Site icon Vistara News

Vistara Interview | ಕಂಟೆಂಟ್‌ ಸಿನಿಮಾಗಳಿಗೆ ನನ್ನ ಆದ್ಯತೆ: ಏಕ್‌ ಲವ್‌ ಯಾ ಖ್ಯಾತಿಯ ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ

ಬೆಂಗಳೂರು: ‘ಜೋಗಿʼ ಪ್ರೇಮ್‌ ನಿರ್ದೇಶನದ ʼಏಕ್‌ ಲವ್‌ ಯಾʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ನೀಡಿದವರು ನಟಿ ರೀಷ್ಮಾ ನಾಣಯ್ಯ (Reeshma Nanaiah). ‘ಏಕ್ ಲವ್ ಯಾ’ ತೆರೆಗೆ ಬರುವುದಕ್ಕೂ ಮುನ್ನವೇ ‘ರಾಣ’ ಸಿನಿಮಾದ ಶೂಟಿಂಗ್ ಮುಗಿಸಿದ್ದ ಅವರು ಇದೀಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ನಿರ್ದೇಶಕ ಪ್ರೀತಂ ಗುಬ್ಬಿ ಅವರ ʻಬಾನದಾರಿಯಲ್ಲಿʼ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ.

ತಮ್ಮ ಸಿನಿಮಾ ಯಾನದ ಕುರಿತು ಸಾಕಷ್ಟು ವಿಚಾರಗಳನ್ನು ಅವರು ʻವಿಸ್ತಾರʼ ಜತೆ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಪಾಲಿಗೆ ರೀಷ್ಮಾ ನಾಣಯ್ಯ ತುಂಬಾ ಲಕ್ಕಿ ಗರ್ಲ್‌ ಎಂಬ ಮಾತು ಗಾಂಧಿನಗರದಲ್ಲಿದೆ. ಸಾಲು ಸಾಲು ಸಿನಿಮಾಗಳು ನಿಮ್ಮ ಕೈಯಲ್ಲಿವೆ. ಹೇಗಿತ್ತು ನಿಮ್ಮ ಸ್ಯಾಂಡಲ್‌ವುಡ್‌ ಎಂಟ್ರಿ?

ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ನೀಡುವಾಗ ನಾನು ತುಂಬಾ ಚಿಕ್ಕವಳಿದ್ದೆ. ನಾನು ಆಗಷ್ಟೇ ಪಿಯು ಮುಗಿಸಿದ್ದೆ. 17 ವರ್ಷ ಇದ್ದಾಗಲೇ ನಾನು ಇಂಡಸ್ಟ್ರಿಗೆ ಕಾಲಿಟ್ಟಿದ್ದೆ. ಚಿಕ್ಕವಳಾಗಿರುವಾಗಲೇ ಬರಬೇಕೆಂಬ ಆಸೆಯಿತ್ತು. ಏಕ್‌ ಲವ್‌ ಯಾ ಸಿನಿಮಾದಲ್ಲಿಯೂ ಫ್ರೆಶ್‌ ಫೇಸ್‌ ಹುಡುಕುತ್ತಿದ್ದರು. ನನ್ನ ಪೋಟೋಸ್‌ ನೋಡಿ ಅವರು ಆಯ್ಕೆ ಮಾಡಿದರು. ಅಲ್ಲಿಂದ ಸಿನಿ ಜರ್ನಿ ಶುರುವಾಯಿತು.

– ಏಕ್‌ ಲವ್‌ ಯಾ ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಕೊರೊನಾ ಕಂಟಕದ ಹೊತ್ತಲ್ಲೇ ಸಿನಿಮಾ ಶೂಟಿಂಗ್‌ ನಡೀತಾ ಇತ್ತು. ಏಕ್‌ ಲವ್‌ ಯಾ ಚಿತ್ರಕ್ಕೆ ನಿಮ್ಮ ಆಯ್ಕೆ ಆಗಿದ್ದು ಹೇಗೆ?

