Site icon Vistara News

Vistara Interview | ಬಾಲಿವುಡ್‌ನಲ್ಲಿ ಎಲ್ಲ ಆರ್ಟಿಸ್ಟ್‌ಗಳಿಗೂ ಸಮಾನ ಆದ್ಯತೆ: ನಟಿ ಮೇದಿನಿ ಕೆಳಮನೆ

ಮೇದಿನಿ ಕೆಳಮನೆ

ಯಶಸ್ವಿ ದೇವಾಡಿಗ, ಬೆಂಗಳೂರು
ಅನುರಾಗ್‌ ಕಶ್ಯಪ್‌ ನಿರ್ದೇಶನದ ದೋಬಾರಾ ಸಿನಿಮಾದಲ್ಲಿ (Dobaara) ಕನ್ನಡ ನಟಿ ಮೇದಿನಿ ಕೆಳಮನೆ (Medini Kelamane) ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆಗಸ್ಟ್‌ 19ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ. ಇದರ ಕುರಿತು ಅವರು ನಮ್ಮೊಂದಿಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಿಮಗೆ ಸಿನಿಮಾ ಆಸಕ್ತಿ ಹೇಗೆ ಬಂತು?
ತಂದೆ ರಂಗಭೂಮಿ ನಿರ್ದೇಶಕರಾಗಿದ್ದರು. ನನ್ನ ತಾಯಿ ಕೂಡ ನಟಿಸುತ್ತಿದ್ದರು. ನಟನೆಯಲ್ಲಿ ಅಧ್ಯಯನ ಮಾಡಿದ್ದೆ. ಚಿಕ್ಕವಳಿರುವಾಗಲೇ ನಟನೆ ಮಾಡಬೇಕೆಂಬ ಆಸೆಯಿತ್ತು. ಸಿನಿಮಾದಲ್ಲಿ ಯಾವುದಾದರೂ ಪಾತ್ರ ಇಷ್ಟವಾದರೆ ಆ ಪಾತ್ರದಲ್ಲಿ ನಾನಿರಬೇಕಿತ್ತು ಎಂದು ಅನಿಸುತ್ತಿತ್ತು. ಅಪ್ಪ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಕಿನ್ನರ ಮೇಳ ಮೂಲಕ ನಾನು ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೆ.

ದೊಬಾರಾದಲ್ಲಿ ನೀವು ಎಂಟ್ರಿ ಪಡೆದಿದ್ದು ಹೇಗೆ?
ಇನ್ಸ್ಟಾಗ್ರಾಂ ಮೂಲಕ ಕಾಸ್ಟಿಂಗ್‌ ಡೈರೆಕ್ಟರ್‌ ನನ್ನನ್ನು ಸಂಪರ್ಕಿಸಿದರು. ನಂತರ ಆಡಿಷನ್‌ಗೆ ಕರೆದರು. ಒಂದು ಸಣ್ಣ ರೋಲ್‌ ನೀಡಿದ್ದರು .ಅದನ್ನು ನಿಭಾಯಿಸಿದೆ. ನಂತರ ನನ್ನ ನಟನೆ ಅವರಿಗೆ ಇಷ್ಟವಾಯಿತು.

ಯಾವೆಲ್ಲ ಸಿನಿಮಾಗಳಲ್ಲಿ ನಟಿಸಿದ್ದೀರಿ?
ಇದು ನನ್ನ ಮೂರನೇ ಸಿನಿಮಾ. ನಟೇಶ್ ಹೆಗ್ಡೆ ನಿರ್ದೇಶನದ ಕನ್ನಡದ “ಪೆದ್ರೊʼ ಸಿನಿಮಾದಲ್ಲಿ ನಟಿಸಿದ್ದೇನೆ. ಅದರಲ್ಲಿ ಜೂಲಿ ಎಂಬ ಪಾತ್ರ ನಿಭಾಯಿಸಿದ್ದೆ.ಈ ಸಿನಿಮಾಗೆ ಹಲವಾರು ಪ್ರಸ್ತಿಗಳು ಸಿಕ್ಕಿದೆ. ದೋಬಾರಾ ನನ್ನ ಮೊದಲ ಬಾಲಿವುಡ್‌ ಸಿನಿಮಾ. ಕನ್ನಡದಲ್ಲಿ “ಪೆಪ್ಪೆʼ ಸಿನಿಮಾದಲ್ಲಿಯೂ ನಟಿಸುತ್ತಿದ್ದೇನೆ.

