Vikrant Rona | ವಿಕ್ರಾಂತ್ ರೋಣ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು? - Vistara News

ಸಿನಿಮಾ

Vikrant Rona | ವಿಕ್ರಾಂತ್ ರೋಣ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

ಬಾಕ್ಸ್​ ಆಫೀಸ್​ ಟ್ರೇಡ್​ ವಿಶ್ಲೇಷಕರು ವಿಕ್ರಾಂತ್​ ರೋಣ (Vikrant Rona ) ಸಿನಿಮಾದ ಕಲೆಕ್ಷನ್‌ನ ಅಂದಾಜು ಮೊತ್ತದ ಬಗ್ಗೆ ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

VISTARANEWS.COM


on

Vikrant Rona
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣಕ್ಕೆ (Vikrant Rona) ವಿಶ್ವದೆಲ್ಲೆಡೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಗುರುವಾರ (ಜು.28) ಸಿನಿಮಾ ಬಿಡುಗಡೆಗೊಂಡಿದ್ದು, ಬೆಳಗ್ಗೆ 6ರಿಂದಲೇ ಪ್ರದರ್ಶನಗಳು ಶುರುವಾಗಿದ್ದವು. ಮೊದಲ ದಿನದ ಬರೋಬ್ಬರಿ 22 ಕೋಟಿ ಕಲೆಕ್ಷನ್‌ ಮಾಡಿದೆ ಎಂಬ ಮಾಹಿತಿ ಬಂದಿದೆ.

ಪ್ರೇಕ್ಷಕರ ರೆಸ್ಪಾನ್ಸ್‌ ನೋಡಿ ವಿಕ್ರಾಂತ್‌ ರೋಣ ಕಲೆಕ್ಷನ್‌ ಬಗ್ಗೆ ಹಲವು ಚರ್ಚೆಗಳೇ ಹುಟ್ಟಿಕೊಂಡಿವೆ. ಸದ್ಯ ಮೊದಲ ದಿನದ ಕಲೆಕ್ಷನ್ 22 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಇನ್ನೂ ನಿಖರ ಮಾಹಿತಿ ಬಂದಿಲ್ಲ. ಬಾಕ್ಸ್​ ಆಫೀಸ್​ ಟ್ರೇಡ್​ ವಿಶ್ಲೇಷಕರು ವಿಕ್ರಾಂತ್​ ರೋಣ ಸಿನಿಮಾದ ಕಲೆಕ್ಷನ್​ ಬಗ್ಗೆ ಅಂದಾಜಿಸಿದ್ದಾರೆ. ಕರ್ನಾಟಕದಿಂದ ಸುಮಾರು 16 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದರೆ, ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಹಿಂದಿ ಭಾಷಿಕ ರಾಜ್ಯಗಳ ಕಲೆಕ್ಷನ್​ ಸೇರಿಸಿದರೆ ಒಟ್ಟು 20ರಿಂದ 22 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಪ್ರಪಂಚದಾದ್ಯಂತ ಪ್ರದರ್ಶನ

ಪ್ರಪಂಚದಾದ್ಯಂತ -2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕ 400 ಸ್ಕ್ರೀನ್‌ನಲ್ಲಿ 2500 ಶೋಗಳು, ಬೆಂಗಳೂರು 110 ಸ್ಕ್ರೀನ್‌ನಲ್ಲಿ 1200 ಶೋಗಳು, ಆಂಧ್ರ, ತೆಲಂಗಾಣಗಳಲ್ಲಿ 350 ಸ್ಕ್ರೀನ್‌ನಲ್ಲಿ 1400 ಶೋಗಳು, ತಮಿಳುನಾಡು 250 ಸ್ಕ್ರೀನ್‌ನಲ್ಲಿ 1000 ಶೋಗಳು, ಕೇರಳ 110 ಸ್ಕ್ರೀನ್‌ನಲ್ಲಿ 600 ಶೋಗಳು, ಉತ್ತರ ಭಾರತದ 690 ಸ್ಕ್ರೀನ್‌ಗಳಲ್ಲಿ 2800 ಶೋಗಳು, ವಿದೇಶಗಳ 600 ಸ್ಕ್ರೀನ್‌ಗಳಲ್ಲಿ 1500 ಶೋಗಳು ಹಾಗೂ 900 3ಡಿ ಸ್ಕ್ರೀನ್‌ಗಳು ಮತ್ತು 1600 2ಡಿ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಮಾಡಲಾಗಿದೆ.

