ಬೆಂಗಳೂರು: ನಟ ವಿಕ್ರಮ್ ಮುಖ್ಯ ಭೂಮಿಕೆಯ (Dhruva Natchathiram) ತಮಿಳು ಚಿತ್ರ `ಧ್ರುವ ನಚ್ಚತಿರಂ ‘ಇಂದು (ನವೆಂಬರ್ 24) ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ವಿಳಂಬ ಆಗಿದೆ. ಈ ಬಗ್ಗೆ ನಿರ್ದೇಶಕ ಗೌತಮ್ ಮೆನನ್ ಮಾಹಿತಿ ನೀಡಿದ್ದಾರೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಬಗ್ಗೆ ಹೇಳಿಕೊಂಡಿದ್ದಾರೆ. 2018 ರಿಂದಲೇ ಸಿನಿಮಾ ನಿರ್ಮಾಣವಾಗುತ್ತಿದ್ದು, ಸತತ ಐದು ವರ್ಷಗಳಿಂದ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು.
“ಕ್ಷಮಿಸಿ. ಧ್ರುವ ನಚ್ಚತಿರಂ ಇಂದು ತೆರೆಗೆ ಬರಲು ಸಾಧ್ಯವಾಗಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಇನ್ನೂ ಒಂದು ಅಥವಾ ಎರಡು ದಿನ ಬೇಕು ಎಂದು ತೋರುತ್ತದೆ. ವಿಶ್ವಾದ್ಯಂತ ಪ್ರಿ ಬುಕಿಂಗ್‌ಗಳು ಮತ್ತು ಸರಿಯಾದ ಸ್ಕ್ರೀನ್‌ಗಳೊಂದಿಗೆ ಎಲ್ಲರಿಗೂ ಉತ್ತಮ ಅನುಭವವನ್ನು ಒದಗಿಸುವ ಆಶಯದೊಂದಿಗೆ ಈ ನಿರ್ಧಾರ. ಚಿತ್ರಕ್ಕೆ ನೀಡಿದ ಬೆಂಬಲವು ಹೃದಯಸ್ಪರ್ಶಿಯಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಬರುತ್ತೇವೆʼʼಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ ಗೌತಮ್ ಮೆನನ್.
ಸಿನಿಮಾ ರಿಲೀಸ್ ವಿಳಂಬಕ್ಕೆ ಅಭಿಮಾನಿಗಳು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಗೌತಮ್ ಅವರ ಟ್ವೀಟ್‌ಗೆ ಒಬ್ಬರು “ಈ ವಿಳಂಬಕ್ಕೆ ಕಾರಣ ನನಗೆ ತಿಳಿದಿದೆ. ಹಣ ಶೀಘ್ರದಲ್ಲೇ ಅರೇಂಜ್ ಆಗಲಿ ಎಂದು ನಾನು ಕೋರುತ್ತೇನೆ. ಈ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ನಾವು ಕಾದಿದ್ದೇವೆʼʼಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು “ನಿಮ್ಮ ಸಮಯ ತೆಗೆದುಕೊಳ್ಳಿ ಸಾರ್.. ಯಾವಾಗ ಸಿನಿಮಾ ರಿಲೀಸ್ ಆಗುತ್ತೋ ಅಂದು ನೋಡುತ್ತೇವೆʼʼಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Vikram Actor: ಚಿಯಾನ್ ವಿಕ್ರಮ್ ನಟನೆಯ `ಧ್ರುವ ನಚ್ಚತಿರಂ’ ಎರಡನೇ ಸಾಂಗ್ ಔಟ್!
#DhruvaNatchathiram #DhruvaNakshathram pic.twitter.com/dmD4ndEnp9
— Gauthamvasudevmenon (@menongautham) November 23, 2023
ಧ್ರುವ ನಚ್ಚತಿರಂ ಚಿತ್ರದಲ್ಲಿ ವಿಕ್ರಮ್ ನಾಯಕನಾಗಿ ರಿತು ವರ್ಮಾ, ಪಾರ್ತಿಬನ್, ಐಶ್ವರ್ಯ ರಾಜೇಶ್, ಸಿಮ್ರಾನ್, ರಾಧಿಕಾ, ಅರ್ಜುನ್ ದಾಸ್ ಮತ್ತು ದಿವ್ಯದರ್ಶಿನಿ ನಟಿಸಿದ್ದಾರೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. 2011ರಲ್ಲಿ ನಡೆದ ಮುಂಬೈ ಬ್ಲಾಸ್ಟ್ ಬಗ್ಗೆ ಸಿನಿಮಾ ಹೇಳಿದೆ ಎನ್ನಲಾಗುತ್ತಿದೆ.
ಚಿತ್ರದ ತಂಡ ಜುಲೈ 20ರಂದು ಎರಡನೇ ಹಾಡು ಹಿಸ್ ನೇಮ್ ಈಸ್ ಜಾನ್ (Dhruva Natchathiram second single) ಅನಾವರಣಗೊಳಿಸಿತ್ತು. ಈ ಹಾಡನ್ನು ಹ್ಯಾರಿಸ್ ಜಯರಾಜ್ ಸಂಯೋಜಿಸಿದ್ದಾರೆ ಮತ್ತು ರಾಪರ್ ಪಾಲ್ ಡಬ್ಬಾ ಬರೆದು ಹಾಡಿದ್ದಾರೆ. ತಮಿಳಿನ ನಿರ್ದೇಶಕ ಲೋಕೇಶ್ ಕನಕರಾಜ್ ಟ್ರ್ಯಾಕ್‌ವನ್ನು ಟ್ವಿಟರ್‌ನಲ್ಲಿ ಅನಾವರಣಗೊಳಿಸಿದ್ದರು. ಈ ಹಾಡಿನಲ್ಲಿ ಆಧುನಿಕ ಬೀಟ್‌ಗಳೊಂದಿಗೆ ರ‍್ಯಾಂಪ್ ಜತೆಗೆ ಮತ್ತು ತಮಿಳು ಜಾನಪದ ಸಂಗೀತದ ಮಿಶ್ರಣವಾಗಿದೆ. ಹಾಡು ತಮಿಳಿನಲ್ಲಿದ್ದರೂ, ರ‍್ಯಾಂಪ್ ಇಂಗ್ಲಿಷ್‌ನಲ್ಲಿದೆ. ಗೌತಮ್ ಮತ್ತು ಹ್ಯಾರಿಸ್ ಈ ಹಿಂದೆ ವಾರಣಂ ಆಯಿರಂ, ಮತ್ತು ವೆಟ್ಟೈಯಾಡು ವಿಲೈಯಾಡು ಮುಂತಾದ ಅನೇಕ ಹಿಟ್ ಆಲ್ಬಂಗಳನ್ನು ನೀಡಿದ್ದರು.