Site icon Vistara News

Viral News: ಬಹಳ ವಿಶೇಷವಾಗಿತ್ತು ಕರೀನಾ ಮಗನ ಬರ್ತ್ ಡೇ ಕೇಕ್; ಇಲ್ಲಿದೆ ನೋಡಿ ವಿಶೇಷ ಫೋಟೋ

#image_title

ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಎರಡನೇ ಮಗ ಜೆಹ್ ಅಲಿ ಖಾನ್ ಅವರಿಗೆ ಫೆ.21ಕ್ಕೆ ಎರಡು ವರ್ಷಗಳು ತುಂಬಿವೆ. ದಂಪತಿ ಮಗನ ಬರ್ತ್ ಡೇ ಸಲುವಾಗಿ ವಿಶೇಷ ಫನ್ ಪಾರ್ಟಿಯನ್ನೂ ನಡೆಸಿದ್ದಾರೆ. ಜೇಹ್ ಅವರ ಬರ್ತ್ ಡೇ ಕೇಕ್ ಕೂಡ ವಿಶಿಷ್ಟವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆದ ಆ ಕೇಕ್ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Viral Video: ಇಂಗ್ಲಿಷ್ ಅಲ್ಲಿ ಮಾತನಾಡಿದ ರೈತನನ್ನು ತರಾಟೆಗೆ ತೆಗೆದುಕೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಜೇಹ್ ಅವರಿಗೆಂದು ವಿಶೇಷವಾಗಿ ಎರಡು ಹಂತದಲ್ಲಿರುವ ಕೇಕ್ ಅನ್ನು ಮಾಡಿಸಲಾಗಿತ್ತು. ಸಾರಿಗೆ ವ್ಯವಸ್ಥೆಯ ಥೀಮ್ ಅಲ್ಲಿ ಕೇಕ್ ತಯಾರಿಸಲಾಗಿತ್ತು. ತಿಳಿ ನೀಲಿ ಬಣ್ಣದ ಕೇಕ್ ಮೇಲೆ ಟ್ರಾಫಿಕ್ ಚಿಹ್ನೆಗಳು, ವಾಹನಗಳು ಇರುವುದನ್ನು ನೀವು ಫೋಟೋದಲ್ಲಿ ಕಾಣಬಹುದು. ಕೇಕ್ ಮೇಲೆ ‘ನಮ್ಮ ಪ್ರೀತಿಯ ಜೇಹ್ ಬಾಬಾಗೆ ಹ್ಯಾಪಿ ಬರ್ತ್ ಡೇ’ ಎಂದು ಬರೆಸಲಾಗಿತ್ತು. ಜೇಹ್ ಕೂಡ ತಿಳಿ ನೀಲಿ ಬಣ್ಣದ ಟಿ ಶರ್ಟ್ ಧರಿಸಿ ಕೇಕ್ ಕತ್ತರಿಸಿದ್ದಾರೆ. ಕರೀನಾ ಅವರು ಜೇಹ್ ಅನ್ನು ಎತ್ತಿಕೊಂಡು ಕೇಕ್ ಅಲ್ಲಿದ್ದ ಕ್ಯಾಂಡಲ್ ಆರಿಸುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ.


ಜೇಹ್ ಅವರ ಬರ್ತ್ ಡೇ ಫೋಟೋವನ್ನು ಕರೀನಾ ಆಗಲಿ ಅಥವಾ ಸೈಫ್ ಆಗಲಿ ಎಲ್ಲಿಯೂ ಹಂಚಿಕೊಂಡಿಲ್ಲ. ಆದರೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಸಬಾ ಅಲಿ ಖಾನ್ ಅವರು ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯಾಗಿ ಹಂಚಿಕೊಂಡಿದ್ದಾರೆ. ಹಾಗೆಯೇ ಅದಕ್ಕೆ “Jeh Baba turns 2” ಎಂದೂ ಬರೆದುಕೊಂಡಿದ್ದಾರೆ.

Exit mobile version