ವಿಕ್ರಾಂತ್‌ ರೋಣನ ಸ್ಪೆಷಲ್‌

ವಿಕ್ರಾಂತ್‌ ರೋಣ ಸಿನಿಮಾವನ್ನು ದೇಶದ ಯಾವ ಭಾಷೆಯ ಪ್ರೇಕ್ಷಕರೂ ಸಹ ನೋಡಬಹುದಾಗಿದೆ. ಈ ಸಿನಿಮಾವನ್ನು ಸಿನಿಮಾ ಡಬ್ಸ್‌ ಆ್ಯಪ್‌ನಲ್ಲಿ ತಮಗೆ ಬೇಕಾದ ಭಾಷೆಯಲ್ಲಿ ವೀಕ್ಷಿಸಬಹುದಾಗಿದೆ. ಮೆಟಾವರ್ಸ್‌ ಅಥವಾ ಬಹು ಆಯಾಮದ ಡಿಜಿಟಲ್‌ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನು ಈಗಾಗಲೇ ಚಿತ್ರ ತಂಡ ಹಂಚಿಕೊಂಡಿದೆ.

ಇದನ್ನೂ ಓದಿ | Vikrant Rona | ವಿಕ್ರಾಂತ್‌ ರೋಣನ ಬಗ್ಗೆ ಸೆಲೆಬ್ರಿಟಿಗಳ ಮೆಚ್ಚುಗೆಯ ಟ್ವೀಟ್‌ಗಳು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Alia Bhatt: ಆಲಿಯಾ ಭಟ್‌ ಒಂದಲ್ಲ ಒಂದು ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್‌ ಎಲ್ಲೇ ಕಾಣಿಸಿಕೊಂಡರೂ ಹೈಲೈಟ್‌ ಆಗೋದು ಅವರ ಫ್ಯಾಷನ್‌. ಇದೀಗ ಲಂಡನ್‌ನಲ್ಲಿ ನಡೆದ ಹೋಪ್ ಗಾಲಾದಲ್ಲಿ ಆಲಿಯಾ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರ ಧರಿಸಿದ್ದರು. ಇದೀಗ ಈ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರಗಳ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ವರದಿಯಾಗಿದೆ.

VISTARANEWS.COM


on

Alia Bhatt wore diamond jewellery
Koo

ಬೆಂಗಳೂರು: ಭಾರತದಲ್ಲಿರುವ ಬಡ ಯುವಜನರಿಗಾಗಿ (underprivileged adolescents) ಹಣವನ್ನು ಸಂಗ್ರಹಿಸಿ ಸಲಾಮ್ ಬಾಂಬೆ ಫೌಂಡೇಶನ್‌ಗೆ ನೀಡಿದ್ದಾರೆ ಆಲಿಯಾ (Alia Bhatt). ಈ ಕಾರ್ಯಕ್ರಮ ಲಂಡನ್‌ನಲ್ಲಿ ಗುರುವಾರ (ಮಾ.28) ಸಂಜೆ ನಡೆದಿದೆ. ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ ಹೈಲೈಟ್‌ ಆಗಿದ್ದು ಆಲಿಯಾ ಅವರ ವಜ್ರದ ನೆಕ್ಲೇಸ್. ಆಲಿಯಾ ಧರಿಸಿದ್ದ ಇಟಾಲಿಯನ್ ಆಭರಣ ಲೇಬಲ್‌ನ ನೆಕ್ಲೇಸ್ ಮತ್ತು ಉಂಗುರಗಳ ಬೆಲೆ ಬರೋಬ್ಬರಿ 20 ಕೋಟಿ ರೂ. ಎಂದು ವರದಿಯಾಗಿದೆ.

