ಬೆಂಗಳೂರು: ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಪ್ತಪದಿ (Naresh Pavitra) ತುಳಿದಿರುವ ವಿಡಿಯೊ ಹಂಚಿಕೊಂಡ ಬೆನ್ನಲ್ಲೇ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿತ್ತು. ಇವರಿಬ್ಬರ ಮದುವೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದು, ರೀಲಾ, ರಿಯಲಾ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಹೊಸ ಸುದ್ದಿ ಪ್ರಕಾರ ಪವಿತ್ರಾ-ನರೇಶ್ ಮದುವೆ ವಿಡಿಯೊ ಖಾಸಗಿಯಲ್ಲ, ಅವು ಸಿನಿಮಾಗಾಗಿ ಮಾಡಿದ ದೃಶ್ಯಗಳು ಎಂದು ನಿರ್ದೇಶಕ ಎಂ.ಎಸ್.ರಾಜು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪತ್ನಿ ರಮ್ಯಾ ಜತೆಗಿನ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೇ ನರೇಶ್ ಅವರು ಪವಿತ್ರಾ ಜತೆ ಹೇಗೆ ಮದುವೆಯಾದರು ಎಂಬ ಪ್ರಶ್ನೆ ಮೂಡಿತ್ತು. ಆದರೆ ಇದು ನಿಜವಲ್ಲ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಲವ್ ಸ್ಟೋರಿಯನ್ನೇ ತಮ್ಮ ಚಿತ್ರಕ್ಕಾಗಿ ಎಂ.ಎಸ್.ರಾಜು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಸತ್ಯ ಬಹಿರಂಗಗೊಂಡಿದೆ. ಅಲ್ಲದೇ, ನರೇಶ್ ಅವರೇ ಈ ಸಿನಿಮಾದ ನಿರ್ಮಾಪಕರು ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಸೆಕೆಂಡ್ ಇನ್ನಿಂಗ್ಸ್ ಎಂದು ಹೆಸರಿಡಲಾಗಿದ್ದು, ಈ ಕುರಿತು ಅಧಿಕೃತವಾಗಿ ನರೇಶ್ ಅವರೇ ಮುಂದಿನ ದಿನಗಳಲ್ಲಿ ಹೇಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Naresh Pavitra Marriage: ಮದುವೆ ವಿಡಿಯೊ ನೋಡಿ ಸಿನಿಮಾ ದೃಶ್ಯ ಅಂದ್ರು ನೆಟ್ಟಿಗರು: ʻಪವಿತ್ರ ಬಂಧನʼ ರೀಲಾ? ರಿಯಲ್ಲಾ?
ಮಾಹಿತಿ ಪ್ರಕಾರ ‘ಎರಡನೇ ಇನಿಂಗ್ಸ್’ ಶೀರ್ಷಿಕೆಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದ್ದು, ಸದ್ಯದಲ್ಲೇ ಪ್ರಚಾರಕ್ಕೆ ಚಾಲನೆ ಸಿಗಲಿದೆ. ಈ ಸಿನಿಮಾದಲ್ಲಿ ಪವಿತ್ರಾ ಹಾಗೂ ನರೇಶ್ ನಡುವೆ ಬೋಲ್ಡ್ ಸೀನ್ಗಳು ಇರಲಿವೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಫೋಟೊ ರಿಲೀಸ್ ಆದ ಬೆನ್ನಲ್ಲೇ ಸದ್ದಿಲ್ಲದೇ ದುಬೈಗೆ ಹಾರಿದ್ದರು. ಕೆಲ ದಿನಗಳ ಕಾಲ ದುಬೈನಲ್ಲಿ ಈ ಜೋಡಿ ಕಳೆದಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.