ಬೆಂಗಳೂರು : ʼನೆತ್ತರ ಹನಿ ಮಣ್ಣಿನಲ್ಲಿ ಬಿದ್ದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ, ರಕ್ತಕ್ಕೆ ರಕ್ತʼ ಎಂದು ಬುಧವಾರವಷ್ಟೆ ಕುತೂಹಲ ಕೆರಳಿಸಿದ್ದ ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ಲಾಂಚ್ ಆಗಿದೆ. ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ವರ್ಲ್ಡ್ ವೈಡ್ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ (Vikrant Rona Movie) ಟ್ರೈಲರ್ ನೋಡಿ ಅಭಿಮಾನಿಗಳು ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಅರ್ಧ ಗಂಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ ಸುದೀಪ್ ಅವರ ಡೈಲಾಗ್‌ಗೆ ಜನ ಸಖತ್ ಕ್ಯೂರಿಯಸ್ ಆಗಿದ್ದಾರೆ. ಅರ್ಥ ಏನಿರಬಹುದು ಎಂದು ಕಮೆಂಟ್ ಮೂಲಕ ಮಾತನಾಡುತ್ತಿದ್ದಾರೆ. ಈ ಸಾಲು ರಂಗಿತರಂಗ ಸಿನಿಮಾದ್ದು.
ಇದನ್ನೂ ಓದಿ | Vikrant Rona Movie | ವಿಕ್ರಾಂತ್ ರೋಣ ಟ್ರೈಲರ್ ಕೌಂಡ್ ಡೌನ್ ಶುರು
ಟ್ರೈಲರ್ ನೋಡುವಾಗಲೇ ಸಸ್ಪೆನ್ಸ್, ಥ್ರಿಲರ್ ಮೂಲಕ , ಭಯದ ಕಥಾ ಹಂದರವನ್ನು ಹೊಂದಿರುವಂತೆ ಇದೆ. ಟ್ರೈಲರ್ ಆರಂಭದಿಂದಲೂ ಕೊನೆಯವರೆಗೆ ಭಯವನ್ನು ಸೃಷ್ಟಿ ಮಾಡುವ ವಿಕ್ರಾಂತ್ ರೋಣ, ಜನರನ್ನು ಮೋಡಿ ಮಾಡುವಂತಿದೆ. ಈಗಾಗಲೇ ಪಂಚ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದೆ.
ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಡಿಜಿಟಲ್ ಅಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ರೋಣನ ಟೀಂ ಕೊಚ್ಚಿ, ಹೈದರಾಬಾದ್, ಚೆನ್ನೈ ಸುತ್ತಲಿದ್ದಾರೆ. ಜೂನ್ 24ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಸುದ್ಧಿಗೋಷ್ಠಿ ನಡೆಸಲಿದ್ದಾರೆ.ಜೂನ್ 25ರಂದು ಹೈದರಾಬಾದ್ ನಲ್ಲಿ ಪ್ರಚಾರಕ್ಕೆ ಇಳಿಯಲಿದೆ ವಿಕ್ರಾಂತ್ ತಂಡ.
ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ ಡೈಲಾಗ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಅನೂಪ್ ಭಂಡಾರಿ ಇದೇ ಸಾಳನ್ನು ರಂಗಿತರಂಗ ಸಿನಿಮಾದಲ್ಲಿ ಬಳಕೆ ಮಾಡಿದ್ದರು. ಡೆನ್ನಾನ ಡೆನ್ನಾನ ಹಾಡಿನ ಸಾಹಿತ್ಯದಲ್ಲಿ ಕೋರಸ್ ಆಗಿ ಬಳಸಿಕೊಂಡಿದ್ದರು. ಇದೀಗ ವಿಕ್ರಾಂತ್ ರೋಣ ಟ್ರೈಲರ್ ಮೂಲಕ ಮತ್ತೆ ತುಳು ನಾಡ ಸಂಸ್ಕೃತಿಯನ್ನು ಮೆಲುಕು ಹಾಕಿದ್ದಾರೆ.
14 ಭಾಷೆಗಳಲ್ಲಿ 3ಡಿ ರೂಪದಲ್ಲಿ ರಿಲೀಸ್
ಕಿಚ್ಚ ಸುದೀಪ್ ನಟಿಸಿರುವ ಪ್ಯಾನ್ ವರ್ಲ್ಡ್ ಸಿನಿಮಾವನ್ನು ಅನೂಪ್ ಬಂಢಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಚಿತ್ರದ ನಿರ್ಮಾಣ ಮಾಡಿದ್ದಾರೆ. ಕನ್ನಡ ಹಿಂದಿ, ತೆಲುಗು, ತಮಿಳು ಹಾಗು ಇಂಗ್ಲೀಷ್ ಭಾಷೆಗೆ ಕಿಚ್ಚ ಸುದೀಪ್ ಅವರೇ ವಾಯ್ಸ್ ಡಬ್ ಮಾಡಿರುವುದು ಇನ್ನೂ ವಿಶೇಷ ವಿಕ್ರಾಂತ್ ರೋಣ 14 ಭಾಷೆಗಳಲ್ಲಿ 3ಡಿ ರೂಪದಲ್ಲಿ ಬಿಡುಗಡೆಯಾಗಲಿದೆ. ಜುಲೈ 28ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಟ್ರೈಲರ್ ಇವೆಂಟ್ ಲಾಂಚ್ ಇವೆಂಟ್‌ನಲ್ಲಿ ಶಿವಣ್ಣ, ರವಿಚಂದ್ರನ್ ಮುಖ್ಯ ಅತಿಥಿಗಳು ಭಾಗಿಯಾಗಿದ್ದರು. ಜಾಕ್ವೆಲಿನ್ ಫೆರ್ನಾಂಡಿಸ್, ಸುದೀಪ್ ಪತ್ನಿ ಹಾಗೂ ರಾಜ್ ಬಿ ಶೆಟ್ಟಿ, ಸೃಜನ್ ಲೊಕೇಶ್, ಲಂಕೇಶ್, ರಕ್ಷಿತ್ ಶೆಟ್ಟಿ, ಅರ್ಜುನ್ ಜನ್ಯ, ರಮೇಶ್ ಅರವಿಂದ್, ಡಾಲಿ ಧನಂಜಯ್ ಮುಂತಾದ ನಟ ನಟಿಯರು ಪಾಲೊಂಡಿದ್ದು ವಿಶೇಷವಾಗಿತ್ತು.
ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಚಿತ್ರದಲ್ಲಿ ಗಡಂಗ್ ರಕ್ಕಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣವಿದ್ದರೆ, ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಇದನ್ನೂ ಓದಿ | Vikrant Rona Movie | ರಕ್ತಕ್ಕೆ ರಕ್ತ, ಕ್ರಾಂತಿಯ ಬೆಂಕಿ : Trailer ಇವೆಂಟ್‌ನಲ್ಲಿ ನಿರ್ದೇಶಕರ ದಂಡು