Site icon Vistara News

Vikrant Rona | ವಿಕ್ರಾಂತ್ ರೋಣ ಅಂದರೆ ವಿಕ್ಟರಿ ರೋಣ : ಇದು ರೋಣನ ಪ್ರೀ ರಿಲೀಸ್ ಇವೆಂಟ್ ಹಬ್ಬ

Vikrant Rona

ಬೆಂಗಳೂರು : ಬೆಂಗಳೂರಿನ ಲುಲು ಮಾಲ್‌ನಲ್ಲಿ ಬುಧವಾರ ಜುಲೈ 26ರಂದು ನಡೆದ ವಿಕ್ರಾಂತ್‌ ರೋಣ (Vikrant Rona ) ತಂಡದ ಪ್ರೀ ರಿಲೀಸ್ ಇವೆಂಟ್ ವೈಭೋಗಮಯವಾಗಿತ್ತು. ವೇದಿಕೆ ಮೇಲಿನ ವಸ್ತುಗಳು, ಎಲ್ಇ ಡಿ ಲೈಟ್ಸ್, 3ಡಿ ರೂಪದಲ್ಲಿದ್ದ ಪೋಸ್ಟರ್ ಎಲ್ಲವೂ ಕಣ್ಣುಕುಕ್ಕುತ್ತಿದ್ದವು.

ಕಿಚ್ಚನ ಆಗಮನಕ್ಕೆ ಕಲಾ ತಂಡಗಳೊಂದಿಗೆ ಅದ್ದೂರಿ ಸ್ವಾಗತ ಕೋರಿ, ಡೊಳ್ಳು ಕುಣಿತಕ್ಕೆ ಅಭಿಮಾನಿಗಳು ಹೆಜ್ಜೆ ಹಾಕಿದ್ದಾರೆ. ಇದಲ್ಲದೆ ಚಿನ್ನದ ನಾಡು ಕೋಲಾರ ಜಿಲ್ಲೆಯ ಅಭಿಮಾನಿಗಳು ಕಿಚ್ಚನ ಭಾವಚಿತ್ರವಿರುವ ಬಾವುಟ ಹಿಡಿದು ಹಾರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಪೇಂದ್ರ ʻಇದು ಪ್ಯಾನ್ ಇಂಡಿಯಾ ಸಿನಿಮಾ ಮಾತ್ರವಲ್ಲ, ಪ್ಯಾನ್ ವರ್ಲ್ಡ್‌ ಸಿನಿಮಾ. ವಿಆರ್ ಅಂದ್ರೆ ವಿಕ್ರಾಂತ್ ರೋಣ ಅಲ್ಲ ಇದು ವಿಕ್ಟರಿ ರೋಣ. ಟಿಕೆಟ್ ಖರೀದಿಸಿ ಅಭಿಮಾನಿಗಳೊಟ್ಟಿಗೆ ಕೂತು ಈ ಸಿನಿಮಾ ನೋಡುತ್ತೇನೆʼ ಎಂದು ಹೇಳಿ ರಕ್ಕಮ್ಮ ಹಾಡಿಗೆ ಉಪ್ಪಿ ಹೆಜ್ಜೆ ಹಾಕಿದರು.

ನೃತ್ಯ ಸಂಯೋಜಕ ಜಾನಿ ಮಾಸ್ಟರ್, ವೇದಿಕೆ ಮೇಲೆ ಪುನೀತ್ ರಾಜಕುಮಾರ್‌ ಅವರನ್ನು ನೆನೆದು ನಾನು ಈ ಮಟ್ಟದಲ್ಲಿ ಬೆಳೆಯಲು ಕಾರಣ ಅಪ್ಪು. ಅವರನ್ನು ಎಂದಿಗೂ ಮರೆಯೋದಿಲ್ಲ ಎಂದಿದ್ದಾರೆ. ಸುದೀಪ್ ಅಭಿಮಾನಿ ಮನೋಜ್, ಲಿಖಿತಾ ಹಾಗೂ ಶರ್ಮಿ ತಮ್ಮ ಕೈಯಾರೆ ಮಾಡಿದ್ದ ಜಾಕೆಟ್ ಅನ್ನು ಉಡುಗೊರೆಯಾಗಿ ಸುದೀಪ್‌ಗೆ ನೀಡಿದ್ದರು.