ಪ್ರೇಮ್‌ ಅವರು ಯಾವಾಗಲೂ ಹೊಸಬರನ್ನು ಸ್ಕ್ರೀನ್‌ ಮೇಲೆ ತರಲು ಯೋಚಿಸುತ್ತಿರುತ್ತಾರೆ. ಕನ್ನಡ ಹುಡುಗಿಯೇ ಬೇಕು ಎಂದು ಪ್ರೇಮ್ ಅವರು ಫಿಕ್ಸ್‌ ಆಗಿದ್ದರು. ರಕ್ಷಿತಾ ಅವರು ಕೂಡ ಫೋಟೊ ನೋಡಿ ಇಷ್ಟಪಟ್ಟರು. ಆ ಪಾತ್ರಕ್ಕೆ ನಾನು ಹೊಂದುತ್ತೇನೆ ಎಂದು ಆಯ್ಕೆ ಮಾಡಿದರು.

ಇದನ್ನೂ ಓದಿ | Cinedubs Mobile App | ವಿಕ್ರಾಂತ್‌ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್‌ ಆ್ಯಪ್‌; ಏನಿದರ ವಿಶೇಷತೆ?

– ದೊಡ್ಡ ಡೈರೆಕ್ಟರ್, ದೊಡ್ಡ ಬ್ಯಾನರ್‌ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದು ನೀವು.‌ ಇದು ನಿಮ್ಮ ಸಿನಿ ಕರಿಯರ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಒಟ್ಟಾರೆ ಏಕ್‌ ಲವ್‌ ಯಾ ಬಗ್ಗೆ ಹೇಳುವುದಾದರೆ?

ನಟಿಯಾಗಲು ತುಂಬಾನೇ ಕಷ್ಟ. ಅದು ಸುಲಭದ ಮಾತಲ್ಲ. ಈ ರೀತಿ ದೊಡ್ಡ ಮಟ್ಟದಲ್ಲಿ ಲಾಂಚ್‌ ಆಗಿರುವುದು ತುಂಬಾ ಅಪರೂಪ. ಇದು ನನ್ನ ಅದೃಷ್ಟ ಎಂದು ಹೇಳಲು ಇಷ್ಟ ಪಡುತ್ತೇನೆ. ಈ ಸಿನಿಮಾ ನನಗೆ ಖುಷಿ ಕೊಟ್ಟಿದೆ. ಪ್ರೇಮ್‌ ಅವರ ಜತೆ ಕೆಲಸ ಮಾಡಿರುವುದು ಖುಷಿ ಇದೆ.

– ಮೊದಲ ದಿನ, ಮೊದಲ ದೃಶ್ಯ ಹೇಗಿತ್ತು? ಹೇಗೆ ಪ್ರಿಪೇರ್‌ ಆಗಿ ಹೋಗಿದ್ದಿರಿ?

ಏಕ್‌ ಲವ್‌ ಯಾದಲ್ಲಿ ಆಯ್ಕೆ ಆದ ಮೇಲೆ, ನನಗೆ ಮತ್ತು ನಟ ರಾಣ ಅವರಿಗೆ ವರ್ಕ್‌ಶಾಪ್‌ ಇಟ್ಟಿದ್ದರು. ಸಹ ನಿರ್ದೇಶಕ ಪ್ರೀತಂ ಗುಬ್ಬಿ ನಮಗೆ ಹೇಳಿಕೊಡುತ್ತಿದ್ದರು. ನಮ್ಮ ಸೀನ್‌ಗಳನ್ನು ಶೂಟ್‌ ಮಾಡುವ ಮೊದಲು ನಾವು ತಯಾರಿ ಮಾಡಿಕೊಂಡು ಹೊರಡುತ್ತಿದ್ದೆವು.

– ಮೊದಲ ಸಿನಿಮಾ ಧೈರ್ಯ ಸ್ವಲ್ಪ ಕಡಿಮೆನೆ ಇರುತ್ತೆ. ಹೇಗೆ ಫೇಸ್‌ ಮಾಡಿದ್ರಿ ಎಲ್ಲವನ್ನೂ?

ಆ ಸಮಯದಲ್ಲಿ ನನಗೆ ಅಭ್ಯಾಸದ ಕಡೆ ತುಂಬಾ ಗಮನವಿತ್ತು. ಸಿನಿಮಾ ಎಂದರೆ ನನಗೆ ಏನೂ ತಿಳಿದಿರಲಿಲ್ಲ. ಆಗ ಪ್ರೇಮ್‌ ಅವರು ಪ್ರತಿ ಫ್ರೇಮ್‌ ಮತ್ತು ಕ್ಯಾಮೆರಾ ಮುಂದೆ ನಿಭಾಯಿಸುವ ಕಲೆಯನ್ನು ಹೇಳಿಕೊಟ್ಟರು. ಇಡೀ ತಂಡ ನನಗೆ ಸಹಾಯ ಮಾಡಿದೆ. ಆರಂಭದಿಂದ ಕೊನೆಯವರೆಗೂ ಪ್ರತಿ ಸೀನ್‌ನಲ್ಲಿ ಹೇಳಿಕೊಟ್ಟಿದ್ದಾರೆ.

