Site icon Vistara News

Head Bush Movie | ʻನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲʼ: ಕ್ಷಮೆ ಕೇಳಿದ ʻಹೆಡ್‌ ಬುಷ್‌ʼ ತಂಡ!

Head Bush Movie

ಬೆಂಗಳೂರು: ಡಾಲಿ ಧನಂಜಯ್‌ ಅಭಿನಯದ ಹೆಡ್‌ ಬುಷ್‌ ಸಿನಿಮಾದಲ್ಲಿ (Head Bush Movie) ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಫಿಲ್ಮ್‌ ಚೇಂಬರ್‌ಗೆ ದೂರು ದಾಖಲಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದವು. ಇದೀಗ ಈ ಕುರಿತು ಸಿನಿಮಾ ತಂಡ ಕ್ಷಮೆ ಕೇಳಿದೆ.

ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಧನಂಜಯ್ ʻʻಅವಮಾನ ಆಗುವಂಥದ್ದನ್ನು ಖಂಡಿತ ನಾವು ಮಾಡಿಲ್ಲ. ನಾವು ಯಾವುದೇ ರೀತಿಯಲ್ಲಿ ತಪ್ಪು ಮಾಡಿಲ್ಲ. ನಾವು ಯಾರನ್ನೂ ನೋಯಿಸುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ. ದೇವರ ಬಗ್ಗೆ, ವೀರಗಾಸೆ ಹಾಗೂ ಕರಗದ ಬಗ್ಗೆ ನಮಗೂ ಅಪಾರವಾದ ಅಭಿಮಾನ ಭಕ್ತಿ ಇದೆ. ಕರ್ನಾಟಕದ ವಿವಿಧ ಭಾಗದ ವೀರಗಾಸೆಯ ಭಕ್ತರು ಖುಷಿಯಾಗಿ ಆರಾಮಾಗಿರಿ. ನಿಮ್ಮ ಸಪೋರ್ಟ್‌ ನಮ್ಮ ಮೇಲೆ ಇರಲಿ”ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

ಹೆಡ್‌ ಬುಷ್‌ ಸಿನಿಮಾದಲ್ಲಿ ವೀರಭದ್ರ ದೇವರ ಕುಣಿತ/ವೀರಗಾಸೆ ಕಲೆಯನ್ನು ದೇವರ ನಂಬಿಕೆಯಾಗಿ ಆಚರಿಸಲಾಗುತ್ತ ಬರಲಾಗಿದೆ. ಆದರೆ, ಈ ಚಿತ್ರದಲ್ಲಿ ದೇವರಿಗೆ ಹೊಡೆಯುವ, ಒದೆಯುವ ದೃಶ್ಯವಿದೆ. ಈ ಹಿನ್ನೆಲೆಯಲ್ಲಿ ನಟರಾದ ಲೂಸ್ ಮಾದ, ವಶಿಷ್ಠ ಸಿಂಹ, ದೇವರಾಜು, ನಿರ್ಮಾಪಕ, ನಟ ಡಾಲಿ ಧನಂಜಯ್, ಸೋಮಣ್ಣ ಹಾಗೂ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವೀರಶೈವ ಪುರೋಹಿತ ಮಹಾಸಭಾ ಮತ್ತು ರಾಜ್ಯ ಕಲಾವಿದರ ಒಕ್ಕೂಟ ಒತ್ತಾಯ ಮಾಡಿದ್ದರು.

ಇದನ್ನೂ ಓದಿ |Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ

Exit mobile version