ಈ ಹೋಪ್ ಗಾಲಾ (Hope Gala) ಕಾರ್ಯಕ್ರಮದಲ್ಲಿ (Salaam Bombay foundation) ಸಂಗೀತಗಾರ ಹರ್ಷದೀಪ್ ಕೌರ್, ಹಾಸ್ಯನಟ ರೋಹನ್ ಜೋಶಿ ಮತ್ತು ನಿರ್ದೇಶಕ ಗುರಿಂದರ್ ಚಡ್ಡಾ ಭಾಗಿಯಾಗಿದ್ದರು.

ಗಾಲಾ ಆಯೋಜಿಸಲಾದ ಸ್ಥಳವಾದ ಮ್ಯಾಂಡರಿನ್ ಓರಿಯಂಟಲ್, ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಶೇರ್‌ ಮಾಡಿಕೊಂಡಿದೆ. ವಿಡಿಯೊದಲ್ಲಿ ಆಲಿಯಾ ಎರಡು ವಿಭಿನ್ನ ನೋಟದಲ್ಲಿ ಕಂಡರು. ರೆಡ್ ಕಾರ್ಪೆಟ್‌ನಲ್ಲಿ ಆಲಿಯಾ, ಮರೂನ್ ಉಡುಪನ್ನು ಧರಿಸಿದ್ದರೆ, ಗಾಲಾಗಾಗಿ ಕ್ರೀಮ್ ಕಲರ್‌ ಸೀರೆಗೆಯುಟ್ಟಿದ್ದರು. ಆಲಿಯಾ ಬುಧವಾರ ರಾತ್ರಿ (ಮಾ.26) ಲಂಡನ್‌ಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಇನ್ನು ಹೋಪ್ ಗಾಲಾದಲ್ಲಿ ಗುರಿಂದರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರ್ಷದೀಪ್ ಅವರ ಸಂಗೀತ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ, ಹರ್ಷದೀಪ್ ಅವರ ಹಿಟ್ ಹಾಡುಗಳಲ್ಲಿ ಒಂದನ್ನು ಪ್ರದರ್ಶಿಸುವುದನ್ನು ಕಾಣಬಹುದು. ಈವೆಂಟ್‌ನಲ್ಲಿ ಆಲಿಯಾ ಉದ್ಯಮಿ ನತಾಶಾ ಪೂನಾವಾಲಾ ಅವರೊಂದಿಗೆ ಪೋಸ್ ನೀಡಿದ್ದರು.

ಆಲಿಯಾ (Alia Bhatt) ಇತ್ತೀಚೆಗಷ್ಟೇ ಜಿಗ್ರಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಇದರಲ್ಲಿ ʻದಿ ಆರ್ಚೀಸ್ʼ ಖ್ಯಾತಿಯ ವೇದಾಂಗ್ ರೈನಾ ಕೂಡ ನಟಿಸಿದ್ದಾರೆ.

ನಿರ್ದೇಶಕ ಫರ್ಹಾನ್ ಅಖ್ತರ್ ಅವರ ʻಜೀ ಲೇ ಜರಾʼ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರವು ʻದಿಲ್ ಚಾಹ್ತಾ ಹೈʼ ಮತ್ತು ʻಜಿಂದಗಿ ನಾ ಮಿಲೇಗಿ ದೊಬಾರಾʼ ರೀತಿಯ ಸ್ನೇಹದ ಮತ್ತೊಂದು ಕಥೆಯಾಗಿದೆ ಎಂದು ವರದಿಯಾಗಿದೆ. ಸಿನಿಮಾದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ.

