Site icon Vistara News

Dhanush | ನಟನಾಗದೇ ಇದ್ದಿದ್ದರೆ ಧನುಷ್‌ ಏನಾಗುತ್ತಿದ್ದರು?

Dhanush

ಬೆಂಗಳೂರು : ಇತ್ತೀಚೆಗೆ ದಿ ರುಸ್ಸೋ ಬ್ರದರ್ಸ್ ನಿರ್ದೇಶನದ ʻದಿ ಗ್ರೇ ಮ್ಯಾನ್ʼ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟ ಧನುಷ್ (Dhanush) ಅವರು ತಮ್ಮ ಬಹುಮುಖ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ನಟನೆಯ ಜತೆ, ಅವರು ಚಲನಚಿತ್ರ ನಿರ್ಮಾಪಕ, ಬರಹಗಾರ ಮತ್ತು ಗಾಯಕರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ವ್ಯಕ್ತಿ. ಬಾಲ್ಯದಲ್ಲಿ ತನ್ನ ಅಡುಗೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದ ಅವರು ಅಪ್ಪನಿಗೆ ಆಮ್ಲೆಟ್, ಫ್ರೈಡ್ ರೈಸ್‌ನಂತಹ ಸರಳ ತಿನಿಸುಗಳನ್ನು ಮಾಡುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ʻಶಮಿತಾಭ್ʼ ಚಿತ್ರದ ಪ್ರಚಾರದ ಸಮಯದಲ್ಲಿ, ಧನುಷ್ ತಮ್ಮ ಅಡುಗೆಯ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ. ಒಂದು ವೇಳೆ ನಟನಾಗದೇ ಇರುತ್ತಿದ್ದರೆ ಬಾಣಸಿಗನಾಗುತ್ತಿದ್ದೆ ಎಂದು ಹೇಳಿದ್ದಾರೆ.

ಧನುಷ್‌ ಮಾತನಾಡಿ, “ನಾನು ಅಡುಗೆ ಮಾಡಲು ಇಷ್ಟಪಡುತ್ತೇನೆ ಮತ್ತು ನಾನು ಬಾಲ್ಯದಲ್ಲಿ ಅಡುಗೆಯಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದೇನೆ. ನಾನು ಯಾವಾಗಲೂ ತಂದೆಗೆ ಏನಾದರೂ ಅಡುಗೆ ಮಾಡಲು ಪ್ಲಾನ್‌ ಮಾಡುತ್ತಿದ್ದೆ. ನಾನು ಆಮ್ಲೆಟ್, ಫ್ರೈಡ್ ರೈಸ್ ಮತ್ತು ಸ್ಯಾಂಡ್‌ವಿಚ್‌ನಂತಹ ಸರಳವಾದ ಅಡುಗೆಗಳನ್ನು ಕಲಿತಿದ್ದೇನೆ ಮತ್ತು ಹೆಚ್ಚಾಗಿ ನಾನು ಅದನ್ನು ನನ್ನ ತಂದೆಗೆ ಅರ್ಪಿಸುತ್ತೇನೆ ಮತ್ತು ಅವರ ಒಪ್ಪಿಗೆಗಾಗಿ ಕಾಯುತ್ತಿದ್ದೆ. ನಾನು ಅಡುಗೆ ಮಾಡಿದ್ದನ್ನು ಅವರು ಮೆಚ್ಚಿದಾಗ, ಅದು ನನಗೆ ಸಂತೋಷವನ್ನು ನೀಡುತ್ತಿತ್ತು,” ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಈಗ ಅಡುಗೆಮನೆಗೆ ಪ್ರವೇಶಿಸಲು ಸಮಯವೇ ಸಿಗುತ್ತಿಲ್ಲ ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ, ರೀಲ್ ಲೈಫ್‌ನಲ್ಲಿ ಬಾಣಸಿಗನಾಗಿ ನಟಿಸಲು ನನಗಿಷ್ಟವಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Dhanush | ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಧನುಷ್‌

“ಅಡುಗೆ ಕಲೆ ತುಂಬಾ ಇಷ್ಟ. ಪದಾರ್ಥಗಳನ್ನು ಮಿಶ್ರಣ ಮಾಡುವುದು, ತರಕಾರಿಗಳನ್ನು ಕತ್ತರಿಸುವುದು – ಅಡುಗೆಯ ಬಗ್ಗೆ ಎಲ್ಲವೂ ನನಗೆ ಖುಷಿ ಕೊಡುತ್ತದೆ. ನಾನು ನನ್ನ ತಾಯಿಯಿಂದ ಅಡುಗೆ ಕಲಿತಿದ್ದೇನೆ, ಅವರು ಅದ್ಭುತವಾಗಿ ಅಡುಗೆಯನ್ನು ಮಾಡುತ್ತಾರೆ. ತಿನ್ನುವುದು ಕೂಡ ಅಷ್ಟೇ ಇಷ್ಟ ”ಎಂದು ಅವರು ಹೇಳಿಕೊಂಡಿದ್ದಾರೆ.

ದಿ ಗ್ರೇ ಮ್ಯಾನ್‌ನಲ್ಲಿ ಕೊಲೆಗಡುಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನುಷ್ ತನ್ನ ಮುಂಬರುವ ತಮಿಳು ಚಿತ್ರ ʻತಿರುಚಿತ್ರಂಬಲಂʼ ಅಗಸ್ಟ್‌ನಲ್ಲಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಅವರು ಪ್ರಸ್ತುತ ಮುಂಬರುವ ತಮಿಳು-ತೆಲುಗು ದ್ವಿಭಾಷಾ ಚಿತ್ರ ʻವಾತಿʼ ಚಿತ್ರೀಕರಣದಲ್ಲಿದ್ದಾರೆ.

ಚಿತ್ರದ ತೆಲುಗು ಆವೃತ್ತಿಗೆ ʻಸರ್ʼ ಎಂದು ಹೆಸರಿಡಲಾಗಿದೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ವೆಂಕಿ ಅಟ್ಲೂರಿ ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿಲಿದ್ದಾರೆ.

ಇದನ್ನೂ ಓದಿ | Captain Miller Film | ಐತಿಹಾಸಿಕ ಕಥೆಯೊಂದಿಗೆ ಬರುತ್ತಿದ್ದಾರೆ ನಟ ಧನುಷ್‌: ಸೆಟ್ಟೇರಲಿದೆ ಕ್ಯಾಪ್ಟನ್ ಮಿಲ್ಲರ್

Exit mobile version