Site icon Vistara News

ಕರ್ನಾಟಕದಲ್ಲಿ ಬಾಯ್ಕಾಟ್‌ ಆಗಲಿದೆಯಾ Vikram movie?

vIKRAM bOYY COTT

ಬೆಂಗಳೂರು : ವಿಕ್ರಮ್‌ ಸಿನಿಮಾ ಜೂನ್‌ 3ರಂದು ತೆರೆ ಕಂಡಿದೆ. ಮೊದಲ ದಿನವೇ ಉತ್ತಮ ವಿಮರ್ಶೆಗಳು ಕೇಳಿ ಬಂದಿದ್ದು, ಕಮಲಹಾಸನ್‌ ನಟನೆಗೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿದೆ. ವಿಜಯ್‌ ಸೇತುಪತಿ, ಫಹಾದ್‌ ಫಾಸಿಲ್‌ ಕೂಡ ಭರಪೂರ ಪ್ರದರ್ಶನ ನೀಡಿದ್ದಾರೆ.

ಇತ್ತೀಚೆಗೆ ದಕ್ಷಿಣದಲ್ಲಿ ದೊಡ್ಡ ಸ್ಟಾರ್‌ಗಳ ಪ್ಯಾನ್‌ ಇಂಡಿಯಾ ಸಿನಿಮಾಗಳು ಹೆಚ್ಚೆಚ್ಚು ಬರುತ್ತಿವೆ. ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್‌ ಆಗುತ್ತಿವೆ. ಆದರೆ ವಿಕ್ರಮ್‌ ತಮಿಳಿನಲ್ಲಿ ಮಾತ್ರ ರಿಲೀಸ್‌ ಆಗಿದ್ದು, ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ಕನ್ನಡ ಬಳಕೆ ಮಾಡಿಲ್ಲ ಎಂದಾದರೆ ಸಿನಿಮಾ ರಿಲೀಸ್‌ ಮಾಡಲೇಬಾರದು ಎಂದು ಜನರು ಆಗ್ರಹಿಸುತ್ತಿದ್ದಾರೆ.

ವಿಕ್ರಮ್‌ ಟ್ರೇಲರ್‌ ಬಿಟ್ಟ ಕೂಡಲೇ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಕರ್ನಾಟಕದಲ್ಲಿ ಟ್ವೀಟ್‌ ಮೂಲಕ ಸಿನಿಮಾ ಬಾಯ್ಕಾಟ್‌ ಮಾಡಿ ಎಂದು ಶೇರ್‌ ಮಾಡುತ್ತಿದ್ದಾರೆ. ಲೋಕೇಶ್‌ ಕನಗರಾಜ್‌ ವಿಕ್ರಮ್‌ ಸಿನಿಮಾ ಮೂಲಕ ಮತ್ತೆ ವಾಪಸ್‌ ಆಗಿದ್ದಾರೆ. ಇದು ಆ್ಯಕ್ಷನ್‌ ಸಿನಿಮಾ ಎಂದು ಟ್ರೇಲರ್‌ ಮತ್ತು ಪೋಸ್ಟರ್‌ ಮೂಲಕವೇ ತಿಳಿದು ಬಂದಿತ್ತು.

ಇದನ್ನೂ ಓದಿ : Vikram Film: ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ʼವಿಕ್ರಮ್‌ʼ ಸೋರಿಕೆ ಆಗಿದ್ದು ಹೇಗೆ?

ಜೂನ್‌ 2ರಂದು ವಿಕ್ರಮ್‌ ಪ್ರಚಾರಕ್ಕೆ ಕಮಲ್‌ ಹಾಸನ್‌ ಬೆಂಗಳೂರಿಗೆ ಬಂದಿದ್ದರು. ಆಗ ಕೂಡ ಕಮಲ್‌ ಹಾಸನ್‌ ತಮಿಳಿನಲ್ಲಿಯೇ ಮಾತನಾಡಿದ್ದರು. ಆಗಲೂ ಕೂಡ ಹಲವಾರು ಜನ ವಿರೋಧ ವ್ಯಕ್ತಪಡಿಸಿದ್ದರು. ರಿಲೀಸ್‌ ಆಗುತ್ತಿದ್ದಂತೆ ಸಿನಿಮಾ ಬ್ಯಾನ್‌ ಮಾಡಿ ಎನ್ನುವ ಒತ್ತಾಯ ಕೇಳಿ ಬಂದಿದೆ.

ಅಕ್ಷಯ ಕುಮಾರ್‌ ಅವರ ಫೃಥ್ವಿರಾಜ್‌ ಸಿನಿಮಾ ಹಾಗೂ ಸಂದೀಪ್‌ ಉನ್ನಿಕೃಷ್ಣನ್‌ ಜೀವನಕತೆ ಆಧರಿಸಿದ ಮೇಜರ್‌ ಕೂಡ ಒಂದೇ ದಿನ ರಿಲೀಸ್‌ ಆಗಿವೆ. ಇದರ ಪರಿಣಾಮ ವಿಕ್ರಮ್‌ ಕಲೆಕ್ಷನ್‌ನಲ್ಲಿ ಕೂಡ ಭಾರಿ ಹೊಡೆತ ಆಗಿದೆ. ಮತ್ತು ಈ ಸಿನಿಮಾ ತಮಿಳು ರಾಕರ್ಸ್‌ರಿಂದಾಗಿ ಸೋರಿಕೆ ಆಗಿತ್ತು.

ಈ ಮೊದಲು ಪ್ಯಾನ್‌ ಇಂಡಿಯಾ ಸಿನಿಮಾಗಳಾದ ಆರ್‌ಆರ್‌ಆರ್‌, ಪುಷ್ಪ ಸೇರಿ ಅನೇಕ ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್‌ ಆಗಿ ತೆರೆಗೆ ಬಂದಿವೆ. ಆದರೆ ಬೆಂಗಳೂರಿನಲ್ಲಿ ಕನ್ನಡ ವರ್ಷನ್‌ಗೆ ಸಿಕ್ಕಿದ್ದು, ಕೆಲವೇ ಕೆಲವು ಚಿತ್ರಮಂದಿರಗಳು ಮಾತ್ರ. ಕನ್ನಡಿಗರೇ ಕನ್ನಡವನ್ನು ಕಡೆಗಣಿಸಿ ತಮಿಳು, ತೆಲುಗು ಆವೃತ್ತಿಗಳತ್ತ ಹೋಗಿದ್ದರು. ಹೀಗಾಗಿ ಕನ್ನಡ ಆವೃತ್ತಿಗೆ ಕಳಪೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟಿಟಿ ವೇದಿಕೆಗಳಲ್ಲಿ ಮಾತ್ರ ಕನ್ನಡಕ್ಕೆ ಸ್ವಲ್ಪ ಹೆಚ್ಚಿನ ಬೇಡಿಕೆ ಲಭ್ಯವಾಗಿದೆ.

ಇದನ್ನೂ ಓದಿ | Vikram: ʼಬುರ್ಜ್ ಖಲೀಫಾʼ ಮೇಲೆ ಅನಾವರಣಗೊ‌ಳ್ಳಲಿದೆ ʼವಿಕ್ರಮ್‌ʼ ಟ್ರೈಲರ್‌

Exit mobile version