರೂ. ಆಗಿದ್ದರೆ, ಲಿಯೋಗೆ 202 ರೂ. ಆಗಿದೆ.

ಲಿಯೋ ಟ್ರೈಲರ್ ಧಮಾಕಾ ಆಗಿದ್ದು, ಅರ್ಜುನ್ ಸರ್ಜಾ, ಸುನಿಲ್ ದತ್, ತ್ರಿಷಾ ಕೃಷ್ಣನ್ ಅವರನ್ನು ಕಾಣಬಹುದು. ಟ್ರೈಲರ್ ಮಾತ್ರ ಮಸ್ತ್ ಆಗಿದ್ದು, ಸಿನಿಮಾದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ. ಖಳರನ್ನು ಅಟ್ಟಾಡಿಸಿಕೊಂಡು ವಿಜಯ್ ಮಟ್ಟ ಹಾಕುವುದು ಮಜವಾಗಿದೆ. ಲೋಕೇಶ್ ಕನಕರಾಜ್ ಅವರು ಪವರ್ ಫುಲ್ ಸಿನಿಮಾ ನೀಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Shiva Rajkumar: ನಾಳೆ ಶಿವಣ್ಣ ʻಘೋಸ್ಟ್‌ʼ ಅದ್ಧೂರಿ ತೆರೆಗೆ; ಲಿಯೋ ಸಿನಿಮಾಗೆ ಹೆಚ್ಚು ಸ್ಕ್ರೀನ್‌!

2021ರಲ್ಲಿ ಬಿಡುಗಡೆಯಾದ ʻಮಾಸ್ಟರ್ʼ ಚಿತ್ರದ ಭಾರಿ ಯಶಸ್ಸಿನ ನಂತರ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರು ಈ ‘ಲಿಯೋ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಹಲವು ವರ್ಷಗಳ ನಂತರ ವಿಜಯ್ ಜತೆ ತ್ರಿಷಾ ನಾಯಕಿಯಾಗಿ ಈ ಸಿನಿಮಾ ಮೂಲಕ ಮಿಂಚಲಿದ್ದಾರೆ. ಕೀರ್ತಿ ಸುರೇಶ್, ಅರ್ಜುನ್, ಮಿಶಾ ಘೋಷಾಲ್, ಪ್ರಿಯಾ ಆನಂದ್, ಮನ್ಸೂರ್ ಅಲಿ ಖಾನ್ ಮತ್ತು ಸಂಜಯ್ ತಾರಾ ಬಳಗವಿದೆ. ಇತ್ತೀಚೆಗೆ ಕಾಶ್ಮೀರ ಮತ್ತು ಚೆನ್ನೈನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿತ್ತು.

ಈ ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೊದ ಲಲಿತ್ ಕುಮಾರ್ ನಿರ್ಮಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ʼಲಿಯೋʼ ಚಿತ್ರದಲ್ಲಿ ಸಂಜಯ್ ದತ್ ಅಣ್ಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಳಪತಿ ವಿಜಯ್‌ (Thalathy Vijay) ಹಾಗೂ ಲೋಕೇಶ್‌ ಕನಕರಾಜ್‌ ʼಲಿಯೋʼ ಸಿನಿಮಾ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಈಗಾಗಲೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಮೊದಲ ಸಾಂಗ್‌ ʻನಾ ರೆಡಿʼ ಬಿಡುಗಡೆಗೊಂಡಿದೆ. ʻಲಿಯೋʼ ಚಿತ್ರಕ್ಕೆ ಮನೋಜ್ ಪರಮಹಂಸ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Exit mobile version