ಇದನ್ನೂ ಓದಿ: Alia Bhatt: ಲಂಡನ್‌ನಲ್ಲಿ `ಹೋಪ್ ಗಾಲಾ’ ಹೋಸ್ಟ್‌ ಮಾಡಿದ ಆಲಿಯಾ; ಏನಿದರ ಉದ್ದೇಶ?

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ ಆಲಿಯಾ ಭಟ್‌!

YRF ಸ್ಪೈ ಯೂನಿವರ್ಸ್ ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ (2012), ನಂತರ ‘ಟೈಗರ್ ಜಿಂದಾ ಹೈ’ (2017), ಮತ್ತು ‘ವಾರ್’ (2019), ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸುವುದರೊಂದಿಗೆ ಪ್ರಾರಂಭವಾಯಿತು. ಆಲಿಯಾ ಭಟ್ (Alia Bhatt) ಅವರ ಸಿನಿಮಾ ‘ಯಶ್ ರಾಜ್ ಫಿಲ್ಮ್ಸ್’ನ ಸ್ಪೈ ಯೂನಿವರ್ಸ್​ನ ಆರನೇ ಚಿತ್ರ ಆಗಲಿದೆ.ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಕೆಲಸಗಳು ನಡೆಯುತ್ತಿವೆ. ‘ಪಠಾಣ್ 2’ ಸಿನಿಮಾ ಕೂಡ ಬರಲಿದೆ. ಇದೀಗ ಈ ಸ್ಪೈ ಯೂನಿವರ್ಸ್‌ಗೆ ಆಲಿಯಾ ಭಟ್ ಅವರು ಭಾಗವಾಗಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಸಿಇಒ ಅಕ್ಷಯ್ ವಿಧಾನಿ ಮಾತನಾಡಿ ʻ ಆಲಿಯಾ ಭಟ್ ಸ್ಪೈ ಯೂನಿವರ್ಸ್‌’ (Alia Bhatt) ಭಾಗವಾಗಿದ್ದಾರೆ. ಈ ವರ್ಷದ ಅಂತ್ಯಕ್ಕೆ ಚಿತ್ರದ ಶೆಡ್ಯೂಲ್‌ ಶುರುವಾಗಲಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಶರ್ವರಿ ವಾಘ್ ಜತೆ ಆಲಿಯಾ ಭಟ್ ಜೋಡಿಯಾಗಲಿದ್ದಾರೆ. ಆಕ್ಷನ್ ಎಂಟರ್ಟೈನರ್ ನಲ್ಲಿ ಸೂಪರ್-ಏಜೆಂಟ್‌ಗಳಾಗಿ ನಟಿಸುತ್ತಾರೆ. ಯೂನಿವರ್ಸ್ ಅಡಿಯಲ್ಲಿ ನಾವು ಹಲವು ಸಿನಿಮಾ ಮಾಡುತ್ತಿದ್ದೇವೆ. ಆದರೆ, ಎಲ್ಲವನ್ನೂ ಇಲ್ಲಿ ಹಂಚಿಕೊಳ್ಳಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗ ಮಾತನಾಡುತ್ತೇವೆʼʼ ಎಂದು ಹೇಳಿಕೊಂಡಿದ್ದಾರೆ.

Continue Reading

ಬಿಗ್ ಬಾಸ್

Varthur Santhosh: ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ವರ್ತೂರ್‌ ಸಂತೋಷ್‌!

Varthur Santhosh: ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯುಟ್ಯೂಬ್‌ ಚಾನೆಲ್‌ ವೊಂದರ ಬಗ್ಗೆ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಕಟುವಾಗಿಯೇ ಏಕವಚನದಲ್ಲಿ ಮಾತನಾಡಿದ್ದಾರೆ ವರ್ತೂರ್‌ ಸಂತೋಷ್‌.

