Site icon Vistara News

Viral Video : ರಾಕಿ ಸಾವಂತ್‌ ಜತೆ ಶೀಲಾ ಕೀ ಜವಾನಿ ಎನ್ನುತ್ತಾ ಹೆಜ್ಜೆ ಹಾಕಿದ ವಿಕ್ಕಿ! ವಿಡಿಯೊ ವೈರಲ್‌

#image_title

ಮುಂಬೈ: ನಟಿ ರಾಕಿ ಸಾವಂತ್‌ ಸದಾ ಸುದ್ದಿಯಲ್ಲಿರುವಂತವರು. ಸಾಮಾಜಿಕ ಜಾಲತಾಣಗಳಲ್ಲಂತೂ ನಟಿಯದ್ದೇ ವಿಡಿಯೊಗಳು ತುಂಬಿ ತುಳುಕುತ್ತಿರುತ್ತವೆ. ಇತ್ತೀಚೆಗೆ ಅಬುದಾಭಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ನಟಿ ಅಲ್ಲಿ ಕತ್ರಿನಾ ಕೈಫ್‌ ಪತಿ, ನಟ ವಿಕ್ಕಿ ಕೌಶಲ್‌ ಜತೆ ಹೆಜ್ಜೆ ಹಾಕಿದ್ದಾರೆ. ಅವರಿಬ್ಬರ ನೃತ್ಯದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ಸದ್ದು (Viral Video) ಮಾಡುತ್ತಿವೆ.

ರಾಕಿ ಸಾವಂತ್‌, ವಿಕ್ಕಿ ಕೌಶಲ್‌ ಮತ್ತು ನಟಿ ಸಾರಾ ಅಲಿಖಾನ್‌ ಮಾತನಾಡುತ್ತಾ ನಿಂತಿರುತ್ತಾರೆ. ಆಗ ರಾಕಿ ನೃತ್ಯ ಮಾಡೋಣ ಎಂದು ಹೇಳಿ, ಚಿಕ್ಲಿ ಚಮೇಲಿ ಹಾಡನ್ನು ಹಾಡುತ್ತಾ ನೃತ್ಯ ಮಾಡಲು ಆರಂಭಿಸುತ್ತಾರೆ. ಆದರೆ ಅದು ಬೇಡ ಎನ್ನುವ ನಟ ವಿಕ್ಕಿ, ಶೀಲಾ ಕೀ ಜವಾನಿ ಹಾಡಿಗೆ ನೃತ್ಯ ಮಾಡೋಣ ಎನ್ನುತ್ತಾರೆ. ಅಷ್ಟರಲ್ಲೇ ಅಲ್ಲಿ ಶೀಲಾ ಕೀ ಜವಾನಿ ಹಾಡನ್ನು ಹಾಕಲಾಗುತ್ತದೆ. ಮೂರೂ ಸೆಲೆಬ್ರಿಟಿಗಳು ಹಾಡಿಗೆ ನೃತ್ಯ ಮಾಡಲಾರಂಭಿಸುತ್ತಾರೆ. ವಿಕ್ಕಿ ಹಾಡಿಗೆ ಸಿಗ್ನೇಚರ್‌ ಸ್ಟೆಪ್‌ ಅನ್ನೂ ಹಾಕುತ್ತಾರೆ.

ಇದನ್ನೂ ಓದಿ: Rakhi Sawant: ನನ್ನ ಬೆತ್ತಲೆ ವಿಡಿಯೊಗಳನ್ನು ಮಾರಾಟ ಮಾಡಿದ್ದಾನೆ: ಆದಿಲ್ ವಿರುದ್ಧ ರಾಕಿ ಸಾವಂತ್‌ ಹೊಸ ಆರೋಪ
ನೃತ್ಯ ಮಾಡುತ್ತಾ ರಾಕಿ ತನ್ನ ಹಿಂದೆ ಹಿಂದೆ ಬರುತ್ತಾರೆ. ಆಗ ಅಲ್ಲೇ ಇದ್ದ ವಿಕ್ಕಿಗೆ ಡಿಕ್ಕಿ ಹೊಡೆಯುತ್ತಾರೆ. ತಕ್ಷಣ ವಿಕ್ಕಿ ಬ್ಯಾಲೆನ್ಸ್‌ ತಪ್ಪುತ್ತಾರೆ. ಆಗ ರಾಕಿ ಹಿಂದೆ ತಿರುಗಿ ನೋಡುತ್ತಾರೆ. ಈ ದೃಶ್ಯವನ್ನು ಕಂಡ ಸಾರಾ ನಗಲಾರಂಭಿಸುತ್ತಾರೆ.


ಈ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಾವಿರಾರು ಮಂದಿ ವಿಡಿಯೊ ನೋಡಿದ್ದು, ಲೈಕ್‌, ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. “ರಾಕಿ ನೃತ್ಯದ ಮುಂದೆ ಬೇರಾರೂ ಇಲ್ಲ”, “ರಾಕಿ ನೃತ್ಯದಲ್ಲೇ ಮುಳುಗಿಹೋಗಿದ್ದಾರೆ” ಎನ್ನುವಂತಹ ಹಲವಾರು ಕಾಮೆಂಟ್‌ಗಳು ರಾಕಿ ಸಾವಂತ್‌ ಬಗ್ಗೆ ಬಂದಿವೆ. ಹಾಗೆಯೇ, “ವಿಕ್ಕಿ ನೃತ್ಯ ಮಾಡಲು ಆರಂಭಿಸಿದರೆ ಬೇರೇನನ್ನೂ ನೋಡುವುದೇ ಇಲ್ಲ” ಎನ್ನುವ ಕಾಮೆಂಟ್‌ಗಳು ಸಹ ಬಂದಿವೆ.

Exit mobile version