Site icon Vistara News

Viral Video : ಜಾಲಿ ರೈಡ್‌ ಮೂಡ್‌ನಲ್ಲಿ ಜೂ. ಎನ್‌ಟಿಆರ್‌, ರಾಮ್‌ಚರಣ್‌! ವಿಡಿಯೊ ವೈರಲ್‌

#image_title

ಹೈದರಾಬಾದ್‌: ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾ ಹಲವು ದಾಖಲೆಗಳನ್ನು ಸೃಷ್ಟಿಸಿದ ಸಿನಿಮಾ. ಅದರಲ್ಲಿ ಜೂ. ಎನ್‌ ಟಿ ಆರ್‌ ಮತ್ತು ರಾಮ್‌ಚರಣ್‌ ಜೋಡಿಯ ಸ್ನೇಹಕ್ಕೆ ಮನಸೋಲದವರಿಲ್ಲ. ಆದರೆ ಆಫ್‌ಸ್ಕ್ರೀನ್‌ನಲ್ಲಿ ಈ ಜೋಡಿ ಸ್ನೇಹ ಸರಿಯಿಲ್ಲ ಎನ್ನುವ ಅನೇಕ ವರದಿಗಳಿವೆ. ಇದೀಗ ಈ ವರದಿಗಳು ಸುಳ್ಳು ಎಂದು ತೋರಿಸುವಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral Video) ಆಗುತ್ತಿದೆ.

ಜೂ. ಎನ್‌ಟಿಆರ್‌ ಕ್ಯಾರವ್ಯಾನ್‌ನಲ್ಲಿ ಸಿದ್ಧವಾಗಿ ನಿಂತಿರುತ್ತಾರೆ. ಅದೇ ವೇಳೆ ರಾಮ್‌ಚರಣ್‌ ಬಿಳಿ ಬಣ್ಣದ ಸ್ಕೂಟಿಯಲ್ಲಿ ಕ್ಯಾರವಾನ್‌ ಬಳಿ ಬರುತ್ತಾರೆ. ಜೂ. ಎನ್‌ಟಿಆರ್‌ ಅವರನ್ನು ನೋಡಿದೊಡನೆ ಸ್ಕೂಟಿಯ ಚಾಲಕನ ಸ್ಥಾನವನ್ನು ಬಿಟ್ಟು ತಾವು ಹಿಂದೆ ಸರಿಯುತ್ತಾರೆ. ಜೂ. ಎನ್‌ಟಿಆರ್‌ ಖುಷಿಯಿಂದ ಚಾಲಕನ ಸೀಟಿನಲ್ಲಿ ಕೂರುತ್ತಾರೆ. ಇಬ್ಬರೂ ಜೊತೆಯಾಗಿ ಹೋಗುತ್ತಾರೆ.

ಇದನ್ನೂ ಓದಿ: Pushpa 2 Movie : ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ಸಾಯ್ತಾರಾ? ಶವದ ಫೋಟೊ ವೈರಲ್‌
ಈ ವಿಡಿಯೊವನ್ನು ಕಳೆದ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ ಒಂದೇ ವಾರದಲ್ಲಿ ಭಾರೀ ವೈರಲ್‌ ಆಗಿದೆ. ಅನೇಕರು ವಿಡಿಯೊಗೆ ಲೈಕ್‌ ಮಾಡಲಾರಂಭಿಸಿದ್ದು, ಶೇರ್‌ ಮಾಡಿದ್ದಾರೆ. “ಸುಮ್ಮನೆ ಈ ಜೋಡಿ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.
ಹಾಗೆಯೇ ಕೆಲವರು ಹೆಲ್ಮೆಟ್‌ ವಿಚಾರದಲ್ಲಿ ಈ ತಾರಾ ಜೋಡಿಯನ್ನು ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಹೆಲ್ಮೆಟ್‌ ಇಲ್ಲದೆಯೇ ಈ ರೀತಿ ಗಾಡಿ ಓಡಿಸುತ್ತಿದ್ದೀರಲ್ಲಾ? ಸೆಲೆಬ್ರಿಟಿಗಳಾಗಿ ಅಭಿಮಾನಿಗಳಿಗೆ ನೀವು ಇದನ್ನೇ ಹೇಳಿಕೊಡುವುದೇ ಎಂದು ಪ್ರಶ್ನಿಸಲಾರಂಭಿಸಿದ್ದಾರೆ.


ಅಂದ ಹಾಗೆ ಈ ರೀತಿಯಲ್ಲಿ ಹೆಲ್ಮೆಟ್‌ ಹಾಕದೆ ಗಾಡಿ ಓಡಿಸುವ ವಿಚಾರದಲ್ಲಿ ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಸುದ್ದಿಯಲ್ಲಿದ್ದಾರೆ. ಮೊದಲಿಗೆ ಬಾಲಿವುಡ್‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಅವರು ಹೆಲ್ಮೆಟ್‌ ಹಾಕದೆ ಬೈಕ್‌ ಸವಾರಿ ಮಾಡಿ ಮುಂಬೈ ಪೊಲೀಸರಿಂದ ಎಚ್ಚರಿಕೆಯನ್ನೂ ಪಡೆದುಕೊಂಡಿದ್ದರು. ಹಾಗೆಯೇ ನಟಿ ಅನುಷ್ಕಾ ಶರ್ಮಾ ಕೂಡ ಇದೇ ವಿಚಾರದಲ್ಲಿ ದಂಡ ಹಾಕಿಸಿಕೊಂಡಿದ್ದರು.

Exit mobile version