ಮುಂಬೈ: ಹಿಂದಿ ಬಿಗ್ಬಾಸ್ ಕ್ವೀನ್ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಮಿಂಚುತ್ತಿರುವಂತಹ ನಟಿ. ತಮ್ಮದೇ ವಿನ್ಯಾಸದ ವಿಚಿತ್ರ ಉಡುಗೆಗಳ ಮೂಲಕವೇ ಪ್ರಸಿದ್ಧರಾಗಿರುವ ಈ ನಟಿ ಇತ್ತೀಚೆಗೆ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ನಟ ಅರ್ಜುನ್ ಕಪೂರ್ ಅವರೊಂದಿಗೆ ಉರ್ಫಿ ಫೋಟೋಕ್ಕೆ ಪೋಸ್ ಕೊಟ್ಟಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ಕಿಚಡಿಗೆ ಒಗ್ಗರಣೆ ಹಾಕುವುದು ಹೇಗೆಂದು ಬಿಲ್ ಗೇಟ್ಸ್ಗೆ ಕಲಿಸಿಕೊಟ್ಟ ಕೇಂದ್ರ ಸಚಿವೆ ಸ್ಮೃತಿ ಇರಾನಿ!
ಬಿಳಿ ಬಣ್ಣದ ಉಡುಗೆ ತೊಟ್ಟಿದ್ದ ಉರ್ಫಿ ಅದಕ್ಕೆ ಮ್ಯಾಚ್ ಆಗುವಂತೆ ಹೇರ್ಸ್ಟೈಲ್ ಮಾಡಿಕೊಂಡಿದ್ದರು. ಅತ್ತ ಅರ್ಜುನ್ ಕಪೂರ್ ಬಿಳಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಕೋಟ್ ಧರಿಸಿ ಮಿಂಚುತ್ತಿದ್ದರು. ಇಬ್ಬರೂ ಒಟ್ಟಿಗಿದ್ದಾಗ ಬಾಲಿವುಡ್ ವರದಿಗಾರರು ಅವರ ಬಳಿ ಒಟ್ಟಿಗೆ ಫೋಟೋಕ್ಕೆ ಪೋಸ್ ಕೊಡಿ ಎಂದು ಕೇಳಿಕೊಂಡಿದ್ದಾರೆ. ಆಗ ಉರ್ಫಿ ಅರ್ಜುನ್ ಬಳಿ, “ಡು ಯು ಮೈಂಡ್?” ಎಂದು ಕೇಳಿದ್ದಾರೆ. ಅದಕ್ಕೆ ಅರ್ಜುನ್ “ನಾಟ್ ಎಟ್ ಆಲ್” ಎಂದು ಹೇಳಿದ್ದು, ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ.
ಈ ವಿಡಿಯೊವನ್ನು ಮಾಧ್ಯಮದವರು ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು, “ಉರ್ಫಿ ಮತ್ತು ಅರ್ಜುನ್ ಜೋಡಿ ಚೆನ್ನಾಗಿ ಕಾಣುತ್ತದೆ” ಎಂದು ಕಾಮೆಂಟ್ಗಳನ್ನು ಮಾಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಉರ್ಫಿ ಮತ್ತು ಅರ್ಜುನ್ ಅವರ ಉಡುಗೆಯ ಬಗ್ಗೆಯೂ ಹಲವಾರು ರೀತಿಯ ಕಾಮೆಂಟ್ಗಳು ಬಂದಿವೆ.