ವಿಕ್ರಾಂತ್ ರೋಣ ಚಿತ್ರದ ರಾಜಕುಮಾರಿ ಹಾಡನ್ನು ಸುದೀಪ್‌ ಅವರ ಮಗಳು ಸಾನ್ವಿ ಹಾಡಿ ಗಮನ ಸೆಳೆದಿದ್ದರು. ನಂತರ ಗರ ಗರ ಡೈಲಾಗ್ ಹೇಳಿ ಗಮತ್ತು ಹೆಚ್ಚಿಸಿದ್ದರು.

ಸಿನಿಮಾ ತೆರೆಗೆ ಅಪ್ಪಳಿಸಲು ಕೌಂಟ್ ಡೌನ್ ಶುರುವಾಗಿದೆ. ಹೀಗಿರುವಾಗ ಕಿಚ್ಚ ಜುಲೈ 27ಕ್ಕೆ ದುಬೈ ನಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಇನ್ನು ವಿಕ್ರಾಂತ್ ರೋಣ ಸಿನಿಮಾದ ಮೂಲಕ ಎನ್‌ಎಫ್‌ಟಿ ಎನ್ನುವ ವಿಶೇಷ ತಂತ್ರಜ್ಞಾನದ ಪ್ರಯೋಗವಾಗಿದೆ.

ಇದನ್ನೂ ಓದಿ | Vikrant Rona | ಪ್ರೀ ರಿಲೀಸ್​ ಇವೆಂಟ್‌ಗೆ ಸಿದ್ಧವಾದ ವಿಕ್ರಾಂತ್‌ ರೋಣ

ಇವೆಂಟ್‌ನಲ್ಲಿ ನಟಿ ನೀತಾ, ನಟ ನಿರೂಪ್ ಭಂಡಾರಿ, ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು, ಸಂಗೀತ ನಿರ್ದೇಶಕ ಅಜನೀಶ್ ಲೋಕ್ ನಾಥ್, ಕಿಚ್ಚ ಸುದೀಪ್, ಮಗಳು ಸಾನ್ವಿ, ನೃತ್ಯ ಸಂಯೋಜಕರ ಜಾನಿ ಮಾಸ್ಟರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಉಪಸ್ಥಿತರಿದ್ದರು.

ಭಾರತದಾದ್ಯಂತ ವಿಕ್ರಾಂತ್ ರೋಣ ಸುಮಾರು 3500 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದ್ದು ಕಿಚ್ಚನ ಬಳಗ ಜುಲೈ 28ಕ್ಕೆ ಇನ್ನಷ್ಟು ಕಟೌಟ್ಸ್ ನಿಲ್ಲಿಸಲು ತಯಾರಿ ಮಾಡಿಕೊಂಡಿದೆ. ಜುಲೈ 28ರಂದು ದೇಶ ಸೇರಿದಂತೆ ವಿದೇಶಗಳಲ್ಲೂ ‘ವಿಕ್ರಾಂತ್​ ರೋಣ’ ತೆರೆಕಾಣಲಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ವಿಶ್ವಾದ್ಯಂತ 3500 ಸ್ಕ್ರೀನ್‌, ಕರ್ನಾಟಕದಲ್ಲಿ 425ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿಕ್ರಾಂತ್ ರೋಣ ರಿಲೀಸ್‌ ಆಗುತ್ತಿದೆ. ಬಾಲಿವುಡ್‌ನಲ್ಲಿ 900 ಥಿಯೇಟರ್, ವಿದೇಶದಲ್ಲಿ 800 ಸ್ಕ್ರೀನ್ ಹಾಗೂ ಟಾಲಿವುಡ್‌ನಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ | Vikrant Rona | ಎಷ್ಟು ಸ್ಕ್ರೀನಲ್ಲಿ ಪ್ರದರ್ಶನ ಕಾಣಲಿದೆ ವಿಕ್ರಾಂತ್‌ ರೋಣ ? ಎಲ್ಲೆಲ್ಲೂ ಕಿಚ್ಚನ ಕಟೌಟ್‌ದೇ ಹವಾ!

Exit mobile version