Site icon Vistara News

Vikrant Rona | ರಾ ರಾ ರಕ್ಕಮ್ಮ ಹುಚ್ಚೆಬ್ಬಿಸಿದ ಬಳಿಕ ಈಗ ಬರ್ತಿದೆ ಹಿತವಾದ ಲಾಲಿ ಹಾಡು

Vikrant Rona

ಬೆಂಗಳೂರು : ವಿಕ್ರಾಂತ್​ ರೋಣ (Vikrant Rona) ಸಿನಿಮಾದ ಮೊದಲ ಹಾಡು ರಾ ರಾ ರಕ್ಕಮ್ಮ ಸೂಪರ್‌ ಹಿಟ್‌ ಆಗಿದೆ. ಈಗ ಎಲ್ಲ ಕಡೆ ಅದರಲ್ಲೇ ಗುಂಗು. ಅಭಿಮಾನಿಗಳು ರೀಲ್ಸ್‌ ಮಾಡಿ ಖುಷಿಪಟ್ಟರೆ, ಕೆಲವರು ಮನಸಲ್ಲೇ ಹಾಡಿ ಕುಣಿಯುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರಕ್ಕಮ್ಮ.. ಇನ್ನೂ ಕುಣಿಯುತ್ತಿರುವಾಗಲೇ ಇನ್ನೊಂದು ಹಿತವಾದ ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ರೆಡಿಯಾಗಿದೆ. ಇನ್‌ಸ್ಟಾ ಗ್ರಾಂ ಪೋಸ್ಟ್‌ ಮೂಲಕ ಸಾಹಿತ್ಯವನ್ನೂ ಹಂಚಿಕೊಂಡಿದೆ.

ಕನ್ನಡದಲ್ಲಿ ʻರಾಜ್ ಕುಮಾರಿ ಹಾಡುʼ ಶನಿವಾರ (ಜು. 2) ಸಂಜೆ 5:02 ಗಂಟೆಗೆ ಬಿಡುಗಡೆಗೊಳ್ಳಲಿದೆ. ಮಲಯಾಳಂನಲ್ಲಿ (ಜು.3) ತೆಲುಗಿನಲ್ಲಿ (ಜು.4), ಹಿಂದಿಯಲ್ಲಿ (ಜು. 5) ಹಾಗೂ ತಮಿಳಿನಲ್ಲಿ (ಜು. 6) ಸಂಜೆ 5:02ಕ್ಕೆ ಬಿಡುಗಡೆಗೊಳ್ಳಲಿದೆ. ಈ ಹಾಡಿನ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದು, ‘ನನ್ನ ಇಷ್ಟವಾದ ಹಾಡು’ ಎಂದು ಬರೆದುಕೊಂಡಿದ್ದಾರೆ. ಈ ಕಾರಣದಿಂದಲೂ ಹಾಡಿನ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.

ಇದನ್ನೂ ಓದಿ | Vikrant Rona Trailer | ಕ್ಯೂರಿಯಾಸಿಟಿ ಕೆರಳಿಸಿದ ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ

ಡಿಕೆಡಿಯಲ್ಲಿ ಕಿಚ್ಚನ ಎಂಟ್ರಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6ರ ವೇದಿಕೆಯಲ್ಲಿ ಶಿವಣ್ಣ ಹಾಗೂ ಕಿಚ್ಚ ಸುದೀಪ್‌ ಒಂದಾಗಲಿದ್ದಾರೆ. ಡಿಕೆಡಿ ಸೀಸನ್ 6ಗೆ ಶಿವಣ್ಣ ಜಡ್ಜ್ ಸ್ಥಾನದಲ್ಲಿ ಕೂತಿದ್ದಾರೆ. ಸುದೀಪ್ ಕೂಡ ಬಿಗ್ ಬಾಸ್ ರಿಯಾಲಿಟಿ ಶೋಗೆ ಅವರೇ ರಾಯಭಾರಿ.

ಕಿಚ್ಚ ಸುದೀಪ್ ಅವರು ಡಿಕೆಡಿ-6 ವೇದಿಕೆ ಮೇಲೆ ಭಾಗಿಯಾಗಿ ʼವಿಕ್ರಾಂತ್ ರೋಣʼ ಸಿನಿಮಾ ಪ್ರಚಾರ ಮಾಡಲಿದ್ದಾರೆ. ಡಿಕೆಡಿ ಸ್ಟೇಜ್‌ನಲ್ಲಿ ಇದೀಗ ಮನೋರಂಜನೆಗೆ ಕೊರತೆ ಇಲ್ಲ. ಶಿವಣ್ಣ ಹಾಗೂ ಸುದೀಪ್ ಜತೆಯಾಗಿ ಸ್ಟೆಪ್ಸ್‌ ಹಾಕುವುದನ್ನು ಅಭಿಮಾನಿಗಳು ಕಣ್ತುಂಬಿಸಿಕೊಳ್ಳಲಿದ್ದಾರೆ. ಈ ಎಪಿಸೋಡ್‌ನ ಶೂಟಿಂಗ್ ಈಗಾಗಲೇ ಮುಗಿದಿದ್ದು, ಈ ವಾರಂತ್ಯಕ್ಕೆ ಪ್ರಸಾರವಾಗಲಿದೆ.

ಇದನ್ನೂ ಓದಿ | Vikrant Rona Movie | ವಿಕ್ರಾಂತ್‌ ರೋಣ ಟ್ರೈಲರ್‌ ಕೌಂಟ್ ಡೌನ್‌ ಶುರು

Exit mobile version