– ಏಕ್‌ ಲವ್‌ ಯಾ ಸಿನಿಮಾ ಹಿಟ್‌ ಆದ ಬಳಿಕ ಸಾಲು ಸಾಲು ಸಿನಿಮಾಗಳು ಬರ್ತಿವೆ. ಸಿನಿಮಾಗಳನ್ನ ಹೇಗೆ ಚೂಸ್‌ ಮಾಡ್ತೀರಾ?

ಏಕ್‌ ಲವ್‌ ಯಾ ಸಿನಿಮಾ ನಂತರ ಹೆಚ್ಚಾಗಿ ನಾನು ಸ್ಕ್ರಿಪ್ಟ್‌ಗೆ ಪ್ರಾಮುಖ್ಯತೆ ನೀಡುತ್ತೇನೆ. ಕಟೆಂಟ್‌ ಫಿಲ್ಮ್‌ ನನ್ನ ಮೊದಲ ಪ್ರಾಧಾನ್ಯತೆ. ಏಕ್‌ ಲವ್‌ ಯಾ ಸಿನಿಮಾ ಆದ ನಂತರವೂ ನಾನು ಪ್ರೇಮ್‌ ಅವರ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೇನೆ. ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಅವರ ಗೈಡೆನ್ಸ್‌ ಇದ್ದೇ ಇರುತ್ತದೆ.

– ಸಿನಿಮಾ ಆಯ್ಕೆ ವಿಚಾರದಲ್ಲಿ ಕುಟುಂಬದವರು ಸಾಥ್‌ ಕೊಡ್ತಾರಾ?

ಏನಾದರೂ ಒಳ್ಳೆಯ ಕಥೆ ಬಂದರೆ ಮೊದಲು ನನ್ನ ತಂದೆಯ ಬಳಿ ಕೇಳುತ್ತೇನೆ. ಪ್ರತಿ ಬಾರಿ ಕುಟುಂಬದವರೊಂದಿಗೆ ಚರ್ಚಿಸಿ ನಂತರ ನಾನು ಸಿನಿಮಾ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ.

– ಏಕ್‌ ಲವ್‌ ಯಾ ಆಗ್ತಿದ್ದಂತೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಜತೆಗೆ ಬಣ್ಣ ಹಚ್ಚಿದ್ದೀರಿ. ‘ಬಾನ ದಾರಿಯಲ್ಲಿ’ ಸಿನಿಮಾ ತನ್ನ ಫಸ್ಟ್‌ ಲುಕ್‌ನಿಂದಲೇ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ನಿಮ್ಮ ಪಾತ್ರದ ಹೇಗಿದೆ?

ನನ್ನ ಸಿನಿಮಾ ನೀವು ನೋಡುವುದಾದರೆ ಬೇರೆ ಬೇರೆ ಶೇಡ್‌ನಲ್ಲಿ ಮಾಡುತ್ತಿದ್ದೇನೆ. ʻಬಾನದಾರಿಯಲ್ಲಿʼ ಸಿನಿಮಾಗೆ ವೈಲ್ಡ್‌ ಲೈಫ್‌ ಫೋಟೊಗ್ರಾಫರ್‌ ಆಗಿ ಬಣ್ಣ ಹಚ್ಚಿದ್ದೇನೆ. ಈ ಚಿತ್ರದಲ್ಲಿ ಸಖತ್‌ ಬೋಲ್ಡ್‌ ಆಗಿ, ಅವಳ ಪಾಡಿಗೆ ಅವಳು ಖುಷಿಯಾಗಿ ಇರುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ.

– ವೈಲ್ಡ್‌ ಲೈಫ್‌ ಫೋಟೊಗ್ರಾಫರ್‌ ಪಾತ್ರ ನಿರ್ವಹಿಸಿದ್ದೀರಿ. ಈ ಪಾತ್ರಕ್ಕಾಗಿ ನಿಮ್ಮ ತಯಾರಿ ಹೇಗಿತ್ತು?

