ಬೆಂಗಳೂರು: ವಿಕ್ರಾಂತ್ ರೋಣ (Vikrant Rona) ಸಿನಿಮಾದ ಜೋಶ್ ದೇಶಾದ್ಯಂತ ವ್ಯಾಪಿಸಿದ್ದು, ಇದೀಗ ಜಪಾನ್‌ನಲ್ಲಿ ಕೂಡ ರಾ ರಾ ರಕ್ಕಮ್ಮ ಹಾಡಿಗೆ ಜನ ಕುಣಿಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರಾ ರಾ ರಕ್ಕಮ್ಮ ಹಾಡು ಈಗಾಗಲೇ ಟ್ರೆಂಡ್ ಆಗಿದ್ದು, ಅನೇಕರು ಈ ಹಾಡಿಗೆ ಸ್ಟೆಪ್ ಹಾಕಿ ವಿಡಿಯೊ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇತ್ತಿಚೇಗೆ ಒಂದರ ಬೆನ್ನಲ್ಲಿ ಮತ್ತೊಂದು ಅತ್ಯುತ್ತಮ ಸಿನಿಮಾ ತೆರೆಕಾಣುತ್ತಿದೆ. ಕೆಜಿಎಫ್ ಬಳಿಕ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ನಮ್ಮ ಕಿಚ್ಚ ಸುದೀಪ್ ಅಭಿನಯದ “ವಿಕ್ರಾಂತ್ ರೋಣʼ. ಈ ಸಿನಿಮಾದ ಒಂದು ಹಾಡನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಹಾಡು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿರುವುದು ಕಂಡುಬಂದಿದೆ. ಸುನಿಧಿ ಚೌಹಾಣ್, ಹಾಗೂ ನಕಾಶ್ ಅಜೀಝ್ ಹಾಡಿರುವ ರಾ ರಾ ರಕ್ಕಮ್ಮ ಹಾಡನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಹಾಡಿಗೆ ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಹೆಜ್ಜೆ ಹಾಕಿದ್ದು, ಎಲ್ಲರೂ ಅದನ್ನು ಅನುಕರಿಸಿ ವಿಡಿಯೊ ಮಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದವರ ಆದಿಯಾಗಿ ಬಾಲಿವುಡ್ ನಟರವರೆಗೂ ಈ ಹಾಡಿಗೆ ಕುಣಿದವರಿದ್ದಾರೆ. ಆದರೆ, ಇಲ್ಲೊಬ್ಬ ಜಪಾನ್ ಮೂಲದ ಯುವತಿ ಕನ್ನಡ ಹಾಡಿಗೆ ಹೆಜ್ಜೆ ಹಾಕಿರುವುದು ಎಲ್ಲೆಡೆ ವೈರಲ್ ಆಗಿದೆ. ರಕ್ಕಮ್ಮ ಹಾಡಿನ ಸಿಗ್ನೇಚರ್ ಸ್ಟೆಪ್ಪನ್ನು ಈಕೆ ಸುಂದರವಾಗಿ ಅನುಕರಿಸಿದ್ದು, ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ.
ಇದನ್ನೂ ಓದಿ: Vikrant Rona | ರಾ ರಾ ರಕ್ಕಮ್ಮ ಹುಚ್ಚೆಬ್ಬಿಸಿದ ಬಳಿಕ ಈಗ ಬರ್ತಿದೆ ಹಿತವಾದ ಲಾಲಿ ಹಾಡು