ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣಕ್ಕೆ (Vikrant Rona) ವಿಶ್ವದೆಲ್ಲೆಡೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗುರುವಾರ (ಜು.28) ಸಿನಿಮಾ ಬಿಡುಗಡೆಗೊಂಡಿದ್ದು, ಬೆಳಗ್ಗೆ 6ರಿಂದಲೇ ಪ್ರದರ್ಶನಗಳು ಶುರುವಾಗಿದ್ದವು. ಮೊದಲ ದಿನದ ಬರೋಬ್ಬರಿ 22 ಕೋಟಿ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಬಂದಿದೆ.
ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ವಿಕ್ರಾಂತ್ ರೋಣ ಕಲೆಕ್ಷನ್ ಬಗ್ಗೆ ಹಲವು ಚರ್ಚೆಗಳೇ ಹುಟ್ಟಿಕೊಂಡಿವೆ. ಸದ್ಯ ಮೊದಲ ದಿನದ ಕಲೆಕ್ಷನ್ 22 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಇನ್ನೂ ನಿಖರ ಮಾಹಿತಿ ಬಂದಿಲ್ಲ. ಬಾಕ್ಸ್ ಆಫೀಸ್ ಟ್ರೇಡ್ ವಿಶ್ಲೇಷಕರು ವಿಕ್ರಾಂತ್ ರೋಣ ಸಿನಿಮಾದ ಕಲೆಕ್ಷನ್ ಬಗ್ಗೆ ಅಂದಾಜಿಸಿದ್ದಾರೆ. ಕರ್ನಾಟಕದಿಂದ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಹಿಂದಿ ಭಾಷಿಕ ರಾಜ್ಯಗಳ ಕಲೆಕ್ಷನ್ ಸೇರಿಸಿದರೆ ಒಟ್ಟು 20ರಿಂದ 22 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಪ್ರಪಂಚದಾದ್ಯಂತ ಪ್ರದರ್ಶನ
ಪ್ರಪಂಚದಾದ್ಯಂತ -2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕ 400 ಸ್ಕ್ರೀನ್‌ನಲ್ಲಿ 2500 ಶೋಗಳು, ಬೆಂಗಳೂರು 110 ಸ್ಕ್ರೀನ್‌ನಲ್ಲಿ 1200 ಶೋಗಳು, ಆಂಧ್ರ, ತೆಲಂಗಾಣಗಳಲ್ಲಿ 350 ಸ್ಕ್ರೀನ್‌ನಲ್ಲಿ 1400 ಶೋಗಳು, ತಮಿಳುನಾಡು 250 ಸ್ಕ್ರೀನ್‌ನಲ್ಲಿ 1000 ಶೋಗಳು, ಕೇರಳ 110 ಸ್ಕ್ರೀನ್‌ನಲ್ಲಿ 600 ಶೋಗಳು, ಉತ್ತರ ಭಾರತದ 690 ಸ್ಕ್ರೀನ್‌ಗಳಲ್ಲಿ 2800 ಶೋಗಳು, ವಿದೇಶಗಳ 600 ಸ್ಕ್ರೀನ್‌ಗಳಲ್ಲಿ 1500 ಶೋಗಳು ಹಾಗೂ 900 3ಡಿ ಸ್ಕ್ರೀನ್‌ಗಳು ಮತ್ತು 1600 2ಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗಿದೆ.
ವಿಕ್ರಾಂತ್ ರೋಣನ ಸ್ಪೆಷಲ್
ವಿಕ್ರಾಂತ್ ರೋಣ ಸಿನಿಮಾವನ್ನು ದೇಶದ ಯಾವ ಭಾಷೆಯ ಪ್ರೇಕ್ಷಕರೂ ಸಹ ನೋಡಬಹುದಾಗಿದೆ. ಈ ಸಿನಿಮಾವನ್ನು ಸಿನಿಮಾ ಡಬ್ಸ್ ಆ್ಯಪ್‌ನಲ್ಲಿ ತಮಗೆ ಬೇಕಾದ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ. ಮೆಟಾವರ್ಸ್ ಅಥವಾ ಬಹು ಆಯಾಮದ ಡಿಜಿಟಲ್ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನು ಈಗಾಗಲೇ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣನ ಬಗ್ಗೆ ಸೆಲೆಬ್ರಿಟಿಗಳ ಮೆಚ್ಚುಗೆಯ ಟ್ವೀಟ್‌ಗಳು