VISTARANEWS.COM


on

Varthur Santhosh tears
Koo

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ ಸ್ಪರ್ಧಿ ವರ್ತೂರ್‌ ಸಂತೋಷ್‌ (Varthur Santhosh) ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಜತೆಗೆ ಅವರ ವಿರುದ್ಧ ಹಲವರು ಟೀಕೆ ಮಾಡುವವರು ಇದ್ದಾರೆ. ವರ್ತೂರು ಸಂತೋಷ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಣ್ಣೀರು ಹಾಕಿದ್ದಾರೆ. ಕೆಟ್ಟದಾಗಿ ಟೀಕೆಗಳನ್ನು ಮಾಡುತ್ತಿರುವುದರಿಂದ ತಾಯಿ ಊಟ ಮಾಡುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಯೂಟ್ಯೂಬ್ ಚಾನೆಲ್​ನಲ್ಲಿ ಗೆಳೆಯರ ಜತೆ ವಿಡಿಯೊ ಮಾಡಿರುವ ವರ್ತೂರು ಸಂತೋಷ್, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಯುಟ್ಯೂಬ್‌ ಚಾನಲ್‌ ವೊಂದರ ಬಗ್ಗೆ ಹಾಗೂ ಒಬ್ಬ ವ್ಯಕ್ತಿಯ ಬಗ್ಗೆ ಕಟುವಾಗಿಯೇ ಏಕವಚನದಲ್ಲಿ ಮಾತನಾಡಿದ್ದಾರೆ.

ವರ್ತೂರ್‌ ಸಂತೋಷ್‌ (Varthur Santhosh) ಮಾತನಾಡಿ ʻʻಇಡೀ ಕರ್ನಾಟಕ ಜನತೆಗೆ ನಾನು ಹೇಳೋದು ಒಂದೇ. ಇಂದು ಬಹಳ ನೋವಾಗಿದೆ. ನನ್ನ ತಾಯಿ ನನ್ನ ತಂದೆಯನ್ನು ಕಳೆದುಕೊಂಡ ನಂತರ ಗೌರವದಿಂದ ನನ್ನನ್ನು ಸಾಕಿದರು. 2022ರಲ್ಲಿ ರೇಸ್‌ ಮಾಡಿದಾಗ ಬಂದು ಎಂಜಲು ಕಾಸು ತಿಂದ ಮಕ್ಕಳು ಇವರು. ನಮ್ಮ ಅನ್ನ ತಿಂದು ಇವತ್ತು ನಮಗೆ ಅನ್ನುತ್ತಾರೆ. ಅದಕ್ಕೆ ಭಗವಂತನೇ ಸಾಕ್ಷಿ. ನಮ್ಮ ರೇಸ್‌ನಲ್ಲಿ ಇವರೆಲ್ಲ ಒಂದು ಸಾವಿರ, ಎರಡು ಸಾವಿರಕ್ಕೆ ಬಂದವರುʼʼಎಂದು ಬೇಸರ ಹೊರ ಹಾಕಿದರು.

ಇದನ್ನೂ ಓದಿ: Varthur Santhosh: `ಹಳ್ಳಿಕಾರ್ ಒಡೆಯ’ ವಿವಾದದ ಬಗ್ಗೆ ವರ್ತೂರ್‌ ಸಂತೋಷ್‌ ರಿಯಾಕ್ಷನ್‌ ಏನು?

ʻʻಇಷ್ಟೆಲ್ಲ ವಿಡಿಯೊಗಳನ್ನು ಮಾಡುತ್ತಾರೆ. ನಾನು ಮಾತನಾಡಿರುವ ವಿಡಿಯೊ ಯಾವುದಾದರೂ ಹಾಕಿದ್ದಾರಾ? ಕಮೆಂಟ್‌ ಸೆಕ್ಷನ್‌ ಆಫ್‌ ಮಾಡುತ್ತಾರೆ. ನಾನು ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಈ ಮೂಲಕ ಹೇಳುವುದೇನಂದ್ರೆ, ನಾನು ಇದೂವರೆಗೂ ಒಬ್ಬರಿಗೆ ಅನ್ಯಾಯ ಮಾಡಿಲ್ಲ. ಒಬ್ಬರ ಅನ್ನ ಕಿತ್ತುಕೊಂಡಿಲ್ಲʼʼ ಎಂದರು.

