Site icon Vistara News

ವಿವೇಕ್ ಒಬೆರಾಯ್ @46

ವಿವೇಕ್ ಒಬೆರಾಯ್

1976ರ ಸೆಪ್ಟೆಂಬರ್ 3ರಂದು ಹೈದರಾಬಾದ್‌ನಲ್ಲಿ ಜನಿಸಿದರು. ವಿವೇಕಾನಂದ ಒಬೆರಾಯ್ ಇವರ ಮೂಲ ಹೆಸರು.

2002ರಲ್ಲಿ ತೆರೆಕಂಡ ʼಕಂಪನಿʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್‌ನಿಂದ ಅತ್ಯುತ್ತಮ ಚೊಚ್ಚಲ ನಟ ಮತ್ತು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದೆ.

2003ರಲ್ಲಿ ವಿವೇಕ್ ವಿವಾದದ ಹೇಳಿಕೆ ನೀಡಿದ್ದರು. ಐಶ್ವರ್ಯಾ ರೈ ಅವರೊಂದಿಗಿನ ನಿಕಟ ಸಂಬಂಧದಿಂದಾಗಿ ಸಲ್ಮಾನ್ ಖಾನ್ 41 ಬಾರಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

2007ರ Shootout at Lokhandwala ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕಾಗಿ IIFA ಅವಾರ್ಡ್ಸ್‌ ಮತ್ತು AXN Action ಅವಾರ್ಡ್ಸ್‌ನಿಂದ ಅತ್ಯುತ್ತಮ ಖಳನಾಯಕ ಪ್ರಸಸ್ತಿ ದೊರೆತಿದೆ.

2013 ರಿಂದ 2018 ವರೆಗೆ Zee ಟಿವಿ ಹಿಂದಿಯಲ್ಲಿ ಬರುವ ರಿಯಾಲಿಟಿ ಶೋ India’s Best Dramebaazನ ಮುಖ್ಯ ತೀರ್ಪುಗಾರರಾಗಿದ್ದರು.

2017ರಲ್ಲಿ Vivegam ಚಿತ್ರದಲ್ಲಿ ನೆಗೆಟಿವ್‌ ಪಾತ್ರದೊಂದಿಗೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

2019ರಲ್ಲಿ ಶಿವರಾಜಕುಮಾರ್‌ ನಟನೆಯ ರುಸ್ತುಂ ಚಿತ್ರದಲ್ಲಿ DCP ಭರತ್ ರಾಜ್ ಪಾತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

Dharavi Bank ಮತ್ತು Indian Police Force ವಿವೇಕ್‌ ಅವರ ಮುಂಬರಲಿರುವ ವೆಬ್‌ ಸೀರಿಸ್‌ಗಳು.

ಇದನ್ನೂ ಓದಿ| Happy Birthday | ಕಿಚ್ಚನ ಹುಟ್ಟುಹಬ್ಬ ಸಂಭ್ರಮ, ಎಲ್ಲೆಲ್ಲೂ ಸೆಲೆಬ್ರೇಷನ್..!

Exit mobile version