ನನಗೆ ಪೋಟೋಗ್ರಫಿ ಹೊಸತಲ್ಲ. ನಾನು ಈಗಾಗಲೇ ಈ ಬಗ್ಗೆ ಅಭ್ಯಾಸದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ನನಗೆ ಹೊಸತು ಎಂದು ಯಾವತ್ತೂ ಅನಿಸಿಲ್ಲ. ಫೋಟೋಗ್ರಾಫರ್‌ ಅವರ ಬಾಡಿ ಲಾಂಗ್ವೇಜ್‌ ನೋಡಿ ಕಲಿಯುತ್ತಿದ್ದೇನೆ. ಸಾಕಷ್ಟು ವಿಡಿಯೊ ನೋಡಿ ನೋಡಿ ಕಲಿಯುತ್ತಿದ್ದೇನೆ. ಈ ಪಾತ್ರ ಅಷ್ಟೇನೂ ಕಷ್ಟಕರ ಎಂದೆನಿಸಿಲ್ಲ. ಸಿನಿಮಾ ನೋಡುವಾಗ ಪ್ರೇಕ್ಷಕರು ಇದೆಲ್ಲವನ್ನೂ ಗಮನಿಸುತ್ತಾರೆ.

– ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ಜೊತೆ ಶೂಟಿಂಗ್‌ ಅನುಭವ ಹೇಗಿತ್ತು?

ಇನ್ನೂ ನನ್ನ ಪೋರ್ಷನ್‌ ಶೂಟಿಂಗ್‌ ಆಗಿಲ್ಲ. ಆಗಸ್ಟ್‌ನಲ್ಲಿ ಶೂಟಿಂಗ್‌ ಆಗಲಿದೆ. ನನ್ನ ಪೋರ್ಷನ್‌ ಪ್ರಮುಖವಾಗಿ ಸೌತ್‌ ಆಫ್ರಿಕಾದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ ಇನ್ನೂ ಶೂಟಿಂಗ್‌ ಆಗಬೇಕಿದೆ. ಅವರೊಂದಿಗೆ ನಟಿಸಲು ಉತ್ಸುಕಳಾಗಿದ್ದೇನೆ.

– ಬಾನದಾರಿಯಲ್ಲಿ ಸಿನಿಮಾ ಜತೆಯಲ್ಲೇ ರಾಣ ಹಾಗೂ ಮಾರ್ಗ ಕೂಡ ರಿಲೀಸ್‌ಗೆ ರೆಡಿಯಾಗಿವೆ. ಈ ಸಿನಿಮಾಗಳ ಬಗ್ಗೆ ರೀಷ್ಮಾ ನಾಣಯ್ಯ ಅವರ ಹೋಪ್‌ ಏನು?

ರಾಣ ಈಗಾಗಲೇ ಶೂಟಿಂಗ್‌ ಮುಗಿದಿದೆ. ಆದರೆ ಮಾರ್ಗ ಇನ್ನೂ ಶುರುವಾಗಬೇಕಷ್ಟೇ. ಇನ್ನೂ ರಾಣ ರಿಲೀಸ್‌ ಆಗಲು ಡೇಟ್‌ ಫಿಕ್ಸ್‌ ಆಗಬೇಕಷ್ಟೇ. ನಟ ಶ್ರೇಯಸ್‌ ಅವರು ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ಹಾಡು ಚೆನ್ನಾಗಿ ಮೂಡಿ ಬರುತ್ತಿದೆ. ಅದು ನನಗೆ ಪ್ರಿಯವಾಗಿದ್ದು.

– ನಿಮ್ಮ ಸ್ಟಡೀಸ್‌ಗೆ ನಿಮ್ಮ ಸಿನಿಮಾ ಕರಿಯರ್‌ ಅಡ್ಡಿ ಅಂತಾ ಯಾವಾಗಾದ್ರೂ ಅನಿಸಿದ್ದು ಉಂಟಾ?

ಸಿನಿಮಾ ಕರಿಯರ್‌ ಎಷ್ಟು ಮುಖ್ಯವೋ ಎಜುಕೇಶನ್‌ ಮುಗಿಸಿವುದೂ ನನಗೆ ಅಷ್ಟೇ ಮುಖ್ಯ. ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಿದ್ದೇನೆ. ಟೀಚರ್ಸ್‌ ಕೂಡ ಸಪೋರ್ಟ್‌ ಮಾಡುತ್ತಿದ್ದಾರೆ.

