Site icon Vistara News

Viral Video: ಹಿರಿಯ ನಟಿ ರೇಖಾರನ್ನು ನೋಡುತ್ತಿದ್ದಂತೆಯೇ ಓಡಿ ಹೋಗಿ ತಬ್ಬಿಕೊಂಡ ಅಲಿಯಾ ಭಟ್

#image_title

ಮುಂಬೈ: ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯ ಪ್ರದಾನ ಕಾರ್ಯಕ್ರಮ ಸೋಮವಾರ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾರತದ ಎಲ್ಲ ಚಿತ್ರರಂಗದ ಗಣ್ಯರು ಹಾಜರಿದ್ದರು. ಈ ಕಾರ್ಯಕ್ರಮಕ್ಕೆಂದು ಬಂದ ಬಾಲಿವುಡ್ ನಟಿ ಅಲಿಯಾ ಭಟ್ ಹಿರಿಯ ನಟಿ ರೇಖಾ ಅವರನ್ನು ಕಂಡೊಡನೆ ಓಡಿ ಹೋಗಿ ಅವರನ್ನು ತಬ್ಬಿಕೊಂಡಿದ್ದು, ಆ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral Video: ಕಾಶ್ಮೀರದ ಗುಲ್ಮಾರ್ಗದ ಹಿಮದಲ್ಲಿ ರಾಹುಲ್-ಪ್ರಿಯಾಂಕ ಸ್ನೋಮೊಬೈಲ್ ಸವಾರಿ!
ಬಿಳಿ ಬಣ್ಣದ ಎಂಬ್ರಾಯಿಡರಿ ಸೀರೆಯಲ್ಲಿ ಅಲಿಯಾ ಕಂಗೊಳಿಸುತ್ತಿದ್ದರು. ಇನ್ನು ರೇಖಾ ಅವರು ಎಂದಿನಂತೆ ಬೆಳ್ಳಿ ಮತ್ತು ಚಿನ್ನದ ಬಣ್ಣದ ಸೀರೆ ಉಟ್ಟು, ತಲೆಗೆ ಮಲ್ಲಿಗೆ ಹೂವು ಮುಡಿದು, ಕಡುಗೆಂಪು ಬಣ್ಣದ ಲಿಪ್‌ಸ್ಟಿಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲಿಯಾ ಕಾರನ್ನು ಇಳಿಯುತ್ತಿದ್ದಂತೆ ಅಲ್ಲಿ ರೇಖಾ ಇರುವುದನ್ನು ಕಂಡಿದ್ದಾರೆ. ತಕ್ಷಣವೇ ಅವರ ಬಳಿ ತೆರಳಿ, ತಬ್ಬಿಕೊಂಡಿದ್ದಾರೆ. ನಂತರ ಇಬ್ಬರೂ ಒಟ್ಟಾಗಿ ಮಾಧ್ಯಮಗಳಿಗೆ ಫೋಸ್ ಕೊಟ್ಟು, ಕಾರ್ಯಕ್ರಮದೊಳಗೆ ನಡೆದಿದ್ದಾರೆ.


ಕಾರ್ಯಕ್ರಮದಲ್ಲಿ ಅಲಿಯಾ ಅವರಿಗೆ ‘ಗಂಗೂಭಾಯಿ ಕಾಥಿಯಾವಾಡಿ’ ಸಿನಿಮಾದ ನಟನೆಗೋಸ್ಕರ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಹಾಗೆಯೇ ಅವರ ಪತಿ ರಣಬೀರ್ ಕಪೂರ್ ಅವರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದ ನಟನೆಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡದ ನಟ ರಿಷಭ್ ಶೆಟ್ಟಿ ಕೂಡ ಕಾಂತಾರ ಸಿನಿಮಾದಿಂದಾಗಿ ‘ಅತ್ಯುತ್ತಮ ಭರವಸೆಯ ನಟ’ ಪ್ರಶಸ್ತಿ ಸ್ವೀಕರಿಸಿದ್ದಾರೆ.

Exit mobile version