Site icon Vistara News

Weekend With Ramesh: ಮಾ.25ರಿಂದ ʻವೀಕೆಂಡ್ ವಿತ್ ರಮೇಶ್’, ಅತಿಥಿಗಳ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ

Weekend With Ramesh On March Here is Complete Detailes

ಬೆಂಗಳೂರು: ‘ವೀಕೆಂಡ್ ವಿತ್ ರಮೇಶ್’ (Weekend With Ramesh) ಸೀಸನ್‌ 5 ಮಾರ್ಚ್ 25ರಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಕೆಲವು ದಿನಗಳಿಂದ ಸೀಸನ್‌ 5ರ ಮೊದಲ ಅತಿಥಿಯಾಗಿ ಯಾರು ಬರಬಹುದೆಂಬ ಚರ್ಚೆಗಳು ನಡೆಯುತ್ತಿತ್ತು. ಇದೀಗ ತಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದೆ. ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಭಾಗವಹಿಸಲಿದ್ದಾರೆ.

ರಮೇಶ್ ಅರವಿಂದ್ ಮಾತನಾಡಿ ʻʻಇಷ್ಟರವರೆಗೆ 84 ಸಾಧಕರ ಕತೆಯನ್ನು ನಾನು ಹೇಳಿದ್ದೇನೆ. ಈ ಸೀಸನ್‌ನಲ್ಲಿ ಇನ್ನೂ 16 ಜನರ ಕತೆ ಹೇಳಿದರೆ ಸೆಂಚುರಿ ಬಾರಿಸುತ್ತೇನೆ. 100 ಸಾಧಕರ ಕತೆಯನ್ನು ಹೇಳುವ ಅದೃಷ್ಟ ನನ್ನದು. ಇದು ಒಬ್ಬರ ಕತೆ ಮಾತ್ರ ಅಲ್ಲ. ಕರ್ನಾಟಕದಲ್ಲಿ ಸಾಧಕರಿಗೆನೂ ಕಡಿಮೆ ಇಲ್ಲ. ಈ ಸೀಸನ್‌ 4 ಸೀಸನ್‌ಗಿಂತಲೂ ಭಿನ್ನವಾಗಿರುತ್ತದೆ. ಮೊದಲ ಎಪಿಸೋಡ್‌ನಲ್ಲಿ ನಟಿ ರಮ್ಯಾ ಇರುತ್ತಾರೆ. ಎರಡನೇ ಎಪಿಸೋಡ್‌ನಲ್ಲಿ ಪ್ರಭುದೇವ ಇರುತ್ತಾರೆ. ಅವರ ಎಪಿಸೋಡ್‌ ಈಗಾಗಲೇ ಶೂಟ್‌ ಆಗಿದೆ. ಇಶಾ ಫೌಂಡೇಶನ್​ನ ಜಗ್ಗಿ ವಾಸುದೇವ್, ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಲೆಕ್ಷನ್ ಆದ ಮೇಲೆ ರಾಜಕಾರಣಿಗಳು ಬರುತ್ತಾರೆ. ಧ್ರುವ ಸರ್ಜಾ, ರಚಿತಾ ರಾಮ್‌, ಮಾಲಾಶ್ರೀ, ಸದ್ಗುರು ಸೇರಿದಂತೆ ಹಲವು ಸಾಧಕರು ಇರುತ್ತಾರೆʼʼ ಎಂದರು.

ಇದನ್ನೂ ಓದಿ: Weekend With Ramesh: ಮಾರ್ಚ್‌ 25ರಿಂದ ʻವೀಕೆಂಡ್ ವಿತ್ ರಮೇಶ್’; ಮೊದಲ ಗೆಸ್ಟ್‌ ಮೋಹಕ ತಾರೆ ರಮ್ಯಾ?

ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು

ವೀಕೆಂಡ್ ವಿತ್ ರಮೇಶ್ ಉದ್ದೇಶ

ʻʻಇಲ್ಲಿಯವರೆಗೂ 84 ಸಾಧಕರು ಕುರ್ಚಿಯ ಮೇಲೆ ಕೂತಿದ್ದು 110 ಸಂಚಿಕೆಗಳು ಪ್ರಸಾರವಾಗಿವೆ. ಇನ್ನು 16 ಸಾಧಕರು ಅದ ಬಳಿಕ ಸೆಂಚೂರಿ ಭಾರಿಸುತ್ತೇವೆ. ಕೇವಲ ನಟ, ರಾಜಕಾರಣಿ ಅಲ್ಲ ವೈದ್ಯರು, ರೈತರು, ನರ್ಸ್, ಹೀಗೆ ಹಲವರನ್ನು ಕರೆಸಬಹುದು. ಸ್ಪೂರ್ತಿ ತುಂಬುವಂತಹ ಕೆಲಸ ಮಾಡಬೇಕು. ಅದರಿಂದ, ಕರ್ನಾಟಕದಲ್ಲಿರುವ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಬೇಕು ಎನ್ನುವುದೇ ವೀಕೆಂಡ್ ವಿತ್ ರಮೇಶ್ ಉದ್ದೇಶʼʼ ಎಂದರು ರಮೇಶ್ ಅರವಿಂದ್

ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಮಾತನಾಡಿ ʻʻವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮಾಡಬೇಕಾದರೆ ನಮಗೆ ಅಷ್ಟೇ ಭಯ ಮತ್ತು ಶೃದ್ಧೆ ಇರಬೇಕಾಗುತ್ತದೆ. ಕಳೆದ ನಾಲ್ಕು ಸೀಸನ್‌ನಲ್ಲಿ 84 ಸಾಧಕರ ಜೀವನ ತೋರಿಸಿದ್ದೇವೆ. ಈ ಕಾರ್ಯಕ್ರಮ ಇಂದಿಗೂ ಫೇಮಸ್ ಆಗಿದೆ. ಮುಂದೆಯೂ ನಿಮ್ಮ ಸಹಕಾರ ಇರಲಿʼʼಎಂದರು.

ಇದನ್ನೂ ಓದಿ: Weekend With Ramesh: ‘ವೀಕೆಂಡ್ ವಿತ್‌ ರಮೇಶ್ʼ ಮೊದಲ ಎಪಿಸೋಡ್‌ಗೆ ರಿಷಬ್‌ ಬದಲು ಬೇರೆ ಅತಿಥಿ ಯಾರು?

ಜೀ ವಾಹಿನಿ ಈಗಾಗಲೇ `ವೀಕೆಂಡ್ ವಿತ್‌ ರಮೇಶ್ʼ ಮತ್ತೆ ಬರುತ್ತಿದೆ ಎಂಬ ಪ್ರೋಮೊ ಪ್ರಸಾರ ಮಾಡಿದೆ. ನಟ ರಮೇಶ್‌ ಕೂಡ ಪ್ರೋಮೊ ಹಂಚಿಕೊಂಡಿದ್ದರು. ರಾಧಿಕಾ ಚೇತನ್ ಕೂಡ ಕಾಣಿಸಿಕೊಂಡಿದ್ದರು. “ಸ್ಫೂರ್ತಿದಾಯಕ ಕಥೆಗಳೊಂದಿಗೆ ವೀಕೆಂಡ್‌ಗೆ ಸಾರ್ಥಕತೆ ತುಂಬೋಕೆ ಬರ್ತಿದ್ದಾರೆ ನಿಮ್ಮ ರಮೇಶ್ ಅರವಿಂದ್” ಎಂದು ಹೇಳಿಕೆ ನೀಡಿತ್ತು.

2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿಥ್‌ ರಮೇಶ್ʼ 4’ ಕಾರ್ಯಕ್ರಮ ಮುಗಿದಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘’ವೀಕೆಂಡ್ ವಿತ್‌ ರಮೇಶ್ʼ ’ ಮತ್ತೆ ಯಾವಾಗ ಶುರುವಾಗುತ್ತದೆ ಎಂದು ವೀಕ್ಷಕರು ಕೇಳುತ್ತಲೇ ಇದ್ದಾರೆ. ‘’ವೀಕೆಂಡ್ ವಿತ್‌ ರಮೇಶ್ʼ ’ ಕಾರ್ಯಕ್ರಮದ ಮೊದಲ ಸೀಸನ್‌ 2014ರಲ್ಲಿ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ, ಮೂರನೇ ಸೀಸನ್ 2017ರಲ್ಲಿ, 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು.

Exit mobile version