ಬೆಂಗಳೂರು : ಬೆಳ್ಳಿ ಪರದೆ ಮೇಲೆ ಇಂದಿನಿಂದ (ಜು.28) ಗುರುವಾರ ರೋಣನ ರುದ್ರ (Vikrant Rona) ನರ್ತನ ಶುರುವಾಗಿದೆ. ಬೆಂಗಳೂರಿನ ಶಂಗರ್ ನಾಗ್ ಚಿತ್ರಮಂದಿರದಲ್ಲಿ ಈಗಾಗಲೇ ಬೆಳಗ್ಗೆ 5.30ಕ್ಕೆ ಫಸ್ಟ್ ಶೋ ಶುರುವಾಗಿದೆ. ವೀರೇಶ್ ಸೇರಿದಂತೆ ಹಲವೆಡೆ ಬೆಳಗ್ಗೆ 6:00ಕ್ಕೆ ಫಸ್ಟ್ ಶೋ ಆರಂಭ ಆಗಿದೆ.
ಬೆಂಗಳೂರಿನ ವೀರೇಶ್ ಚಿತ್ರಮಂದಿರ ಹೌಸ್ ಫುಲ್ ಆಗಿದೆ. ಕಿಚ್ಚನ ಹೆಸರಿಗೆ ಅಭಿಮಾನಿಗಳಿಂದ ಚಿತ್ರಮಂದಿರದ ಮುಂದೆ ಜೈಕಾರ ಹಾಕುತ್ತಿದ್ದಾರೆ. ಕಿಚ್ಚನ ಕಟೌಟ್‌ಗೆ ಹಾಲಿನ ಅಭಿಷೇಕ ಹಾಕಿ , ಸಿಡಿ ಮದ್ದು ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ | Vikrant Rona | ವಿಕ್ರಾಂತ್ ರೋಣ ಅಂದರೆ ವಿಕ್ಟರಿ ರೋಣ : ಇದು ರೋಣನ ಪ್ರೀ ರಿಲೀಸ್ ಇವೆಂಟ್ ಹಬ್ಬ
ಪ್ರಪಂಚದಾದ್ಯಂತ ಪ್ರದರ್ಶನ
ಪ್ರಪಂಚದಾದ್ಯಂತ -2,500 ಸ್ಕ್ರೀನ್ ಹಾಗೂ 9500 ಶೋಗಳು, ಕರ್ನಾಟಕ 400 ಸ್ಕ್ರೀನ್ 2500 ಶೋಗಳು, ಬೆಂಗಳೂರು 110 ಸ್ಕ್ರೀನ್ 1200 ಶೋಗಳು, ಆಂಧ್ರ ತೆಲಂಗಾಣ 350 ಸ್ಕ್ರೀನ್ 1400 ಶೋಗಳು, ತಮಿಳುನಾಡು 250 ಸ್ಕ್ರೀನ್ 1000 ಶೋಗಳು, ಕೇರಳ 110 ಸ್ಕ್ರೀನ್ 600 ಶೋಗಳು, ಉತ್ತರ ಭಾರತ 690 ಸ್ಕ್ರೀನ್ 2800 ಶೋಗಳು, ಉತ್ತರ ಭಾರತ 690 ಸ್ಕ್ರೀನ್ , 2800 ಶೋಗಳು, ವಿದೇಶಗಳಲ್ಲಿ, ಸ್ಕ್ರೀನ್ 600, ಶೋಗಳು 1500. 3ಡಿ ಸ್ಕ್ರೀನ್- 900 ಹಾಗೂ 2ಡಿ ಸ್ಕ್ರೀನ್ 1600.
ವಿಕ್ರಾಂತ್ ರೋಣನ ಸ್ಪೆಷಲ್
ವಿಕ್ರಾಂತ್ ರೋಣ ಸಿನಿಮಾವನ್ನು ದೇಶದ ಯಾವ ಭಾಷೆಯ ಪ್ರೇಕ್ಷಕರು ಬೇಕಾದರೂ ನೋಡಬಹುದಾಗಿದೆ. ಈ ಸಿನಿಮಾವನ್ನು ಸಿನಿಮಾ ಡಬ್ಸ್ ಆಪ್‌ನಲ್ಲಿ ತಮಗೆ ಬೇಕಾದ ಭಾಷೆಯಲ್ಲಿ ನೋಡಬಹುದಾಗಿದೆ. ಮೆಟಾವರ್ಸ್ ಅಥವಾ ಬಹು ಆಯಾಮದ ಡಿಜಿಟಲ್ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನು ಈಗಾಗಲೇ ಚಿತ್ರ ತಂಡ ಹಂಚಿಕೊಂಡಿದೆ.
ಇದನ್ನೂ ಓದಿ | Vikrant Rona | ಎಷ್ಟು ಸ್ಕ್ರೀನಲ್ಲಿ ಪ್ರದರ್ಶನ ಕಾಣಲಿದೆ ವಿಕ್ರಾಂತ್ ರೋಣ ? ಎಲ್ಲೆಲ್ಲೂ ಕಿಚ್ಚನ ಕಟೌಟ್‌ದೇ ಹವಾ!