Site icon Vistara News

Vikram: ʼಬುರ್ಜ್ ಖಲೀಫಾʼ ಮೇಲೆ ಅನಾವರಣಗೊ‌ಳ್ಳಲಿದೆ ʼವಿಕ್ರಮ್‌ʼ ಟ್ರೈಲರ್‌

ʼಬುರ್ಜಾ ಖಲೀಫಾʼ

ಬೆಂಗಳೂರು: ಕಮಲ್ ಹಾಸನ್ ಹಾಗೂ ವಿಜಯ್ ಸೇತುಪತಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಮ್‌ ರಿಲೀಸ್‌ಗೂ ಮೊದಲು ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಕೂತೂಹಲ ಮೂಡಿಸಿದೆ.

ಇದೀಗ ಈ ಚಿತ್ರದ ಟ್ರೈಲರ್ ವಿಶ್ವದ ಅತಿ ಎತ್ತರದ ಕಟ್ಟಡ ʼಬುರ್ಜ್ ಖಲೀಫಾʼ ಮೇಲೆ ಅನಾವರಣಗೊಳ್ಳಲಿದೆ. ಈ ಮುಂಚೆ ʼವಿಕ್ರಾಂತ್ ರೋಣʼ ಚಿತ್ರತಂಡ ಬು‌ರ್ಜ್ ಖಲೀಫಾ ಮೇಲೆ ಟೀಸರ್ ರಿಲೀಸ್ ಮಾಡಿತ್ತು. ಇದೇ ರೀತಿ ಟಾಲಿವುಡ್ ಸ್ಟಾರ್ ಕಮಲ್ ಹಾಸನ್ ನಟಿಸಿ‌, ನಿರ್ಮಿಸುತ್ತಿರುವ ʼವಿಕ್ರಮ್ʼ ಚಿತ್ರದ ಟ್ರೈಲರ್ ಝಲಕ್ ಜೂನ್ 1ರ ರಾತ್ರಿ 8 ಗಂಟೆಗೆ ರಿವೀಲ್ ಆಗಲಿದೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಅಂದಹಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ಲೋಕೇಶ್ ಕನಗರಾಜ್ ಅದ್ಭುತವಾಗಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕಮಲ್ ಹಾಗೂ ವಿಜಯ್ ಸೇತುಪತಿ ಜುಗಲ್ಬಂದಿಯ ಮ್ಯಾಜಿಕ್ ನೋಡಲು ಪ್ರೇಕ್ಷಕರು ತುದಿಗಾಲ ಮೇಲೆ ನಿಂತಿದ್ದಾರೆ.

ಕಮಲ್‌ ಹಾಸನ್‌ ಅಭಿನಯದ ʼವಿಕ್ರಮ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಟ್ರೈಲರ್‌ ರಿಲೀಸ್‌ ಆಗಿದ್ದೇ ತಡ ಲಕ್ಷಾಂತರ ಅಭಿಮಾನಿಗಳು ಇದನ್ನು ನೋಡಿ ಖುಷಿಪಟ್ಟಿದ್ದಾರೆ. ಸ್ವಲ್ಪ ದಿನ ಸಿನಿಮಾದಿಂದ ದೂರ ಇದ್ದ ಕಮಲ್‌ ಹಾಸನ್‌ ಇದೀಗ ಮತ್ತೆ ಎಂಟ್ರಿ ನೀಡಿದ್ದಾರೆ. ಸಾಹಸಗಳು ಟ್ರೈಲರ್‌ನಲ್ಲಿ ಬೆಚ್ಚಿ ಬೀಳಿಸುವಂತಿದೆ. ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌  ಮೈ ರೋಮಾಂಚನಗೊಳಿಸುವಂತಿದೆ. ಇದೀಗ ಯು/ಎ ಪ್ರಮಾಣಪತ್ರ ಸಿಕ್ಕಿದ್ದು, ಅಭಿಮಾನಿಗಳು ಸಿನಿಮಾಗೆ ಕಾಯುತ್ತಿದ್ದಾರೆ.

ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಗಿರೀಶ್‌ ಗಂಗಾಧರನ್‌ ಛಾಯಾಗ್ರಹಣ ಮಾಡಿದ್ದಾರೆ. ಜೂನ್‌ 3ರಂದು ಸಿನಿಮಾ ರಿಲೀಸ್‌ ಆಗಲಿದ್ದು, ಇದೂ ಕೂಡ ಹೊಸ ದಾಖಲೆ ಬರೆಯುವ ಸಾದ್ಯತೆ ಇದೆ.

ಇದನ್ನೂ ಓದಿ | ʼಬಿಗ್‌ ಬಾಸ್‌ʼ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಸಿನಿಮಾ ಲೋಕಕ್ಕೆ  

Exit mobile version