Site icon Vistara News

Wolf Teaser: ಭಯ ಬೀಳಿಸುವಂತಿದೆ ಪ್ರಭುದೇವ್‌ ನಟನೆಯ ‘Wolfʼ ಸಿನಿಮಾ ಟೀಸರ್‌!

Wolf Teaser of Prabhu Dheva

ಬೆಂಗಳೂರು: ಭಾರತದ ಮೈಕೆಲ್‌ ಜಾಕ್ಸನ್‌ ಎಂದೇ ಪ್ರಸಿದ್ಧಿ ಪಡೆದಿರುವ ಪ್ರಭುದೇವ್‌ ನಟನೆಯ ಬಹುನಿರೀಕ್ಷಿತ ಸಿನಿಮಾವಾದ ‘wolfʼ ಟೀಸರ್‌ (Wolf Teaser) ಬಿಡುಗಡೆಗೊಂಡಿದೆ. ಇದು ಪ್ರಭುದೇವ ಅವರ 60ನೇ ಸಿನಿಮಾ. ಟೀಸರ್ ಹೊಸ ಲೋಕಕ್ಕೆ ಕೊಂಡೊಯ್ಯುವಂತಿದೆ. ನಟಿ ಅನಸೂಯಾ ಮತ್ತು ಪ್ರಭುದೇವ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 69 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ದೃಶ್ಯಗಳು ಅದ್ಭುತವಾಗಿವೆ. ಪ್ರಭುದೇವ ಅವರ ಆಕ್ಷನ್ ಸೀಕ್ವೆನ್ಸ್ ಮತ್ತು ಅನಸೂಯಾ ಅವರ ಗೆಟಪ್ ಈ ಸಿನಿಮಾದಲ್ಲಿ ಕುತೂಹಲ ಹೆಚ್ಚಿಸಿದೆ.

ಈ ಸಿನಿಮಾವನ್ನು ಕನ್ನಡದ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಇದೊಂದು ಪಕ್ಕಾ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ಅಲ್ಲದೆ ಈ ಕಥೆಗೆ ಸುಮಾರು 600 ವರ್ಷಗಳ ಹಿಂದಿನ ಲಿಂಕ್ ಇದ್ದು, ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಪ್ರಭುದೇವ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಒಂದು ವಿಷಯವಾಗಿದ್ದರೆ, ಮತ್ತೊಂದು ಕಡೆ ಈ ಸಿನಿಮಾ 600 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಲಿದೆ ಎಂಬ ಹಿಂಟ್‌ ಟೀಸರ್‌ ಮೂಲಕ ಚಿತ್ರತಂಡ ಕಟ್ಟಿಕೊಟ್ಟಿದೆ.

ತಮಿಳು, ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸ ಮುಗಿದಿದ್ದು, ಆಗಸ್ಟ್ 3 ರಂದು ಸಿನಿಮಾ ಟೀಸರ್ ರಿಲೀಸ್ ಆಗಿದೆ.

ಇದನ್ನೂ ಓದಿ: Wolf Movie: ಪ್ರಭುದೇವ ಅಭಿನಯದ ‘wolf’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್

ಚಿತ್ರದಲ್ಲಿ ಪ್ರಭುದೇವ, ಅಂಜು ಕುರಿಯನ್, ಲಕ್ಷ್ಮೀ ರೈ, ಪುಷ್ಪ ಖ್ಯಾತಿಯ ಅನಸೂಯಾ, ವಸಿಷ್ಠ ಸಿಂಹ , ರಮೇಶ್ ತಿಲಕ್, ಲೊಲ್ಲು ಸಭಾ ಸ್ವಾಮಿನಾಥನ್, ದೀಪಾ, ಶ್ರೀ ಗೋಪಿಕಾ, ಅವಿನಾಶ್ ಮತ್ತು ಸುಜಾತ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಂಬರೀಶ್ ಅವರ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಅರುಳ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಲಾರೆನ್ಸ್ ಕಿಶೋರ್ ಸಂಕಲನ, ಪ್ರದೀಪ್ ದಿನೇಶ್ ಸಾಹಸ ನಿರ್ದೇಶನ, ಮಣಿ ಮೌಳಿ ಕಲಾ ನಿರ್ದೇಶನ ಹಾಗೂ ಗಣೇಶ್, ಶ್ರೀಧರ್, ಭೂಪತಿ ರಾಜ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿರುವುದಾಗಿ ಚಿತ್ರತಂಡ ತಿಳಿಸಿದೆ.

Exit mobile version