Site icon Vistara News

ಕಮಲ್‌ ಹಾಸನ್‌ ನಟನೆಯ ವಿಕ್ರಮ್‌ ಚಿತ್ರಕ್ಕೆ ಸಿಕ್ಕಿತು ಪ್ರಮಾಣ ಪತ್ರ

ವಿಕ್ರಮ್‌

ಕಮಲ್‌ ಹಾಸನ್‌ ಅಭಿನಯದ “ವಿಕ್ರಮ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ ರಿಲೀಸ್‌ ಆಗಿದ್ದೇ ತಡ ಲಕ್ಷಾಂತರ ಅಭಿಮಾನಿಗಳು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ಸ್ವಲ್ಪ ದಿನ ಸಿನಿಮಾದಿಂದ ದೂರ ಇದ್ದ ಕಮಲ್‌ ಹಾಸನ್‌ ಇದೀಗ ಮತ್ತೆ ಎಂಟ್ರಿ ನೀಡಿದ್ದಾರೆ. ಸಾಹಸಗಳು ಟ್ರೈಲರ್‌ನಲ್ಲಿ ಬೆಚ್ಚಿ ಬೀಳಿಸುವಂತಿದೆ. ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌  ಮೈ ರೋಮಾಂಚನಗೊಳಿಸುವಂತಿದೆ. ಇದೀಗ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಅಭಿಮಾನಿಗಳು ಸಿನಿಮಾಗೆ ಕಾಯುತ್ತಿದ್ದಾರೆ.

ಕಮಲ್‌ ಹಾಸನ್‌ ಮತ್ತು ಆರ್‌ ಮಹೇಂದ್ರನ್‌ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಿರೀಶ್‌ ಗಂಗಾಧರನ್‌ ಛಾಯಾಗ್ರಹಣ ಮಾಡಿದ್ದಾರೆ. ಜೂನ್‌ 3ರಂದು ಸಿನಿಮಾ ರಿಲೀಸ್‌ ಆಗಲಿದ್ದು, ಇದೂ ಕೂಡ ಹೊಸ ದಾಖಲೆ ಬರೆಯುವ ಸಾದ್ಯತೆ ಇದೆ.

ಇದನ್ನೂ ಓದಿ | Vikram Trailer: ಯಶ್‌ ಕೈಲಿದ್ದ ʼದೊಡ್ಡಮ್ಮʼ ಇದೀಗ ಕಮಲ್‌ ಹಾಸನ್‌ ಕೈಯಲ್ಲಿ!

Exit mobile version