ʻʻಕರ್ನಾಟಕ ಜನರು ನನ್ನ ಧರ್ಮ, ದೇವರು. ಇಷ್ಟು ಬೆಳಿಸಿದ್ದೀರಾ ನನ್ನನ್ನು. ನಾನು ಯಾರ ಅನ್ನ ಕಿತ್ತುಕೊಂಡಿಲ್ಲ. ನಾವು ತುಂಬಾ ಮರ್ಯಾದೆ ಇಂದ ಬದುಕಿದ್ದವರು. ನಮ್ಮ ತಾಯಿ ಊಟ ಮಾಡಲ್ಲ ಅಣ್ಣ. ಈ ನನ್ ಮಕ್ಕಳು ಒಂದೊಂದಲ್ಲ ಅಣ್ಣ. ಆ ರೆಕಾರ್ಡಿಂಗ್‌ಗಳು ಎಲ್ಲೆಲ್ಲಿ ಸಿಗ್ತಾವೋ ಆ ಭಗವಂತನಿಗೆ ಗೊತ್ತು. ನಮ್ಮ ಹಾಗೇ ಇದ್ದು, ನಮ್ಮೊಂದಿಗೆ ಇದ್ದು ಹೀಗೆ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳು ತಣ್ಣಗಿರಲಿʼʼಎಂದು ಬೇಸರ ಹೊರಹಾಕಿದ್ದಾರೆ. ಮಾತ್ರವಲ್ಲ ತಮ್ಮ ಬಗ್ಗೆ ಈ ರೀತಿ ಇಲ್ಲ ಸಲ್ಲದ ವಿಚಾರಗಳನ್ನು ಪೋಸ್ಟ್‌ ಮಾಡಿದ ಯೂಟ್ಯೂಬ್ ಚಾನೆಲ್​ ಅನ್ನು ರಿಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ.

Continue Reading

ಕಿರುತೆರೆ

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Sonarika Bhadoria: ಗೆಳೆಯ ವಿಕಾಸ್‌ ಪರಾಶರ್‌ ಜತೆ ಸೋನಾರಿಕಾ ಭಡೋರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ವಿಕಾಸ್‌ ಜತೆಗಿನ ಹನಿಮೂನ್‌ನ ಹಾಟ್‌ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

VISTARANEWS.COM


on

Sonarika Bhadoria
Koo

ಇತ್ತೀಚೆಗಷ್ಟೇ ವಿವಾಹವಾದ ಹಿಂದಿ ಕಿರುತೆರೆ ನಟಿ ʻದೇವೋಂಕಾ ದೇವ್‌ ಮಹಾದೇವ್‌ʼ ಸೋನಾರಿಕಾ ಭಡೋರಿಯಾ (Sonarika Bhadoria) ಅದ್ಧೂರಿಯಾಗಿ ವಿವಾಹವಾಗಿದ್ದರು. ಆ ಬಳಿಕ ತಮ್ಮ ಹನಿಮೂನ್‌ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಈಗ ಶೇರ್‌ ಮಾಡಿಕೊಂಡಿದ್ದಾರೆ.