ದೊಬಾರಾ ಸಿನಿಮಾ ಬಗ್ಗೆ ಹೇಳುವುದಾದರೆ?
ಇದು ಟ್ರಾವೆಲಿಂಗ್‌ ಸಿನಿಮಾ ಆಗಿದ್ದು, ಥ್ರಿಲ್‌ ಆಗಿದೆ. ಪಾಸ್ಟ್‌ ಮತ್ತು ಪ್ರೆಸೆಂಟ್‌ ಕಥೆ ಅಲ್ಲಿ ಸಾಗುತ್ತದೆ. ನನಗೆ ತಮಿಳು ಸಿನಿಮಾ ತುಂಬಾ ಇಷ್ಟ. ಅದೇ ರೀತಿ ಕನ್ನಡ ಸಿನಿಮಾ ಸಹಜವಾಗಿಯೇ ನಾನು ಇಷ್ಟ ಪಡುತ್ತೇನೆ.

ಅನುರಾಗ್‌ ಕಶ್ಯಪ್‌ ನಿರ್ದೇಶನದ ಅನುಭವ ಹೇಗಿತ್ತು?
ಅನುರಾಗ್‌ ಕಶ್ಯಪ್‌ (Anurag Kashyap) ಅವರ ಜತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಶಾಟ್‌ ಆಗುವ ಸಮಯದಲ್ಲಿಯೂ ನಮಗೆ ಹೇಳಿಕೊಡುತ್ತಿದ್ದರು. ಸೆಟ್‌ನಲ್ಲಿ ಹಲವಾರು ಕ್ರಿಯೇಟಿವ್‌ ಸನ್ನಿವೇಶಗಳನ್ನು ಹೇಳಿಕೊಡುತ್ತಾರೆ. ಒಂದು ಸೀನ್‌ ಬಗ್ಗೆ ಐಡಿಯಾ ಕೊಟ್ಟಿರುತ್ತಾರೆ. ಅದನ್ನು ನಾವು ಬಿಲ್ಡ್‌ ಮಾಡಿಕೊಳ್ಳಬಹುದು. ಇನ್ನೂ ಹೇಳಲೇಬೇಕಾದ ವಿಚಾರ ಅಂದರೆ ಆರ್ಟಿಸ್ಟ್‌ಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ನಮ್ಮ ನಟನೆ ಅವರಿಗೆ ಮುಖ್ಯವಾಗಿರುತ್ತದೆ. ಪ್ರಮೋಷನ್‌ ಹಾಗೂ ಪೋಸ್ಟ್‌ ಮಾಡುವ ಸಮಯದಲ್ಲಿ ನಮಗೂ ಪ್ರಾಮುಖ್ಯತೆ ನೀಡುತ್ತಾರೆ.

ಇದನ್ನೂ ಓದಿ | Vistara Interview | ಕಂಟೆಂಟ್‌ ಸಿನಿಮಾಗಳಿಗೆ ನನ್ನ ಆದ್ಯತೆ: ಏಕ್‌ ಲವ್‌ ಯಾ ಖ್ಯಾತಿಯ ರೀಷ್ಮಾ ನಾಣಯ್ಯ

ದೊಬಾರಾದಲ್ಲಿ ನಿಮ್ಮ ಪಾತ್ರ?
ರುಜುತಾ ಪಾತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮರ್ಡರ್‌ ಕಥಾ ಹಂದರ ಹೊಂದಿದೆ. ಆ ಕಥೆಗೆ ನನ್ನ ಪಾತ್ರ ಕನೆಕ್ಟ್‌ ಆಗುತ್ತದೆ. ಆಗಸ್ಟ್‌ 19ರಂದು ಚಿತ್ರ ರಿಲೀಸ್‌ ಆಗಲಿದೆ.

ಮುಂದೆ ಬಾಲಿವುಡ್‌ ಚಾನ್ಸ್‌ ಸಿಕ್ಕರೆ ನಟಿಸಲು ಇಷ್ಟ ಪಡುತ್ತೀರಾ?
ಸಿಕ್ಕರೆ ಖಂಡಿತ ಬಾಲಿವುಡ್‌ನಲ್ಲಿ ನಟಿಸುವೆ. ನನ್ನ ನೆಲೆ ಕನ್ನಡವೇ. ಇಲ್ಲಿ ನಟಿಸಲು ಇಷ್ಟಪಡುತ್ತೇನೆ. ತಮಿಳಿನಲ್ಲೂ ನಟಿಸುವ ಆಸೆ ಇದೆ. ನನಗೆ ಚಾಲೆಂಜಿಂಗ್‌ ಪಾತ್ರಗಳನ್ನು ಮಾಡುವ ಆಸೆ.

Exit mobile version