Site icon Vistara News

Vinod Raj: ವಿನೋದ್ ರಾಜ್‌ಗೆ ಮದುವೆಯಾಗಿದೆಯಾ? ಪತ್ನಿ, ಮಗನ ಫೋಟೊ ವೈರಲ್‌, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ!

Vinod Raj's wife, son's photo went viral, the director revealed explosive information

ಬೆಂಗಳೂರು: ನಟಿ ಲೀಲಾವತಿ ಅವರ ಪುತ್ರ, ಡ್ಯಾನ್ಸ್‌ ರಾಜ ಡ್ಯಾನ್ಸ್‌ ಮೊದಲಾದ ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ವಿನೋದ್‌ ರಾಜ್‌ (Vinod Raj) ಈಗ ಕೃಷಿ ಮಾಡಿಕೊಂಡು ಆರಾಮವಾಗಿದ್ದಾರೆ. ಲೀಲಾವತಿ ಅವರು ಸ್ವಲ್ಪಮಟ್ಟಿಗಿನ ಆರೋಗ್ಯ ಕೆಟ್ಟು ಮನೆಯಲ್ಲೇ ಇದ್ದಾರೆ.

ವಿನೋದ್‌ ರಾಜ್‌ ಮತ್ತು ಲೀಲಾವತಿ ಅವರಿಬ್ಬರೇ ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಈ ನಡುವೆ, ವಿನೋದ್‌ ರಾಜ್‌ ಅವರೊಂದು ಮದುವೆಯಾಗಿದ್ದರೆ ಇಬ್ಬರಿಗೂ ಆಧಾರವಾಗಬಹುದಿತ್ತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇಷ್ಟರ ನಡುವೆಯೇ ಒಂದು ಸ್ಫೋಟಕ ಸುದ್ದಿ ಹೊರಬಂದಿದೆ. ಅದೇನೆಂದರೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಹೇಳುತ್ತಿದೆ. ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲೀಲಾವತಿ ಅವರ ಆರೋಗ್ಯ ಹದಗೆಡುತ್ತಿದ್ದು, ಮಗ ವಿನೋದ್‌ ರಾಜ್‌ ಅವರ ಆರೈಕೆಯಲ್ಲಿ ಇದ್ದಾರೆ. ಇದುವರೆಗೂ ವಿನೋದ್‌ ರಾಜ್‌ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೀಗ ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎನ್ನುವುದನ್ನು ಮತ್ತು ವಿನೋದ್‌ ರಾಜ್‌ ಅವರು ಮದುವೆಯಾಗಿದ್ದಾರೆ ಎಂದೆಲ್ಲ ಹೇಳಿದ್ದಾರೆ. ವಿನೋದ್‌ ರಾಜ್‌ ಅವರದೇ ಮನೆಯಲ್ಲಿ ತೆಗೆದಿರುವ ಫೋಟೊಗಳನ್ನು ಅವರು ಹಂಚಿಕೊಂಡಿದ್ದು ಅದು ವೈರಲ್‌ ಆಗಿದೆ.

ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಪೋಸ್ಟ್‌ನಲ್ಲಿ ಏನಿದೆ?

ಸ್ಫೋಟಕ ಮಾಹಿತಿ

ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ ಅಂತವರಿಗೆ ಇದು ಸತ್ಯ ಸಾಕ್ಷಿ!

ಮೊದಲನೆಯ ವಿಷಯ: ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು. ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ!!

ಎರಡನೆಯ ವಿಷಯ: ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೊದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ!!!

ಈ ಫ್ಯಾಮಿಲಿ ಫೋಟೊ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುತ್ತಿದ್ದರು ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗಪಡಿಸಿದ್ದೇನೆ.

ಇದನ್ನೂ ಓದಿ: Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸ್ಯಾಂಡಲ್‌ವುಡ್‌ ಹಿರಿಯ ತಾರೆಯರು

ಈ ಬಗ್ಗೆ ವಿನೋದ್‌ ರಾಜ್‌ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ಲೀಲಾವತಿಯವರ ಆರೈಕೆಯಲ್ಲಿರುವ ವಿನೋದ್‌, ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ನಟಿ ಲೀಲಾವತಿ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅನೇಕ ಸಿನಿಮಾಗಳನ್ನು ನೀಡಿದ್ದಾರೆ.

Exit mobile version