– ನಿಮಗೆ ಯಾವ ಸಬ್ಜೆಕ್ಟ್‌ ಅಂದ್ರೆ ತುಂಬಾ ಇಷ್ಟ?

ನಾನು ಜರ್ನಲಿಸಮ್‌, ಸೈಕಾಲಜಿ, ಮತ್ತು ಕಮ್ಯೂನಿಕೇಟಿವ್‌ ಇಂಗ್ಲಿಷ್‌ ಓದುತ್ತಿದ್ದೇನೆ. ಜರ್ನಲಿಸಮ್‌ ನನ್ನ ಇಷ್ಟವಾದ ವಿಷಯ. ಮುಂದೆ ಜರ್ನಲಿಸಮ್‌ ಅಥವಾ ಸೈಕಾಲಜಿ ಓದಬೇಕೆಂಬ ಆಸೆ ಇದೆ.

– ಫ್ರೀ ಟೈಂನಲ್ಲಿ ಏನ್‌ ಮಾಡ್ತೀರಾ? ಯಾವ ಅಡುಗೆ ತುಂಬಾ ಇಷ್ಟವಾಗುತ್ತೆ ತಿನ್ನೋದಕ್ಕೆ? ವೆಜ್‌ ಅಥವಾ ನಾನ್‌ ವೆಜ್?

ನೃತ್ಯ ತುಂಬಾ ಇಷ್ಟ. ಸಮಯ ಸಿಕ್ಕಾಗೆಲ್ಲ ಡ್ಯಾನ್ಸ್‌ ಮಾಡುತ್ತೇನೆ. ನಾನು ನಾನ್‌ ವೆಜ್‌ ತುಂಬಾ ಇಷ್ಟ ಪಡುತ್ತೇನೆ. ಆದರೆ ಅಡುಗೆ ಮಾಡುವುದಿಲ್ಲ. ತಿನ್ನುವುದು ತುಂಬಾ ಇಷ್ಟ.

– ನಿಮ್ಮ ಸಿನಿಮಾ ಕರಿಯರ್‌ ವಿಚಾರದಲ್ಲಿ ಅಪ್ಪ, ಅಮ್ಮನ ಟಿಪ್ಸ್‌ ಹೇಗೆ ಸಹಾಯ ಮಾಡುತ್ತೆ?

ನನ್ನ ಕುಟುಂಬ ನನ್ನ ಪರವಾಗಿ ನಿಲ್ಲುತ್ತದೆ. ಯಾವತ್ತೂ ನನ್ನ ಆಯ್ಕೆ ಕುರಿತು ಬೇಡ ಎಂದು ಹೇಳುವುದಿಲ್ಲ. ನನಗೆ ಯಾವಾಗ ಸಿನಿಮಾದಲ್ಲಿ ಅವಕಾಶ ಬಂದಿತ್ತೋ ಆಗಲೇ ನನಗೆ ಅವರು ಸಾಥ್‌ ಕೊಟ್ಟರು. ಮೂಲ ಶಿಸ್ತನ್ನು ಯಾವಾಗಲೂ ಮರೆಯಬೇಡ ಎಂದು ಹೇಳುತ್ತಿರುತ್ತಾರೆ.

– ನಿಮಗೆ ಇಂತಹದ್ದೇ ಒಂದು ಮಹತ್ವಾಕಾಂಕ್ಷೆಯ ಪಾತ್ರ ಮಾಡಬೇಕು ಅನ್ನೋ ಆಸೆ ಇದೆಯಾ?
ನಟನೆಗೆ ಅವಕಾಶ ಇರುವ ಯಾವ ಪಾತ್ರ ಮಾಡಲೂ ನಾನು ಸಿದ್ಧ. ಸಿನಿಮಾ ಐತಿಹಾಸಿಕ ಆಗಿದ್ದರೆ ಇನ್ನೂ ಖುಷಿ.

ಇದನ್ನೂ ಓದಿ | IMDb top 10 films | ಜನಪ್ರಿಯ ಭಾರತೀಯ ಫಿಲಂಗಳ ರೇಟಿಂಗ್: ಮೊದಲ ಸ್ಥಾನದಲ್ಲಿ ಯಾವ ಸಿನಿಮಾ?

Exit mobile version