ಬೆಂಗಳೂರು : ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ (Vikrant Rona) ಅದ್ಧೂರಿಯಾಗಿ ಬಿಡುಗಡೆಯಾಗಿ ಜನಮನ್ನಣೆ ಪಡೆದುಕೊಂಡಿದೆ. ಗುರುವಾರ (ಜು.28)ಕ್ಕೆ ವಿಶ್ವಾದ್ಯಂತ ಬಿಡುಗಡೆಗೊಂಡಿದ್ದು, ಇದೀಗ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.
ಮೊದಲ ದಿನ 35 ಕೋಟಿಗೂ ಅಧಿಕ ಕಲೆಕ್ಷನ್ ವಿಕ್ರಾಂತ್ ರೋಣ ಮಾಡಿದ್ದು, ಕರ್ನಾಟಕದಲ್ಲಿ ಮೊದಲ ದಿನ 16 ಕೋಟಿ ರೂ., ಟಾಲಿವುಡ್‌ನಲ್ಲಿ 4 ಕೋಟಿ 50 ಲಕ್ಷ ರೂ., ಬಾಲಿವುಡ್‌ನಲ್ಲಿ 4 ಕೋಟಿ ರೂ., ಮಾಲಿವುಡ್‌ನಲ್ಲಿ 1 ಕೋಟಿ ರೂ., ಕಾಲಿವುಡ್ ಅಂಗಳದಲ್ಲಿ 2.5 ಕೋಟಿ ರೂ., ಓವರ್ ಸೀಸ್‌ನಲ್ಲಿ 7 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಾರದ ಅಂತ್ಯದಲ್ಲಿ ದಾಖಲೆ ಸಂಗ್ರಹ ಬರುವ ಸಾಧ್ಯತೆಗಳಿವೆ.
ಇದನ್ನೂ ಓದಿ | Vikrant Rona | ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್
ಪ್ರಪಂಚದಾದ್ಯಂತ 2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕ 400 ಸ್ಕ್ರೀನ್‌ನಲ್ಲಿ 2500 ಶೋಗಳು, ಬೆಂಗಳೂರು 110 ಸ್ಕ್ರೀನ್‌ನಲ್ಲಿ 1200 ಶೋಗಳು, ಆಂಧ್ರ, ತೆಲಂಗಾಣಗಳಲ್ಲಿ 350 ಸ್ಕ್ರೀನ್‌ನಲ್ಲಿ 1400 ಶೋಗಳು, ತಮಿಳುನಾಡು 250 ಸ್ಕ್ರೀನ್‌ನಲ್ಲಿ 1000 ಶೋಗಳು, ಕೇರಳ 110 ಸ್ಕ್ರೀನ್‌ನಲ್ಲಿ 600 ಶೋಗಳು, ಉತ್ತರ ಭಾರತದ 690 ಸ್ಕ್ರೀನ್‌ಗಳಲ್ಲಿ 2800 ಶೋಗಳು, ವಿದೇಶಗಳ 600 ಸ್ಕ್ರೀನ್‌ಗಳಲ್ಲಿ 1500 ಶೋಗಳು ಹಾಗೂ 900 3ಡಿ ಸ್ಕ್ರೀನ್‌ಗಳು ಮತ್ತು 1600 2ಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗಿದತ್ತು.
ಇದನ್ನೂ ಓದಿ | Vikrant Rona Review | ಮೇಕಿಂಗ್‌ನಲ್ಲಿ ಹೊಸ ಜಗತ್ತು ಕಟ್ಟಿದ ವಿಕ್ರಾಂತ್ ರೋಣ