ಸೋನಾರಿಕಾ ಅವರು ಇತ್ತೀಚೆಗೆ ಲೇಯರ್ ಟೈ-ಬ್ಯಾಕ್ ವಿನ್ಯಾಸದೊಂದಿಗೆ ಹೈ-ಕಟ್ ಬಿಕಿನಿಯೊಂದಿಗೆ ಮತ್ತು ಮ್ಯಾಚಿಂಗ್ ಕವರ್-ಅಪ್ ಮ್ಯಾಕ್ಸಿ ಸ್ಕರ್ಟ್‌ನೊಂದಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಗೆಳೆಯ ವಿಕಾಸ್‌ ಪರಾಶರ್‌ ಜತೆ ಸೋನಾರಿಕಾ ಭಡೋರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ವಿಕಾಸ್‌ ಜತೆಗಿನ ಹನಿಮೂನ್‌ನ ಹಾಟ್‌ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Thalaivar 171: ರಜನಿಕಾಂತ್‌ 171ನೇ ಸಿನಿಮಾ ಪೋಸ್ಟರ್‌ ಔಟ್‌; ʻರೋಲೆಕ್ಸ್‌ʼ ಸೂರ್ಯ ಎಂಟ್ರಿ ಆಗ್ತಾರಾ?

ಇದೀಗ ನಟಿ ಬೀಚ್‌ನಲ್ಲಿ ಎಂಜಾಯ್‌ ಮಾಡಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಹುತೇಕ ಮಂದಿ ಸೋನಾರಿಕಾ ತಮ್ಮ ಹನಿಮೂನ್‌ ಮಾಲ್ಡೀವ್ಸ್‌ನಲ್ಲಿ ಆಚರಿಸಿಕೊಂಡಿದ್ದಾರೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಇದು ಲಕ್ಷದ್ವೀಪದ ಚಿತ್ರ ಎಂದಿದ್ದಾರೆ.

ಸೋನಾರಿಕಾ (Sonarika Bhadoria) 2015ರಲ್ಲಿ ಜಾದೂಗಾಡು (Jadoogadu) ತೆಲುಗು ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

Continue Reading

ವೈರಲ್ ನ್ಯೂಸ್

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಹಲವು ಪ್ರತಿಭೆಗಳು ಲಿಪ್‌ ಸಿಂಕ್‌ ಮಾಡಿವೆ.  ಇದೀಗ ವಯೋಲಿನ್‌ ವಾದಕ ಹೇಗೆ ನುಡಿಸಿದ್ದಾರೆ ಎಂದು ನೀವೇ ನೋಡಿ!

VISTARANEWS.COM


on

Karimani Malika Ninalla play by violinist Aneesh Vidyashankar
Koo

ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್‌ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ ಶೇರ್‌ ಮಾಡಿದ ಬಳಿಕ ಇನ್ನಷ್ಟು ಪ್ರತಿಭೆಗಳು ಈ ರೀಲ್ಸ್‌ಗೆ ಲಿಪ್‌ ಸಿಂಕ್‌ ಮಾಡಿವೆ.  ಇದುವರೆಗೆ ಈ ರೀಲ್ಸ್‌ಗೆ ಕ್ರೇಜ್‌ ಕಡಿಮೆಯಾಗಿಲ್ಲ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದರು. ಇದೀಗ ನಡೆದಾಡುವ ವಯೋಲಿನ್‌ ವಾದಕ ಎಂದೇ ಖ್ಯಾತರಾಗಿರುವ ʻಅನೀಶ್‌ ವಿದ್ಯಾಶಂಕರ್‌ʼ (violinist Aneesh Vidyashankar) ಈ ಹಾಡನ್ನು ನುಡಿಸಿದ್ದಾರೆ. ವಿಕ್ಕಿಪೀಡಿಯಾ, ಚಂದ್ರು, ಹಾಗೂ ರಾವುಲ್ಲಾ ಶಾಸ್ತ್ರೀಯ ಸಂಗೀತ ತರಗತಿಗೆ ಹೋದರೆ ಎಷ್ಟು ಸೊಗಸಾಗಿರಬಹುದಲ್ಲವೇ ಎಂದು ವಿಡಿಯೊ ಹಂಚಿಕೊಂಡು ಕ್ಯಾಪ್ಷನ್‌ ಕೊಡಲಾಗಿದೆ.

ಅನೀಶ್‌ ವಿದ್ಯಾಶಂಕರ್‌ ಅವರಿಗೆ 33 ವರ್ಷ ಇರಬಹುದು. ಆದರೆ ಅವರು ಸುಮಾರು 25 ವರ್ಷಗಳಿಂದ ವೃತ್ತಿಪರ ಸಂಗೀತಗಾರರಾಗಿದ್ದಾರೆ. 2,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅವರು ವಯೋಲಿನ್‌ ನುಡಿಸಿದ್ದಾರೆ. ಇನ್ನು ಅನೀಶ್‌ ವಿದ್ಯಾಶಂಕರ್‌ ಈ ವಿಡಿಯೊ ಪೋಸ್ಟ್‌ ಮಾಡಿದ ಬಳಿಕ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಹಾರ್ಟ್‌ ಇಮೋಜಿ ಕಮೆಂಟ್‌ ಮಾಡಿದ್ದಾರೆ.

ಉಪೇಂದ್ರ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ. ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್‌ ಮಾಡಿದ್ದರು. ಇದು ಸಖತ್‌ ವೈರಲ್‌ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್‌ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ… ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. 1999ರ ಅಕ್ಟೋಬರ್ 22ರಂದು ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಈ ಚಿತ್ರಕ್ಕೆ ನಟಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರೀ ಸದ್ದು ಮಾಡಿದ್ದವು.

ಇದನ್ನೂ ಓದಿ: Karimani Malika Ninalla: ಗೋಕರ್ಣದ ವಿದೇಶಿಯರ ಬಾಯಲ್ಲೂ ʻಕರಿಮಣಿ ಮಾಲಿಕ ರಾವುಲ್ಲಾʼ ಸಾಂಗ್‌!

ಅನೀಶ್‌ ವಿದ್ಯಾಶಂಕರ್‌ ಶೇರ್‌ ಮಾಡಿರುವ ವಿಡಿಯೊ

ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?

ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿಯಾಗಿತ್ತು. ಮುಂದೆ ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.

Continue Reading
Advertisement
Anjanadri Hill Shree Anjaneya Swamy Temple Hundi money leak video viral
ಕೊಪ್ಪಳ12 mins ago

Koppala News: ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನದ ಹುಂಡಿಯ ಹಣ ಸೋರಿಕೆ ವಿಡಿಯೊ ವೈರಲ್

Kalaburagi News
ಕರ್ನಾಟಕ14 mins ago

Kalaburagi News: ಕಲಬುರಗಿ ಉಚ್ಚಾಯಿ ರಥೋತ್ಸವದಲ್ಲಿ ದುರಂತ; ತೇರಿನ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ದುರ್ಮರಣ

Violation of Code of Conduct 84 thousand rupees cash seized at honnali
ದಾವಣಗೆರೆ16 mins ago

Davanagere News: ನೀತಿ ಸಂಹಿತೆ ಉಲ್ಲಂಘನೆ; 84 ಸಾವಿರ ರೂ. ನಗದು ಜಪ್ತಿ

Lok Sabha Election 2024 and BY Vijayendra meets Sumalatha Ambareesh for discussion on support to NDA candidate in Mandya Lok Sabha Constituency
Lok Sabha Election 202417 mins ago

Lok Sabha Election 2024: ಸುಮಲತಾ ಭೇಟಿ ಮಾಡಿದ ವಿಜಯೇಂದ್ರ; ನಾಳೆಯೇ ಫೈನಲ್‌ ಅಂದ್ರು ರೆಬೆಲ್‌ ಲೇಡಿ!

Bomb threat
ಕರ್ನಾಟಕ56 mins ago

Bomb Threat: ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ!

Mukthar Ansari
ಪ್ರಮುಖ ಸುದ್ದಿ1 hour ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ2 hours ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ2 hours ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ2 hours ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ2 hours ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ16 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